Top

ವೈವಾಹಿಕ ಜೀವನಕ್ಕೆ ಕಾಲಿಟ್ಟ ದಿಗಂತ್‌ಗೆ ಸಿಕ್ತಿದೆ 'ಫಾರ್ಚೂನರ್' ಗಿಫ್ಟ್

ವೈವಾಹಿಕ ಜೀವನಕ್ಕೆ ಕಾಲಿಟ್ಟ ದಿಗಂತ್‌ಗೆ ಸಿಕ್ತಿದೆ ಫಾರ್ಚೂನರ್ ಗಿಫ್ಟ್
X

ಸ್ಯಾಂಡಲ್​ವುಡ್​ನ ಕ್ಯೂಟ್ ಅಂಡ್ ಮೋಸ್ಟ್ ಬ್ಯೂಟಿಫುಲ್ ಪಾರಿಜಾತ ಜೋಡಿ ಹೊಸ ಬಾಳಿಗೆ ಕಾಲಿಟ್ಟಿದೆ. ಶಾಸ್ತ್ರೋಕ್ತ ಕಲ್ಯಾಣೋತ್ಸವದ ಸಂಭ್ರಮದಲ್ಲಿರೋ ದಿಗಂತ್​ಗೆ ಫಾರ್ಚೂನರ್ ಗಿಫ್ಟ್ ಸಿಗ್ತಿದೆ. ಇಷ್ಟಕ್ಕೂ ಆ ಗಿಫ್ಟ್ ಕೊಡ್ತಿರೋದ್ಯಾರು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ದಿಗಂತ್ ಬಾಳಿಗೆ ಮನಸಾರೆ ಕಾಲಿಟ್ಟ ಐಂದ್ರಿತಾ ರೇ..!

9 ವರ್ಷದ ಸ್ನೇಹ- ಪ್ರೀತಿಗೆ ಸಾಕ್ಷಿಯಾಯ್ತು ಸಪ್ತಪದಿ

ಮನಸಾರೆ ಚಿತ್ರದ ಮೂಲಕ ಒಬ್ಬರಿಗೊಬ್ಬರು ಮನಸ್ಸು ಕೊಟ್ಟು, ಹೆಚ್ಚೂ ಕಡಿಮೆ 9 ವರ್ಷದ ಪ್ರೀತಿ ಸ್ನೇಹಕ್ಕೆ ಸಪ್ತಪದಿ ಸಾಕ್ಷಿಯಾಗಿದೆ. ಕನ್ನಡ ಚಿತ್ರರಂಗದ ಲವ್ ಬರ್ಡ್ಸ್ ಅಂತ್ಲೇ ಖ್ಯಾತಿ ಪಡೆದಿದ್ದ ದೂದ್​ಪೇಡಾ ದಿಗಂತ್ ಹಾಗೂ ಗ್ಲಾಮರ್ ಡಾಲ್ ಐಂದ್ರಿತಾ ರೇ ಸಪ್ತಪದಿ ತುಳಿಯೋ ಮೂಲಕ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

ಈ ಮುದ್ದಾದ ಪಾರಿಜಾತ ಜೋಡಿ, ಸಿನಿಮಾ ಹಾಗೂ ಸಿನಿಮೇತರವಾಗಿಯೂ ಪರಸ್ಪರ ಒಬ್ಬರನ್ನೊಬ್ಬರು ಅರಿತುಕೊಂಡಿದ್ದರು. ಖಾಸಗಿ ಕಾರ್ಯಕ್ರಮಗಳಲ್ಲೂ ಒಟ್ಟೊಟ್ಟಿಗೆ ಕಾಣಿಸಿಕೊಳ್ತಿದ್ರು. ಆದ್ರೀಗ ಅವರ ಸ್ನೇಹ- ಪ್ರೀತಿಗೆ ಮಂಗಳವಾದ್ಯ ಮೊಳಗಿದೆ. ಅದ್ರಂತೆ ಸತಿ-ಪತಿಯಾಗಿ ಚಂದನವನದಲ್ಲಿ ರಂಗೇರಿಸಿದ್ದಾರೆ.

