100 ರೂ. ನಾಣ್ಯದಲ್ಲಿರಲಿದೆ ವಾಜಪೇಯಿಯವರ ಭಾವಚಿತ್ರ..!

100 ರೂ.ನಾಣ್ಯವನ್ನ ಹೊಸದಾಗಿ ಬಿಡುಗಡೆ ಮಾಡುತ್ತಿದ್ದು, ಅದರಲ್ಲಿ ಮಾಜಿ ಪ್ರಧಾನಮಂತ್ರಿ ದಿ.ಅಟಲ್ ಬಿಹಾರಿ ವಾಜಪೇಯಿಯವರ ಭಾವಚಿತ್ರವಿರುವುದಾಗಿ ಅಧಿಕೃತವಾಗಿ ಹೇಳಿಕೆ ನೀಡಲಾಗಿದೆ.
ಈ ನಾಣ್ಯ 35 ಗ್ರಾಂನದ್ದಾಗಿದ್ದು, ನಾಣ್ಯದ ಒಂದು ಭಾಗದಲ್ಲಿ ವಾಜಪೇಯಿಯರ ಭಾವಚಿತ್ರದೊಂದಿಗೆ ದೇವನಾಗರಿ ಮತ್ತು ಇಂಗ್ಲೀಷ್ನಲ್ಲಿ ಅಟಲ್ ಹೆಸರು ಬರೆಯಲಾಗಿದೆ. ಅಲ್ಲದೇ ಅವರ ಜನನ ಮತ್ತು ಮರಣದ ಇಸವಿಯನ್ನೂ ಕೂಡ ನಮೂದಿಸಲಾಗಿದೆಯಂತೆ.
ನಾಣ್ಯದ ಇನ್ನೊಂದು ಭಾಗದಲ್ಲಿ ಅಶೋಕ ಸ್ಥಂಬವಿದ್ದು, ದೇವನಾಗರಿ ಲಿಪಿಯಲ್ಲಿ ಸತ್ಯಮೇಯ ಜಯತೆ ಎಂಬ ವಾಕ್ಯ ನಮೂದಿಸಲಾಗಿದೆ. ಇದರ ಅಕ್ಕ-ಪಕ್ಕದಲ್ಲಿ ಭಾರತ ಮತ್ತು ಇಂಡಿಯಾ ಎಂದು ಹೆಸರು ಬರೆಯಲಾಗಿದೆ. ಇದರ ಕೆಳಭಾಗದಲ್ಲಿ 100 ರೂಪಾಯಿ ನಾಣ್ಯವೆಂದು ನಮೂದಿಸಲಾಗಿದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇದೇ ಆಗಸ್ಟ್ 16ರಂದು ತಮ್ಮ 93ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಇವರ ಗೌರವಾರ್ಥವಾಗಿ, ಛತ್ತೀಸ್ಘಡದ ನಯಾ ರಾಯ್ಪುರ್ ಎಂಬ ಸ್ಥಳಕ್ಕೆ ಅಟಲ್ ನಗರ್ ಎಂದು ಮರುನಾಮಕರಣ ಮಾಡಲಾಯಿತು. ಉತ್ತರಾಖಂಡ ಸರ್ಕಾರ ಡೆಹ್ರಾಡೂನ್ ವಿಮಾನ ನಿಲ್ದಾಣಕ್ಕೆ ಅಟಲ್ ಹೆಸರಿಡಬೇಕೆಂದು ತೀರ್ಮಾನಿಸಿದೆ. ಅಲ್ಲದೇ ಲಖನೌನ ಹಜರತ್ ಗಂಜ್ ಚೌರಾಹಾವನ್ನು ಅಟಲ್ ಚೌಕ್ ಎಂದು ಮರುನಾಮಕರಣ ಮಾಡಲಾಗಿದೆ.