Top

ಹೊಸ ವರ್ಷಕ್ಕೆ ‘ವಿಜಯ್’ ಬಾಳಲ್ಲಿ ಹೊಸ ‘ದುನಿಯಾ’ ಆರಂಭ

ಹೊಸ ವರ್ಷಕ್ಕೆ ‘ವಿಜಯ್’ ಬಾಳಲ್ಲಿ ಹೊಸ ‘ದುನಿಯಾ’ ಆರಂಭ
X

ವಿವಾದಗಳ ಸುಳಿಯಲ್ಲಿ ಬೆಂದೋಗಿರೋ ನಟ ದುನಿಯಾ ವಿಜಿ, ಇದೀಗ ಆ ಎಲ್ಲಾ ವಿವಾದಗಳಿಂದ ಕೊಂಚ ನೆಮ್ಮದಿಯನ್ನ ಹುಡುಕುತ್ತಿದ್ದಾರೆ. ಅಷ್ಟೇ ಅಲ್ಲ, ಕಹಿಯ ದಿನಗಳನ್ನ ಈ ವರ್ಷಕ್ಕೇ ಬಿಟ್ಟು, ಹೊಸ ವರ್ಷಕ್ಕೆ ಹೊಸ ಜೀವನ ಆರಂಭಿಸೋ ಧಾವಂತದಲ್ಲಿದ್ದಾರೆ. ಹೋಮ್ ಬ್ಯಾನರ್ ದುನಿಯಾ ಟಾಕೀಸ್ ಬ್ಯಾನರ್​ನಡಿ ಪ್ಲಾನ್ ಮಾಡಿದ್ದ ಕುಸ್ತಿ ಸಿನಿಮಾನ ವಿಜಿ ಅಂಡ್ ಟೀಂ ಕೈಬಿಟ್ಟಾಗಿದೆ. ಹಾಗಾದ್ರೆ ವಿಜಿಯ ಮುಂದಿನ ಹೆಜ್ಜೆ ಏನು ಅನ್ನೋದ್ರ ಕುರಿತು ಹೊಸ ವರ್ಷಕ್ಕೆ ಜನವರಿ 1ರ ಬೆಳಗ್ಗೆ ಖುದ್ದು ವಿಜಿನೇ ಅನೌನ್ಸ್ ಮಾಡ್ತಾರಂತೆ. ಈ ಕುರಿತು ದುನಿಯಾ ವಿಜಿ ಫೇಸ್​ಬುಕ್​ನಲ್ಲಿ ಬರೆದುಕೊಂಡ ಲೆಟರ್ ಹೀಗಿದೆ ನೋಡಿ.

‘ಪ್ರತಿ ಸಲಾನೂ ಹೊಸವರ್ಷ ಬಂತು ಅಂದ್ರೆ ಇನ್ನೊಂದಷ್ಟು ಹೊಸ ತರಹ ಬದಲಾಗ್ಬೇಕು ಅನ್ಸುತ್ತೆ. 2019ರಲ್ಲಿ ಆ ತರಹ ನನ್ನಲ್ಲೂ ಒಂದು ಚೇಂಜ್ ತರೋಣ ಅಂತ ನಿರ್ಧಾರ ಮಾಡಿದ್ದೀನಿ. 'ಬದಲಾವಣೆ ಜಗದ ನಿಯಮ' ಎಂಬ ಮಾತಿದೆ. ಈ ನಿಮ್ ವಿಜಿ ದುನಿಯಾ ಕೂಡ ಅದಕ್ಕಿಂತ ಬೇರೇದೇನೂ ಅಲ್ಲ ಅಲ್ವ? ಈ ಚೇಂಜ್ ನಿಮಗೆ ಈ ಹಿಂದೆಂದಿಗಿಂತಲೂ ಇಷ್ಟಾಗುತ್ತೆ ಅಂತ ನಂಬಿದ್ದೀನಿ.

