Top

ಸ್ಟಾರ್ ನಟಿಯೊಬ್ಬಳು ಕಲುಷಿತ ಕೆರೆಯಲ್ಲಿ ಫೋಟೋಶೂಟ್

ಸ್ಟಾರ್ ನಟಿಯೊಬ್ಬಳು ಕಲುಷಿತ ಕೆರೆಯಲ್ಲಿ ಫೋಟೋಶೂಟ್
X

ನೈಮಲ್ಯತೆ ಕಳೆದುಕೊಂಡಿರುವ ಬೆಂಗಳೂರಿನ ಬೆಳೆಂದೂರು ಕೆರೆಯಲ್ಲಿ ದಕ್ಷಿಣ ಭಾರತದ ಸ್ಟಾರ್ ನಟಿಯೊಬ್ಬರು ಪೋಟೋ ಶೂಟ್ ಮಾಡಿ ಸರ್ಕಾರಕ್ಕೆ ಸಂದೇಶವನ್ನು ರವಾನೆ ಮಾಡಿದ್ದಾರೆ.

ಇತ್ತಿಚ್ಚಿಗಷ್ಟೇ ಸಕತ್ ಸುದ್ದಿಯಲ್ಲಿದ್ದ ನಟಿ ರಶ್ಮಿಕಾ ಮಂದಣ್ಣ ಬೆಳೆಂದೂರು ಕೆರೆಯಲ್ಲಿ ಅಂಡರ್ ವಾಟರ್ ಫೋಟೋ ಶೂಟ್ ಮಾಡಿ ಕೆರೆ ನೈಮಲ್ಯತೆ ಕಾಪಾಡುವುದು ಸರ್ಕಾರದ ಕರ್ತವ್ಯ ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದಿಕೊಂಡಿದ್ದಾರೆ.

ಸಿಲಿಕಾನ್ ಸಿಟಿಯ ಬೆಳ್ಳಂದೂರು ಕೆರೆ ಮಾಲಿನ್ಯಕ್ಕೆ ಹೆಸರುವಾಸಿ ಎನ್ನುವಾಗಿದೆ. ಈ ಪ್ರದೇಶದ ಹಲವು ಕಾರ್ಖಾನೆಗಳ ರಾಸಾಯನಿಕ ಕಲುಷಿತ ನೀರು ಹಾಗು ಇತರೇ ತ್ಯಾಜ್ಯಗಳು ಬೆಳ್ಳಂದೂರು ಕೆರೆಗೆ ಬಂದು ಸೇರುವುದರಿಂದ ಕೆರೆಯ ನೀರು ಹೆಚ್ಚು ಮಲಿನವಾಗಿದೆ. ಆದರಿಂದ ಜನರಲ್ಲಿ ಜಲ ಮಾಲಿನ್ಯದ ಕುರಿತು ಜಾಗೃತಿ ಮೂಡಿಸಲು ನಟಿ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಯಲ್ಲಿ ಅಂಡರ್ವಾಟರ್ ಫೋಟೋಶೂಟ್ ಮಾಡಿಸಿದ್ದಾರೆ.

ಫೋಟೋಶೂಟ್ ಗಾಗಿ ಬಂದಿದ್ದ ರಶ್ಮಿಕಾ ಅವರ ಫೋಟೋಶೂಟ್ ಅನ್ನು ಸನ್ಮತಿ ಡಿ. ಪ್ರಸಾದ್ ಅವರು ನಿರ್ದೇಶಿಸಿದ್ದಾರೆ. ಅಂಡರ್ ವಾಟರ್ ಫೋಟೋಶೂಟ್ ಮಾಡಿಸುವ ಮೊದಲು ನನಗೆ ಬೆಳ್ಳಂದೂರು ಕೆರೆಯ ಪರಿಸ್ಥಿತಿ ತಿಳಿದಿರಲಿಲ್ಲ. ಈಗ ಬೆಳ್ಳಂದೂರು ಕೆರೆ ಇರುವ ಸ್ಥಿತಿಗೆ ಮುಂದೆ ಬೇರೆ ಕೆರೆಗಳು ಬರಬಹುದು ಎಂದು ರಶ್ಮಿಕಾ ತಮ್ಮ ಫೋಟೋ ಜೊತೆಗೆ ಟ್ವೀಟ್ ಮಾಡಿದ್ದಾರೆ. ಮತ್ತು ತಂಡದವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಇನ್ನೂ ಇದಕ್ಕೆ ಸ್ಪಂದಿಸಿರುವ ರಾಜ್ಯದ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿಯವರು ಈ ವರ್ಷ ಮುಗಿಯುವಷ್ಟರಲ್ಲಿ ಕೆರೆಯ ನೈಮಲ್ಯತೆ ಕಾಪಾಡುವುದಾಗಿ ಭರವಸೆಯನ್ನು ನೀಡಿದ್ದಾರೆ.

Next Story

RELATED STORIES