ಚಾಮುಂಡಿ ಬೆಟ್ಟಕ್ಕೆ ಹೋಗುವ ಮುನ್ನ ಈ ಸ್ಟೋರಿ ಓದಿ

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಇಂದು ಹೋಗುವ ಪ್ಲಾನ್ ಮಾಡಿದ್ರೆ ಅದನ್ನ ಕ್ಯಾನ್ಸಲ್ ಮಾಡಿದ್ರೆ ಒಳ್ಳೆಯದು. ಯಾಕಂದ್ರೆ ಇಂದು ಚಾಮುಂಡಿ ದೇವಿಯ ದರ್ಶನ ಸಿಗುವುದು ಕಷ್ಟ ಸಾಧ್ಯ.
ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಲ್ಲಿನ ನೌಕರರು ಅನಿರ್ಧಿಷ್ಟಾವಧಿ ಧರಣಿ ನಡೆಸಿದ್ದು, ದೇವಾಲಯದ 183 ಮಂದಿ ಖಾಯಂ ನೌಕರರು ಹಾಗೂ 37 ಮಂದಿ ಗುತ್ತಿಗೆ ನೌಕರರು ಪ್ರತಿಭಟನೆಗಿಳಿದಿದ್ದಾರೆ.
ಬೆಳಗ್ಗೆ 6.30ರಿಂದ 8ರವರೆಗೆ ಪೂಜೆ ಪುನಸ್ಕಾರ ಮುಗಿಸಿದ ಅರ್ಚಕರು, ಮಹಾಮಂಗಳಾರತಿ ಅರ್ಪಿಸಿ ಗರ್ಭಗುಡಿಯಿಂದ ಹೊರನಡೆದಿದ್ದಾರೆ.
ನೌಕರರು ದೇವಾಲಯದ ಮುಂದೆ ಸಾಂಕೇತಿಕವಾಗಿ ಕುಳಿತು ಕೆಲಸಕ್ಕೆ ಅಸಹಕಾರ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಕೌಂಟರ್, ಪ್ರಸಾದ ವಿತರಣೆ, ಸೇವಾ ಬುಕಿಂಗ್ ಕೌಂಟರ್, ಭಕ್ತಾದಿಗಳಿಗೆ ನೀಡುವ ಇತ್ಯಾದಿ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಸರ್ಕಾರದ ಪ್ರತಿಕ್ರಿಯೆಗೆ ಕಾಯುತ್ತಿದ್ದ ನೌಕರರು, ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಪ್ರತಿಭಟನೆ ಆರಂಭಿಸಿದ್ದಾರೆ.
7 ಪ್ರಮುಖ ಬೇಡಿಕೆ ಮುಂದಿಟ್ಟಿರುವ ದೇವಾಲಯದ ನೌಕರರು.
1. ಶೇ.30ರಷ್ಟು ವೇತನ ವೃದ್ದಿ ಹಾಗೂ ಹೆಚ್ಚುವರಿ ತುಟ್ಟಿಭತ್ಯೆ ಆದಾಗ ಮಂಜೂರು ಮಾಡಿಕೊಳ್ಳಲು ಖಾಯಂ ಆದೇಶ ಮಾಡುವ ಬಗ್ಗೆ.
2. ವಾರ್ಷಿಕ ಬೋನಸ್ ಪಾವತಿಸದಿರುವ ಬಗ್ಗೆ ಹಾಗೂ ಪ್ರತಿ ವರ್ಷ ಒಂದು ತಿಂಗಳ ಪೂರ್ತಿ ವೇತನವನ್ನ ಪಾವತಿಸಲು ಖಾಯಂ ಆದೇಶ ಮಾಡಿಕೊಡುವುದು.
3.ತಾತ್ಕಾಲಿಕ ನೌಕರರನ್ನು ಖಾಯಂಗೊಳಿಸಲು ತುರ್ತಾಗಿ ಆದೇಶ ಮಾಡುವ ಬಗ್ಗೆ.
4.ಅನುಕಂಪದ ಆಧಾರದ ಮೇಲೆ ಮೃತಪಟ್ಟ ನೌಕರರ ಕುಟುಂಬಸ್ಥರಿಗೆ ರಾಜ್ಯದ ಎಲ್ಲಾ ಇಲಾಖೆಯಲ್ಲಿ ನೌಕರಿ ನೀಡುವ ಬಗ್ಗೆ ತುರ್ತಾಗಿ ಆದೇಶ ಮಾಡುವ ಬಗ್ಗೆ.
5.ದೇವಾಲಯದ ನೌಕರರಿಗೆ ವೈದ್ಯಕೀಯ ಸೌಲಭ್ಯವನ್ನ ಮಂಜೂರು ಮಾಡುವ ಬಗ್ಗೆ ಆದೇಶ ಮಾಡುವುದು.
6.ಮೃತ ದೇವಾಲಯದ ನೌಕರರುಗಳ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವ ಬಗ್ಗೆ.
7. ನೌಕರರ ತಿಂಗಳ ವೇತವನ್ನ ಬೆಟ್ಟದ ಶಾಖೆಯ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ಜಮಾವಣೆ ಮಾಡುವ ಬಗ್ಗೆ.