Top

ಹೊಸ ವರ್ಷಕ್ಕೆ ಡಾ. ಶಿವಣ್ಣನ 'ಕವಚ' ಚೊಚ್ಚಲ ಕೊಡುಗೆ

ಹೊಸ ವರ್ಷಕ್ಕೆ ಡಾ. ಶಿವಣ್ಣನ ಕವಚ ಚೊಚ್ಚಲ ಕೊಡುಗೆ
X

ಹೊಸವರ್ಷಕ್ಕೆ ಶಿವಣ್ಣ ತಮ್ಮ ಅಭಿಮಾನಿಗಳಿಗೆ ಕವಚ ಚಿತ್ರವನ್ನು ಗಿಫ್ಟ್​ ಆಗಿ ನೀಡ್ತಿದ್ದಾರೆ. ಎಸ್​​. ಶಿವಣ್ಣ ಮೊದಲ ಬಾರಿ ಅಂಧನ ಪಾತ್ರದಲ್ಲಿ ನಟಿಸಿರೋ ಕವಚ ಚಿತ್ರ ಜನವರಿ ಮೊದಲ ವಾರ ಅಂದರೆ 2019 ಜನವರಿ 4ರಂದು ತೆರೆಗೆ ಬರೋದು ಬಹುತೇಕ ಕನ್ಫರ್ಮ್​​ ಆಗಿದೆ.

ಕರುನಾಡ ಚಕ್ರವರ್ತಿ ಶಿವಣ್ಣನಿಗೆ ಯಾವುದೇ ಪಾತ್ರಕೊಡಲಿ ನೀರು ಕುಡಿದಷ್ಟೇ ಸಲೀಸಾಗಿ ಮಾಡಿ ಮುಗಿಸುತ್ತಾರೆ. ಅದು ಮಾಸ್ ಇರಲಿ ಕ್ಲಾಸ್​ ಇರಲಿ ಶಿವಣ್ಣ ಸಲೀಸಾಗಿ ಜೀವ ತುಂಬುತ್ತಾರೆ. ಕವಚ ಚಿತ್ರವೂ ಅಷ್ಟೇ ಟಗರು ಶಿವನ ಸಿನಿ ಕೆರಿಯರ್​ನಲ್ಲಿ ಒಂದು ವಿಭಿನ್ನ ಪ್ರಯತ್ನ. ಈಗಾಗಲೇ ಟ್ರೈಲರ್ ನೋಡಿದವರು ಶಿವಣ್ಣನ ನಟನೆಗೆ ತಲೆಬಾಗಿದ್ದಾರೆ. ಹಾಗಾಗಿಯೇ ಕೇವಲ ದೊಡ್ಮನೆ ಅಭಿಮಾನಿ ಬಳಗ ಮಾತ್ರ ಅಲ್ಲ ಚಿತ್ರರಂಗ ಸೇರಿದಂತೆ ಪ್ರತಿಯೊಬ್ಬ ಸಿನಿ ಪ್ರೇಮಿಯೂ ಕವಚ ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರೆ ಎಂದರೇ ತಪ್ಪಾಗಲ್ಲ.

ಟೆಸ್ಟ್‌ ಮಾಡಬೇಡಿ ಸಾರ್, ಐ ಯಾಮ್ ಬ್ಲೈಂಡ್ ನಾಟ್ ವೀಕ್. ಹೀಗೆ ಟೀಸರ್​ನಲ್ಲಿ ಶಿವಣ್ಣ ಹೇಳಿರೋ ಡೈಲಾಗ್ ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ. ಕತೆಯ ನಾಯಕ ಅಂಧ. ಜಗತ್ತು ಕಾಣದಿದ್ದರೂ ಚಲನವಲನ, ದೈಹಿಕವಾಗಿ ಆತ ಬಲಶಾಲಿ.ಅಂಧನಾದರು ಸಿಕ್ಕಾಪಟ್ಟೆ ಪವರ್​ಫುಲ್ ರೋಲ್​ನಲ್ಲಿ ಶಿವಣ್ಣ ನಟಿಸಿರೋದು ಗೊತ್ತಾಗ್ತಿದೆ.