ಪ್ಲಾಸ್ಟಿಕ್ ಮುಕ್ತ ಆದರ್ಶ ಕಲ್ಯಾಣಕ್ಕೆ ಪಾರಿಜಾತ ಜೋಡಿ ನಾಂದಿ

ತಾರೆಯರ ಜೊತೆ ದಿಗ್ಗಿ-ಆ್ಯಂಡಿ ಬೊಂಬಾಟ್ ಸಂಗೀತ್ ಪಾರ್ಟಿ..!

ಪರಿಸರ ಸ್ನೇಹಿ ಮದ್ವೆ ಆಗಲು ಪಣ ತೊಟ್ಟಿದ್ದ ಈ ಪಾರಿಜಾತ ಜೋಡಿ, ದಿಗಂತ್​ರ ಹಿಂದೂ ಹಾಗೂ ಐಂದ್ರಿತಾರ ಬೆಂಗಾಲಿ ಸಂಪ್ರದಾಯದಂತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದು ವಿಶೇಷ. ಅದ್ರಲ್ಲೂ ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದ ಬಳಿ ಇರೋ ಡಿಸ್ಕವರಿ ವಿಲೇಜ್ ರೆಸಾರ್ಟ್​ನಲ್ಲಿ ಅತ್ಯಾಪ್ತರು ಹಾಗೂ ಬಂಧು- ಬಳಗದ ಸಮ್ಮುಖದಲ್ಲಿ ಪ್ಲಾಸ್ಟಿಕ್ ರಹಿತ ಕಲ್ಯಾಣಕ್ಕೆ ಅಣಿಯಾಗಿದ್ದು ಮೆಚ್ಚಲೇಬೇಕು.

ಹಳದಿ ಶಾಸ್ತ್ರದ ಜೊತೆಗೆ ಕಲರ್​ಫುಲ್ ಸಂಗೀತ್ ಪಾರ್ಟಿ ಕೂಡ ಜೋರಾಗೇ ನಡೆದಿದ್ದು, ಚಂದನವನದ ತಾರೆಯರಿಂದ ಸಂಗೀತ್ ಪಾರ್ಟಿ ಮತ್ತಷ್ಟು ಕಲರ್​ಫುಲ್ ಅನಿಸಿದ್ದು ಸುಳ್ಳಲ್ಲ. ತುಪ್ಪದ ಬೆಡಗಿ ರಾಗಿಣಿ, ಶರ್ಮಿಳಾ ಮಾಂಡ್ರೆ ಹಾಗೂ ಸಂಯುಕ್ತಾ ಹೊರನಾಡು ಸೇರಿದಂತೆ ಸಾಕಷ್ಟು ಮಂದಿ ತಾರೆಯರು ಇದಕ್ಕೆ ಸಾಕ್ಷಿಯಾದರು. ಅಷ್ಟೇ ಅಲ್ಲ, ನವ ವಧು-ವರರ ಜೊತೆ ಕುಣಿದು ಕುಪ್ಪಳಿಸಿದ್ರು.

ಖಾಸಗಿ ತನಕ್ಕೆ ಧಕ್ಕೆಯಾಗದಿರಲು ಬೆಂಗಳೂರಿನಿಂದ ಕೊಂಚ ದೂರದಲ್ಲೇನೋ ದಿಗ್ಗಿ-ಆ್ಯಂಡಿ ಮದ್ವೆ ಆದ್ರು ಸರಿ. ಅದರ ಬೆನ್ನಲ್ಲೇ ಚಿತ್ರರಂಗದ ಗಣ್ಯರಿಗಾಗಿ ನಗರದ ಖಾಸಗಿ ಹೋಟೆಲ್​ ಒಂದರಲ್ಲಿ, ಇದೇ ಶನಿವಾರ ಸಂಜೆ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದೆ ಈ ಪಾರಿಜಾತ ಜೋಡಿ. ಆದ್ರೆ ಅದಕ್ಕೂ ಮೊದ್ಲೇ ದಿಗಂತ್​ಗೆ ಬೊಂಬಾಟ್ ಗಿಫ್ಟ್ ಸಿಗ್ತಿದೆ.

