Top

ಶಾಲಾ ಬಸ್​ಗೆ ಲಾರಿ ಡಿಕ್ಕಿ: ಕುಡುಕ ಚಾಲಕನಿಂದ ಮಕ್ಕಳು ಪಾರು

ಶಾಲಾ ಬಸ್​ಗೆ ಲಾರಿ ಡಿಕ್ಕಿ: ಕುಡುಕ ಚಾಲಕನಿಂದ ಮಕ್ಕಳು ಪಾರು
X

ಮದ್ಯದ ಅಮಲಿನಲ್ಲಿ ಚಾಲಕ ಚಲಾಯಿಸುತ್ತಿದ್ದ ಲಾರಿ, ಪ್ರವಾಸ ಹೊರಟ್ಟಿದ್ದ ಶಾಲಾ ಮಕ್ಕಳ ಬಸ್​ಗೆ ಡಿಕ್ಕಿ ಹೊಡೆದಿದ್ದು, ಬಸ್ ಚಾಲಕನ ಸಮಯಪ್ರಜ್ಞೆಯಿಂದ ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ವಿಜಯಪುರದಲ್ಲಿ ಗುರುವಾರ ಮುಂಜಾನೆ ಸಂಭವಿಸಿದೆ.

ವಿಜಯಪುರ ಜಿಲ್ಲೆಯ ಮುತ್ತಗಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ಲಾರಿ ಚಾಲಕ ಅರವಿಂದ್ ಸಿಂಗ್​ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಲಬುರಗಿ ಜಿಲ್ಲೆಯ ಆಳಂದ ತಾ‌ಲೂಕಿನ ಸಂಗೊಳಗಿ ಗ್ರಾಮದ ಶಾಲಾ ಮಕ್ಕಳು ಪ್ರವಾಸಕ್ಕೆ ಹೊರಟ್ಟಿದ್ದ ಬಸ್​ಗೆ ಅಡ್ಡಾದಿಡ್ಡಿಯಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಬಸ್ ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅಪಾಯ ಸಣ್ಣದರಲ್ಲೇ ತಪ್ಪಿದೆ.

ಅಪಘಾತವಾದ ಲಾರಿಯಲ್ಲಿ ವಿಸ್ಕಿ ಬಾಟೆಲ್ ಪತ್ತೆಯಾಗಿದ್ದು, ಲಾರಿ ಚಾಲಕ ಮದ್ಯ ಸೇವಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮಕ್ಕಳಿಗೆ ಯಾವುದೇ ಪ್ರಾಣಾಪಾಯವಿಲ್ಲ. ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು, ಸ್ಥಳದಲ್ಲಿ 108 ಸಿಬ್ಬಂದಿಯಿಂದ ಪ್ರಥಮ ಚಿಕಿತ್ಸೆ ಒದಗಿಸಲಾಗಿದೆ. ಮನಗೂಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Next Story

RELATED STORIES