Top

ರಫೆಲ್ ಹಗರಣ ಪ್ರಕರಣ: ಕೇಂದ್ರ ಸರ್ಕಾರಕ್ಕೆ ಬಿಗ್ ರಿಲೀಫ್

ರಫೆಲ್ ಹಗರಣ ಪ್ರಕರಣ: ಕೇಂದ್ರ ಸರ್ಕಾರಕ್ಕೆ ಬಿಗ್ ರಿಲೀಫ್
X

ನವದೆಹಲಿ: ರಫೆಲ್ ಹಗರಣ ಪ್ರಕರಣ ಸಂಬಂಧ ಕೇಂದ್ರ ಸರ್ಕಾರ ಮಹತ್ವದ ತೀರ್ಪು ನೀಡಿದ್ದು, ಕೇಂದ್ರ ಸರ್ಕಾರಕ್ಕೆ ಬಿಗ್ ರಿಲೀಫ್ ಸಿಕ್ಕಿದೆ.

ರಫೆಲ್ ಯುದ್ಧ ವಿಮಾನದಲ್ಲಿ ಅವ್ಯವಹಾರ ಆರೋಪ ಹಿನ್ನೆಲೆ, ರಫೆಲ್ ಒಪ್ಪಂದ ಸಂಬಂಧ ಸಲ್ಲಿಸಿದ್ದ ಎಲ್ಲಾ ಅರ್ಜಿಗಳು ವಜಾ ಆಗಿದ್ದು, ಈ ಪ್ರಕರಣದ ತನಿಖೆಗೆ ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ರಫೇಲ್ ಯುದ್ಧ ವಿಮಾನ ನಮ್ಮ ಅಗತ್ಯ ಮತ್ತು ಅವಶ್ಯಕತೆಯಾಗಿದೆ ಎಂದ ಸುಪ್ರೀಂಕೋರ್ಟ್, ರಕ್ಷಣಾ ಇಲಾಖೆಯ ವಿವಾದವನ್ನ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದಿದೆ.

ಏನಿದು ರಫೆಲ್ ವಿವಾದ..?

ರಫೆಲ್ ಯುದ್ಧ ವಿಮಾನ ಬಲಿಷ್ಠ ಯುದ್ಧ ವಿಮಾನವಾಗಿದ್ದು, ಈ ವಿಮಾನ ಖರೀದಿ ಕೇಂದ್ರ ಸರ್ಕಾರಕ್ಕೆ ಪ್ರತಿಷ್ಠೆಯ ಮಾತಾಗಿತ್ತು. ಆದರೆ ಇದರ ಖರೀದಿಯಲ್ಲಿ ಸುಮಾರು 3 ಸಾವಿರ ಕೋಟಿ ರೂಪಾಯಿ ಅಕ್ರಮವಾಗಿದೆ ಎಂಬ ಮಾತು ಕೇಳಿಬಂದಿತ್ತು.

Next Story

RELATED STORIES