Top

ಹೆಲ್ಮೆಟ್‌ನಿಂದ ಬಸ್ ಗಾಜು ಒಡೆದು ದರ್ಪ ತೋರಿದ ಪೊಲೀಸ್..!

ಹೆಲ್ಮೆಟ್‌ನಿಂದ ಬಸ್ ಗಾಜು ಒಡೆದು ದರ್ಪ ತೋರಿದ ಪೊಲೀಸ್..!
X

ಬೆಂಗಳೂರು: ಸಿಗ್ನಲ್‌ನಲ್ಲಿ ಟ್ರಾಫಿಕ್ ಜಾಮ್ ಆಗುತ್ತೆ ಎಂದು ಬಸ್ ಮುಂದೆ ನಿಲ್ಲಿಸಿದ್ದಕ್ಕೆ, ಹೆಲ್ಮೆಟ್‌ನಿಂದ ಕೆಎಸ್‌ಆರ್‌ಟಿಸಿ ಬಸ್ ಗ್ಲಾಸ್ ಪುಡಿ ಪುಡಿ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಗ್ಲಾಸ್ ಯಾಕೆ ಹೊಡೆದ್ರಿ ಸರ್ ಅಂದಿದ್ದಕ್ಕೆ, ಹೋಗಿ ಕಂಪ್ಲೇಂಟ್ ಕೊಡು ಆವಾಜ್ ಹಾಕಿದ್ದಾರಂತೆ ಮಡಿವಾಳ ಟ್ರಾಫಿಕ್ ಠಾಣೆ ಎ.ಎಸ್.ಐ ಗಿರಿಯಪ್ಪ .

ಅಲ್ಲದೇ ನಾವು ಕೈ ಹಾಕ್ತಿದ್ದಾಗೆ, ನಿಲ್ಸು ಅಂದ್ರೆ ನಿಲ್ಲಿಸ್ಬೇಕು, ಟ್ರಾಫಿಕ್ ಜಾಮ್ ಆದ್ರೆ ಆಗ್ಲಿ ಅಂತಾ ಹೇಳಿ ದರ್ಪ ತೋರಿದ್ದು, ಮಡಿವಾಳ ಸಿಗ್ನಲ್ ಬಳಿ ಈ ಘಟನೆ ನಡೆದಿದೆ.

ರಸ್ತೆಯಲ್ಲಿ "BUSES NOT ALLOWED " ಅನ್ನೊ ನಾಮಫಲಕ ಇರದ ಹಿನ್ನಲೆ, ಡ್ರೈವರ್ ಬಸ್ ಚಾಲನೆ ಮಾಡಿಕೊಂಡು ಬಂದಿದ್ದು, ಈ ವೇಳೆ ಮಡಿವಾಳ ಟ್ರಾಫಿಕ್ ಪೊಲೀಸರು ಬಸ್ ನಿಲ್ಲಿಸಲು ಹೇಳಿದ್ದಾರೆ. ಹಿಂದಿನ ವಾಹನಗಳು ಹಾರ್ನ್ ಮಾಡಿದ ಕಾರಣ ಬಸ್ ಡ್ರೈವರ್ ಸ್ವಲ್ಪ ಮುಂದೆ ಹೋಗಿ ಬಸ್ ನಿಲ್ಲಿಸಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಪೊಲೀಸರು ನಾವು ಕೈ ಅಡ್ಡ ಹಾಕಿದ್ರು ಡ್ರೈವ್ ಮಾಡ್ತಿಯ ಅಂತ ಬಸ್ ಗ್ಲಾಸ್ ಒಡೆದಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್ ಮಡಿವಾಳ ಮಾರ್ಗವಾಗಿ ಕಲಾಸಿಪಾಳ್ಯಕ್ಕೆ ಬರುತ್ತಿದ್ದಾಗ ಈ ಘಟನೆ ನಡೆದಿದ್ದು, ಕಲಾಸಿಪಾಳ್ಯ ಬಸ್ ಡಿಪೋದಲ್ಲಿ ಡ್ರೈವರ್ ಸೆಲ್ಫಿ ವೀಡಿಯೋ ಮಾಡಿ, ನಡೆದ ಘಟನೆಯ ಬಗ್ಗೆ ವಿವರಣೆ ನೀಡಿದ್ದು, ಖಾಕಿ ದರ್ಪದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Next Story

RELATED STORIES