ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೈನಾ- ಕಶ್ಯಪ್

ಹೈದ್ರಬಾದ್: ಅಚ್ಚರಿ  ಬೆಳವಣಿಗೆಯೊಂದರಲ್ಲಿ  ಭಾರತದ ಅಗ್ರ ಬ್ಯಾಡ್ಮಿಂಟನ್  ಆಟಗಾರ್ತಿ  ಸೈನಾ ನಹ್ವಾಲ್  ಮತ್ತು  ಅಗ್ರ ಆಟಗಾರ ಪಾರುಪಲ್ಲಿ  ಕಶ್ಯಪ್  ವಿವಾಹವಾಗಿದ್ದಾರೆ.

ಸೈನಾ ಮತ್ತು  ಪಾರುಪಲ್ಲಿ  ಕಶ್ಯಪ್  ವಿವಾಹ ಭಾನುವಾರ ನಿಗದಿಯಾಗಿತ್ತು.  ಆದರೆ  ಎರಡು  ದಿನ ಮೊದಲೇ  ವಿವಾಹವಾಗಿ  ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ.

ಮದುವೆಯಾದ ಫೋಟೋಗಳನ್ನು  ಸ್ವತಃ  ಸೈನಾ ಸೋಶಿಯಲ್ ಮೀಡಿಯಾದಲ್ಲಿ  ಪೋಸ್ಟ್  ಮಾಡಿದ್ದಾರೆ. ಅಭಿಮಾನಿಗಳು ನವ ಜೋಡಿಗೆ ಶುಭಾಶಯಗಳನ್ನ  ತಿಳಿಸಿದ್ದಾರೆ.