ಸಿಎಂ ಹುಟ್ಟುಹಬ್ಬಕ್ಕೆ ಪುತ್ರ ನಿಖಿಲ್ ಕೊಡ್ತಿದ್ದಾರೆ ಸ್ಪೆಷಲ್ ಗಿಫ್ಟ್

ಸ್ಯಾಂಡಲ್ವುಡ್ನ ಮೋಸ್ಟ್ ಎಕ್ಸ್ಪೆಕ್ಡೆಡ್ ಸಿನಿಮಾ ಸೀತಾರಾಮ ಕಲ್ಯಾಣ. ಈಗಾಗ್ಲೇ ಸೀತಾರಾಮ ಜೋಡಿಯ ರಾಜಾ-ರಾಣಿ ಹಾಡು ರಿಲೀಸ್ ಆಗಿ ಸದ್ದು ಮಾಡ್ತಿದ್ದು, ಇದೀಗ ಮತ್ತೊಂದು ಹಾಡನ್ನು ರಿಲೀಸ್ ಮಾಡೋ ಪ್ಲಾನ್ನಲ್ಲಿದೆ ಚಿತ್ರತಂಡ.
ಸೀತಾರಾಮ ಕಲ್ಯಾಣ. ಸ್ಯಾಂಡಲ್ವುಡ್ನಲ್ಲಿ ಎಕ್ಸ್ ಪೆಕ್ಟೇಶನ್ ಹುಟ್ಟುಹಾಕಿರೋ ಸಿನಿಮಾ. ಬಹುದೊಡ್ಡ ತಾರಾಗಣವಿರುವ ಔಟ್ ಅಂಡ್ ಔಟ್ ಫ್ಯಾಮಿಲಿ ಎಂಟರ್ಟೈನರ್. ಈಗಾಗ್ಲೇ ಚಿತ್ರದ ಟೀಸರ್ ಕೂಡ ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಂಡಿದ್ದು, ಸಿನಿಮಾ ನೋಡೋ ಕುತೂಹಲ ಹೆಚ್ಚಿಸಿದೆ.
ಸೀತಾರಾಮ ಕಲ್ಯಾಣ ಚಿತ್ರದ ಟೀಸರ್ ಮಾತ್ರವಲ್ಲದೇ, ರಾಜ ರಾಣಿ ಸಾಂಗ್ ಕೂಡ ನಂಬರ್ ಒನ್ ಟ್ರೆಂಡಿಂಗ್ನಲ್ಲಿತ್ತು. ಈ ಮೆಲೋಡಿ ಹಾಡಿಗೆ ಸಿನಿಪ್ರಿಯರು ಫಿದಾ ಆಗಿದರು. ಸಾಂಗ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಎಲ್ಲರು ಬಾಯಲ್ಲೂ ಈ ಹಾಡು ಕೇಳಬರ್ತಿತ್ತು. ಅನೂಪ್ ರುಬಿನ್ ಮ್ಯೂಸಿಕ್, ಅರ್ಮಾನ್ ಮಲ್ಲಿಕ್ ವಾಯ್ಸ್ ಸಖತ್ ಮೋಡಿ ಮಾಡಿತ್ತು.