ಈ ನನ್ನ ಹೊಸ ಕನಸಿಗೆ ಜೊತೆ ಸೇರಿರೋರು ಡೈರೆಕ್ಟರ್ ರಾಘು ಶಿವಮೊಗ್ಗ. ನಿಜ, ಈ ಬದುಕು ಅನ್ನೋ ಕುಸ್ತಿಯಲ್ಲಿ ದಿನಾ ಹೊಸ ಪಟ್ಟು ಹಾಕ್ತಾ ಇದ್ರೇನೇ ಗೆಲ್ಲೋಕೆ ಸಾಧ್ಯ! ಹಾಗಾಗಿ ಒಂದ್ಕಡೆ 'ಕುಸ್ತಿ'ಯ ತಯಾರಿ ಅಖಾಡದ ಹೊರಗೆ ನಡೆದಿದೆ. ಅದೇ ಟೈಮಲ್ಲಿ ಅದೇ ರಾಘು ಜೊತೆ ಸೇರಿಕೊಂಡು ಹೊಸದೊಂದು ಪಾತ್ರದಲ್ಲಿ ನಿಮ್ಮೆದುರು ಬರ್ತಿದ್ದೇನೆ. ಈ ಬಾರಿ ನಾನು ಮಾಡ್ತಿರುವ ಪಾತ್ರ ನನ್ನ ಅಣ್ಣ ತಮ್ಮಂದಿರಂಥ ಅಭಿಮಾನಿಗಳಿಗೆ ಖಂಡಿತ ಇಷ್ಟವಾಗುತ್ತೆ ಅಂತ ಗೊತ್ತು. ಆದ್ರೆ ಇಲ್ಲಿ ಇರೋರು ಅಭಿಮಾನಿಗಳು ಮಾತ್ರ ಅಲ್ಲ ಅಂತಾನೂ ನನಗೆ ಗೊತ್ತು. ವಿಜಯ್ ಕೂಡ ಈ ತರಹ ಪಾತ್ರ ಮಾಡೋದ? ಅಂತ ಪ್ರಶ್ನೆ ಮಾಡಿದ್ರೂ ವಿಶೇಷ ಏನಿಲ್ಲ. ಆದ್ರೆ ಅದೇ ನೋಡಿ ಒಬ್ಬ ಕಲಾವಿದನ ಅದೃಷ್ಟ.!

ಒಟ್ಟಿನಲ್ಲಿ ಪರದೆ ಮೇಲೆ ಬರೋ‌ ನನ್ನ ಪಾತ್ರಗಳು ನಿಮ್ಮ ಅಭಿಮಾನ ಉಳಿಸುತ್ತೆ, ಬೆಳೆಸುತ್ತೆ ಎನ್ನೋದರಲ್ಲಿ‌ ಯಾವುದೇ ಸಂದೇಹ ಬೇಡ. ನನ್ನ ರೋಲ್ ಏನು ಅಂತ ತಿಳಿಯೋಕೆ ನಿಮಗೆಲ್ಲ ಅವಸರ ಇದೆ ಅಂತ ನನಗೂ ಗೊತ್ತು. ಆದ್ರೆ ಈ‌ ಎಲ್ಲ‌ ಸಂಗತಿಗಳನ್ನು ನಾನು‌ ಹೊಸ ವರ್ಷದ ಮೊದಲ ‌ದಿನ, ಅಂದರೆ ಜನವರಿ 1 ರಂದು ಬೆಳಿಗ್ಗೆ 9 ಗಂಟೆಗೆ ಹೇಳುವೆ.

ಅದುವರೆಗೆ ನಿಮ್ಮ ಪ್ರೀತಿ, ಅಭಿಮಾನ ಬೆಂಬಲ ಎಲ್ಲವೂ ಹೀಗೇನೇ ಇರಲಿ ಎನ್ನೋದೇ ಈ ನಿಮ್ಮ ವಿಜಯ್ ಪ್ರಾರ್ಥನೆ.’

Next Story

RELATED STORIES