ರಿಸೆಪ್ಷನ್​ಗೂ ಮೊದ್ಲೇ ದೂತ್​ಪೇಡಾಗೆ ಸಿಕ್ತು ಭರ್ಜರಿ ಗಿಫ್ಟ್..!

ಜನವರಿ 4ಕ್ಕೆ ಬಹುನಿರೀಕ್ಷಿತ ಫಾರ್ಚೂನರ್ ಗ್ರ್ಯಾಂಡ್ ರಿಲೀಸ್

ದಿಗಂತ್ ಪಾಲಿಗೆ ಇದು ಡಬಲ್ ಧಮಾಕ. ಒಂದ್ಕಡೆ ಇಷ್ಟದ ಒಡತಿಯನ್ನ ಮನೆ ತುಂಬಿಸಿಕೊಳ್ತಿರೋ ದಿಗಂತ್​ಗೆ ಫಾರ್ಚೂನರ್ ಗಿಫ್ಟ್ ಕೊಡ್ತಿದೆ ಚಿತ್ರತಂಡ. ಗಿಫ್ಟ್ ಅಂದ್ರೆ ಅದು ಫಾರ್ಚೂನರ್ ಕಾರ್ ಆಹ್ಹಾ ಅಂತ ಹುಬ್ಬೇರಿಸ್ಬೇಡಿ. ದಿಗಂತ್ ನಟಿಸಿರೋ ಸಿನಿಮಾನ ರಿಲೀಸ್ ಮಾಡ್ತಿದೆ. ಈ ಮೂಲಕ ದಿಗಂತ್​ಗೆ ಬ್ಯಾಕ್ ಟು ಬ್ಯಾಕ್ ಸಂಭ್ರಮದ ಧಮಾಕವೇ ಸರಿ.

ಗೊಲೇಚಾ ಫಿಲ್ಮ್ಸ್ ಇಂಟರ್​ನ್ಯಾಷನಲ್ ಬ್ಯಾನರ್​ನಡಿ ತಯಾರಾದ ಈ ಸಿನಿಮಾನ ಯುವ ನಿರ್ದೇಶಕ ಮಂಜುನಾಥ್ ನಿರ್ದೇಶಿಸಿದ್ದು, ಟ್ರೈಲರ್ ಹಾಗೂ ಸಾಂಗ್ಸ್​ನಿಂದ ಕುತೂಹಲ ಹೆಚ್ಚಿಸಿದೆ ಫಾರ್ಚೂನರ್. ಅಂದಹಾಗೆ ಇಲ್ಲಿ ದಿಗಂತ್​ಗೆ ಸೋನು ಗೌಡ, ಸ್ವಾತಿ ಶರ್ಮಾ ಇಬ್ಬರು ನಾಯಕಿಯರು ಜೋಡಿಯಾಗಿದ್ದು, ಫ್ರೆಶ್ ಫೀಲ್ ಕೊಡ್ತಿದೆ ಸ್ಕ್ರೀನ್ ಪ್ಲೇ.

ಬಹಳ ದಿನದಿಂದ ಸದ್ದು ಮಾಡ್ತಿದ್ದ ದಿಗಂತ್ ಫಾರ್ಚೂನರ್, ಹೊಸ ವರ್ಷಕ್ಕೆ ಅಂದ್ರೆ ಜನವರಿ 4ಕ್ಕೆ ವರ್ಷದ ಮೊದಲ ಸಿನಿಮಾ ಆಗಿ ದೊಡ್ಡ ಪರದೆ ಮೇಲೆ ಮೂಡಿಬರಲಿದೆ. ಅದೇನೇ ಇರಲಿ, ದಿಗಂತ್ ಪಾಲಿಗೆ ಈ ವರ್ಷಾಂತ್ಯ ಮತ್ತು 2019ರ ವರ್ಷಾರಂಭ ಎರಡೂ ಸಹ ಲಕ್ಕಿ ಟೈಮ್ ಆಗಿ ಪರಿಣಮಿಸಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES