Top

ವಿಷ ಪ್ರಸಾದ ಸೇವಿಸಿ ಭಕ್ತರ ಸಾವು 10 ಕ್ಕೆ ಏರಿಕೆ

ವಿಷ ಪ್ರಸಾದ ಸೇವಿಸಿ  ಭಕ್ತರ ಸಾವು 10 ಕ್ಕೆ ಏರಿಕೆ
X

ದೇವರ ಪ್ರಸಾದ ಸೇವಿಸಿ ಭಕ್ತರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ಪ್ರಕರಣದಲ್ಲಿ ಇದೀಗ ಸಾವಿನ ಸಂಖ್ಯೆ 10 ಕ್ಕೆ ಏರಿಕೆಯಾಗಿದ್ದು ಪ್ರಾಣಿ-ಪಕ್ಷಿಗಳು ಕೂಡ ಅದೇ ಆಹಾರವನ್ನು ಸೇವಿಸಿ ಸಾವನಪ್ಪಿದ್ದಾವೆ.

ಗ್ರಾಮದ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದಲ್ಲಿ ಘಟನೆ ಸಂಭವಿಸಿದ್ದು, ವಿಶೇಷ ಪೂಜೆ ಇದ್ದ ಕಾರಣ ಭಕ್ತರೆಲ್ಲರು ಪ್ರಸಾದವನ್ನು ಸ್ವೀಕರಿಸಿದರು. ಕೆಲವೇ ಕ್ಷಣದಲ್ಲಿ ಕಾಣಿಸಿಕೊಂಡ ವಾಂತಿ ಬೇದಿಯಿಂದ ಪ್ರಸಾದ ಸೇವಿಸಿದ ಭಕ್ತರು ಅಸ್ವಸ್ಥಗೊಂಡರು.

ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಅಸ್ವಸ್ಥಗೊಂಡವರು ದಾಖಲಾಗಿದ್ದು ಇಬ್ಬರು ಇಂದು ಸಂಜೆ ಸಾವನ್ನಪ್ಪಿರುವುದು ತಿಳಿದುಬಂದಿದೆ. ಜೆಎಸ್​ಎಸ್ ಆಸ್ಪತ್ರೆಯಲ್ಲೂ ಇಬ್ಬರು ಸಾವನ್ನಪ್ಪಿದ್ದಾರೆ. ಕೆಆರ್ ಆಸ್ಪತ್ರೆಯಲ್ಲಿ ಈಗಾಗಲೇ 25ಕ್ಕೂ ಹೆಚ್ಚು ಮಂದಿ ದಾಖಲಾಗಿದ್ದು. ಇಲ್ಲಿ 10 ಜನರು ಗಂಭೀರ ಸ್ಥಿತಿಯಲ್ಲಿದ್ಧಾರೆನ್ನಲಾಗಿದೆ.

ಚಿಕಿತ್ಸೆ ಕೊಡಲು ಕೆ.ಆರ್. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗಂಭೀರ ಸ್ಥಿತಿಯಲ್ಲಿರುವ 10 ಜನರು ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಜೆಎಸ್​ಎಸ್ ಆಸ್ಪತ್ರೆಯಲ್ಲಿ 6 ಮಂದಿಯನ್ನು ದಾಖಲಿಸಲಾಗಿದ್ದು, ಅವರಲ್ಲಿ ಇಬ್ಬರು ಅಸುನೀಗಿದ್ದಾರೆ. ಸ್ಥಳೀಯ ಆಸ್ಪತ್ರೆಗಳಲ್ಲಿ ನಾಲ್ವರು ಸಾವನ್ನಪ್ಪಿದ್ಧಾರೆ. ಹೀಗೆ ಒಟ್ಟು 8 ಮಂದಿ ಪ್ರಾಣ ಕಳೆದುಕೊಂಡಂತಾಗಿದೆ.

ಹನೂರು ಬಳಿಯ ಕಾಮಗೆರೆ ಆಸ್ಪತ್ರೆಗೆ 50 ಮಂದಿ, ಕೊಳ್ಳೇಗಾಲ ಆಸ್ಪತ್ರೆಗೆ 90 ಮಂದಿಯನ್ನು ದಾಖಲಿಸಲಾಗಿದೆ. ಹನೂರು ಆಸ್ಪತ್ರೆಯಲ್ಲಿ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಪ್ರಸಾದ ಸ್ವೀಕರಿಸಿದ ಒಟ್ಟು 40 ಜನರಿಗೆ ವಾಂತಿ-ಬೇಧಿ ಆಗಿದೆ.

ಅಸ್ವಸ್ಥರಲ್ಲಿ ಸುಮಾರು 25 ಮಂದಿ ಅಯ್ಯಪ್ಪ ಮಾಲೇದಾರಿಗಳು ಎನ್ನಲಾಗಿದೆ. ಚಾಮರಾಜನಗರ ಜಿಲ್ಲೆಯ ಬಿದರಹಳ್ಳಿ ಗ್ರಾಮದ 25 ಮಂದಿ ಪ್ರಸಾದ ಸೇವಿಸಿದ ಒಂದು ಗಂಟೆಯ ನಂತರ ಅಸ್ವಸ್ಥರಾದರು ಎಂದು ತಿಳಿದುಬಂದಿದೆ

ಮೃತ ದುರ್ದೈವಿಗಳಲ್ಲಿ ಗೋಪಿಯಮ್ಮ (35), ಶಾಂತಾ (20), ಪಾಪಣ್ಣ (50), ಅನಿಲ್​(12) ಹಾಗೂ ಅನಿತಾ ಅವರೂ ಇದ್ದಾರೆ. ಅನಿತಾ ಅವರು ದೇವಸ್ಥಾನದ ಅರ್ಚಕರ ಮಗಳೆನ್ನಲಾಗಿದೆ. ಈ ಘಟನೆಯಲ್ಲಿ 90 ಜನರು ಅಸ್ವಸ್ಥಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.ಇನ್ನೂ ಎಲೆಯಲ್ಲಿ ಅಳಿದುಳಿದ ಅನ್ನ ತಿಂದು 60 ಕಾಗೆಗಳೂ ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ.

Next Story

RELATED STORIES