ಮಧ್ಯಪ್ರದೇಶ ನೂತನ ಸಿಎಂ ಆದ ಕಮಲ್ನಾಥ್

X
TV5 Kannada14 Dec 2018 1:52 AM GMT
ಭೋಪಾಲ್: ಕಳೆದೆರಡು ದಿನದಿಂದ ಸಾಕಷ್ಟು ಕುತೂಹಲ ಮೂಡಿಸಿದ್ದ ಮಧ್ಯಪ್ರದೇಶದ ಸಿಎಂ ಪಟ್ಟ ಗೊಂದಲಕ್ಕೆ ತೆರೆ ಬಿದ್ದಿದ್ದು, ನೂತನ ಮುಖ್ಯಮಂತ್ರಿಯಾಗಿ ಕಮಲ್ ನಾಥ್ ಆಯ್ಕೆಯಾಗಿದ್ದಾರೆ.
ಪಕ್ಷದ ಗೆಲುವಿನಲ್ಲಿ ಬಹಳ ಶ್ರಮ ವಹಿಸಿದ್ದ ಹಿರಿಯ ನಾಯಕ ಕಮಲ್ನಾಥ್ ಹಾಗೂ ಯುವ ನಾಯಕ ಜ್ಯೋತಿರಾಧಿತ್ಯ ಸಿಂಧ್ಯಾ ಸಿಎಂ ಪಟ್ಟದ ರೇಸ್ನಲ್ಲಿದ್ದರು.ಈ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಂಡ ಕಾಂಗ್ರೆಸ್ ಹೈಕಮಾಂಡ್, ಎಲ್ಲ ಗೊಂದಲ ಬಗೆಹರಿಸಿ, ಕಮಲ್ನಾಥ್ರನ್ನ ಸಿಎಂ ಆಗಿ ಘೋಷಣೆ ಮಾಡಿದೆ.
ಭಾರತೀಯ ಜನತಾ ಪಾರ್ಟಿಯ ಬಿಗಿ ಹಿಡಿತ ಹೊಂದಿದ್ದ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ಸುಲಭದ ಮಾತಾಗಿರಲಿಲ್ಲ. ಇಂತಹ ಅಸಾಧ್ಯವನ್ನು ಸಾಧ್ಯವಾಗಿಸಿ ಗೆಲುವಿನ ನಗೆ ಬೀರಿದ್ದಾರೆ ಕಮಲ್ನಾಥ್. ರಾಹುಲ್ ಗಾಂಧಿ ನೀಡಿದ ಕೆಲಸವನ್ನು ಸವಾಲಾಗಿ ಸ್ವೀಕರಿಸಿ ಕೈ ಪಾಳಯವನ್ನು ಅಧಿಕಾರದ ಕೇಂದ್ರಕ್ಕೆ ಕರೆ ತಂದಿದ್ದಾರೆ.
Next Story