ಮಲೆಯಾಳಂನ ಒಪ್ಪಂ ಚಿತ್ರದ ರಿಮೇಕ್ ಆಗಿರೋ ಕವಚ ಚಿತ್ರಕ್ಕೆ ರಾಮ್ ಗೋಪಾಲ್ ವರ್ಮಾ ಶಿಷ್ಯ ಜಿವಿಆರ್ ವಾಸು ನಿರ್ದೇಶಕ. ಶಿವಣ್ಣ ಸುಮಾರು 14 ವರ್ಷಗಳ ನಂತರ ರಿಮೇಕ್ ಚಿತ್ರವೊಂದರಲ್ಲಿ ನಟಿಸುತ್ತಿದ್ದು. ಚಾಲೆಂಜಿಗ್​​ ಪಾತ್ರ ಇರೋದರಿಂದ ರಿಮೇಕ್​ ಆದರು ಯಾವುದೇ ಮಾತಿಲ್ಲ . ವಿಶೇಷ ಪ್ರೀತಿಯಿಂದ ಸಿನಿಮಾ ಮಾಡಿದ್ದಾರೆ ಶಿವಣ್ಣ. ಇಶಾ ಕೊಪ್ಪಿಕರ್ ಚಿತ್ರದ ನಾಯಕಿ. ಬಾಲ ನಟಿ ಮೀನಾಕ್ಷಿ ಶಿವಣ್ಣನ ಮಗಳ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ.

ಮಲೆನಾಡು, ಊಟಿ, ಬೆಂಗಳೂರು ಸುತ್ತಮುತ್ತ ಕವಚ ಚಿತ್ರದ ಚಿತ್ರೀಕರಣ ನಡೆದಿದ್ದು, ತಬಲ ನಾಣಿ, ರವಿ ಕಾಳೆ, ವಸಿಷ್ಠ ಸಿಂಹ ಸೇರಿದಂತೆ ಹಲವು ಕಲಾವಿದರ ದಂಡು ಕವಚ ಚಿತ್ರದಲ್ಲಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಸರ್ಜಾ ಮ್ಯೂಸಿಕ್​​ ಚಿತ್ರಕ್ಕಿದೆ. ಸುದೀಂದ್ರ ಚಿತ್ರ ನಿರ್ಮಾಣ ಮಾಡಿದ್ದು, ಈಗಾಗಲೇ ರಿಲೀಸ್​ ಆಗಿರೋ ಚಿತ್ರದ ತುಣುಕುಗಳಿಗೆ ಸಿಕ್ಕಿರೋ ರೆಸ್ಪಾನ್ಸ್​ ಹೊಸ ಬಝ್ ಕ್ರಿಯೇಟ್​ ಮಾಡಿದೆ.

ಅರ್ಜುನ್ ಜನ್ಯಾ ಮ್ಯೂಸಿಕ್​ನಲ್ಲಿ ಬಂದಿರೋ ಲಿರಿಕಲ್ ವೀಡಿಯೋ ಸಾಂಗ್ಸ್ ಹಿಟ್ ಆಗಿದೆ. ಒಂದಕ್ಕಿಂತ ಒಂದು ಅಭಿಮಾನಿಗಳ ಮನ ಗೆದ್ದಿದೆ. ಸಾಂಗ್ಸ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಮೊದಲ ಬಾರಿ ವಿಶಿಷ್ಟ ಪಾತ್ರದಲ್ಲಿ ನಟಿಸಿರೋದ್ರಿಂದ ಶಿವಣ್ಣನಿಗೂ ಈ ಚಿತ್ರದ ಮೇಲೆ ವಿಶೇಷ ಒಲವಿದೆ. ಜೊತೆಗೆ ಸಿನಿ ರಸಿಕರು ಕೂಡ ಶಿವಣ್ಣ ಅಭಿನಯದ ಕಮಾಲ್​ ನೋಡಲು ಕಾತುರರಾಗಿದ್ದು, ಹೊಸ ವರ್ಷದ ಮೊದಲ ವಾರ ಇದೆಲ್ಲದಕ್ಕೂ ಉತ್ತರ ಸಿಗಲಿದೆ.

Next Story

RELATED STORIES