ಸೀತಾರಾಮ ಕಲ್ಯಾಣ ಫ್ಯಾಮಿಲಿ ಎಂಟರ್ಟೈನರ್ ಚಿತ್ರ ಆಗಿರುವುದರಿಂದ, ಬಹು ದೊಡ್ಡ ಸ್ಟಾರ್ ಕಾಸ್ಟ್ ಈ ಚಿತ್ರದಲ್ಲಿದೆ. ಸುಮಾರು 130 ಕ್ಕೂ ಹೆಚ್ಚು ಕಲಾವಿದರು ಸೀತಾರಾಮ ಕಲ್ಯಾಣಕ್ಕೆ ಸಾಕ್ಷಿಯಾಗಿದ್ದಾರೆ. ನಿಖಿಲ್ ಕುಮಾರ್, ರಚಿತಾ ರಾಮ್, ಸೇರಿದಂತೆ ಭಾಗ್ಯಶ್ರೀ, ಮಧುಬಾಲಾ, ಶರತ್ ಕುಮಾರ್, ಆದಿತ್ಯ ಮೆನನ್, ಕಾಮಿಡಿ ಕಿಲಾಡಿಗಳಾದ ನಯನ, ಶಿವರಾಜ್ ಕೆ.ಆರ್ ಪೇಟೆ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಸಿಎಂ ಹುಟ್ಟುಹಬ್ಬಕ್ಕೆ ಪುತ್ರ ನಿಖಿಲ್ ಕೊಡ್ತಿದ್ದಾರೆ ಸ್ಪೆಷಲ್ ಗಿಫ್ಟ್
ಸಂಕ್ರಾಂತಿ ಸಂಭ್ರಮದಲ್ಲಿ ಸೀತಾರಾಮ ಕಲ್ಯಾಣಕ್ಕೆ ಮುಹೂರ್ತ..!
ಸೀತಾರಾಮ ಕಲ್ಯಾಣ ಚಿತ್ರದ ಎರಡನೇ ಹಾಡು ಬಿಡುಗಡೆಗೆ ಸಿದ್ಧವಾಗಿದೆ. ಸಿ.ಎಂ ಕುಮಾರಸ್ವಾಮಿಯವರ ಹುಟ್ಟುಹಬ್ಬದ ದಿನ ಎಂದರೇ ಡಿಸೆಂಬರ್ 16 ಕ್ಕೆ ‘ಹೋ ಜಾನು. ಹೋ ಜಾನೂ’ ಅಂತ ಶುರುವಾಗೋ ಹೊಸ ಸಾಂಗ್ ರಿಲೀಸ್ ಆಗ್ತಿದೆ. ನಿಖಿಲ್ ಕುಮಾರ್ ತಂದೆಯ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಈ ಮೂಲಕ ಭರ್ಜರಿ ಗಿಫ್ಟ್ ಕೊಡ್ತಿದ್ದಾರೆ. ಸಿಎಂ ಹುಟ್ಟುಹಬ್ಬಕ್ಕೆ ರಿಲೀಸ್ ಆಗ್ತಿರೋ ಈ ಹಾಡು ಕೂಡ ಮೆಲೋಡಿ ಸಾಂಗ್ ಆಗಿದ್ದು, ಸಂಚಿತ್ ಹೆಗ್ಡೆ ವಾಯ್ಸ್ನಲ್ಲಿ, ಕೆ. ಕಲ್ಯಾಣ್ ಸಾಹಿತ್ಯದಲ್ಲಿ ಮೂಡಿಬರ್ತಿರೋದು ವಿಶೇಷ. ಚಿತ್ರದ ಎಲ್ಲಾ ಹಾಡುಗಳು ಲಹರಿ ಆಡಿಯೋ ಮೂಲಕ ಬಿಡುಗಡೆ ಆಗಲಿದೆ.
ಸದ್ಯ ಚಿತ್ರದ ಟ್ರೇಲರ್ ಮತ್ತು ಸಾಂಗ್ಸ್ ಸಖತ್ ಸುದ್ದಿ ಮಾಡ್ತಿರುವಾಗ್ಲೇ ಚಿತ್ರತಂಡ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಸೀತಾರಾಮ ಕಲ್ಯಾಣ ಚಿತ್ರದ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದ್ದು, ಜನವರಿ 11ಕ್ಕೆ ಸಂಕಾಂತ್ರಿ ಹಬ್ಬದ ಸಂಭ್ರಮದಲ್ಲಿ ತೆರೆಮೇಲೆ ಸೀತಾರಾಮ ಕಲ್ಯಾಣ ನಡೆಯೋದು ಬಹುತೇಕ ಪಕ್ಕಾ ಅನ್ನಲಾಗ್ತಿದೆ.