Top

ಬಾಲಿವುಡ್ ನಟಿ ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿ: ವ್ಯಕ್ತಿ ಸಾವು

ಬಾಲಿವುಡ್ ನಟಿ ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿ: ವ್ಯಕ್ತಿ ಸಾವು
X

ಪಣಜಿ: ಬಾಲಿವುಡ್ ನಟಿಯೊಬ್ಬಳ ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ, ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ ಘಟನೆ ಗೋವಾ ರಾಜ್ಯದ ಮಾಪ್ಸಾ ಎಂಬಲ್ಲಿ ನಡೆದಿದೆ.

ಉತ್ತರ ಗೋವಾದಲ್ಲಿರುವ ಅಂಜುನಾ ಬೀಚ್ ಸಮೀಪದಲ್ಲಿ ನಿತೇಶ್ ಗೋರಲ್(31) ಸ್ಕೂಟರ್ ಓಡಿಸಿಕೊಂಡು ಬರುತ್ತಿದ್ದಾಗ, ನಟಿ ಜರೀನ್ ಖಾನ್ ಕಾರ್‌ಗೆ ಡಿಕ್ಕಿ ಹೊಡೆದಿದ್ದು, ನಿತೇಶ್‌ನನ್ನು ಅಸಿಲೋ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ನಿತೇಶ್ ಸಾವನ್ನಪ್ಪಿದ್ದಾನೆ.

ಇನ್ನು ಘಟನೆ ನಡೆಯುವ ವೇಳೆ ಕಾರ್ ಡ್ರೈವರ್ ಮತ್ತು, ನಟಿ ಜರೀನ್ ಖಾನ್ ಸ್ಥಳದಲ್ಲೇ ಇದ್ದು, ಇಬ್ಬರನ್ನು ವಿಚಾರಣೆಗೊಳಪಡಿಸಲಾಗಿದೆ. ಮತ್ತು ಈ ಬಗ್ಗೆ ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Next Story

RELATED STORIES