Top

‘ಕೋಟಿಗೊಬ್ಬ’ನ ಡಿಮ್ಯಾಂಡ್ ನೋಡಿ ಸ್ಯಾಂಡಲ್​ವುಡ್ ಶಾಕ್

‘ಕೋಟಿಗೊಬ್ಬ’ನ ಡಿಮ್ಯಾಂಡ್ ನೋಡಿ ಸ್ಯಾಂಡಲ್​ವುಡ್ ಶಾಕ್
X

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಅಪ್​ಕಮ್ಮಿಂಗ್ ಸಿನಿಮಾಗಳಲ್ಲೇ ಬೇಜಾನ್ ಹೈಪ್ ಕ್ರಿಯೇಟ್ ಮಾಡಿರೋ ಸಿನಿಮಾ ಕೋಟಿಗೊಬ್ಬ-3. ಕಾರಣ ಸಾಹಸಸಿಂಹ ವಿಷ್ಣುವರ್ಧನ್ ಸೂಪರ್ ಹಿಟ್ ಸಿನಿಮಾ ಟೈಟಲ್,​ ಮತ್ತೊಂದ್ಕಡೆ ಇದೇ ಟೈಟಲ್​ನಲ್ಲಿ ಬಂದ ಕಿಚ್ಚನ ಕೋಟಿಗೊಬ್ಬ-2. ಇದೀಗ ಮತ್ತೊಮ್ಮೆ ಸುದೀಪ್​ ಕೋಟಿಗೊಬ್ಬನ ಅವತಾರ ತಾಳಿದ್ದು, ಸಿನಿಮಾ ಕುತೂಹಲ ಕೆರಳಿಸಿದೆ..

ಮೂರು ತಿಂಗಳ ಹಿಂದೆ ಸರ್ಬಿಯಾದಲ್ಲಿ ಸೆಕೆಂಡ್ ಶೆಡ್ಯೂಲ್​ ಮುಗಿಸಿ ಬಂದ ಕೋಟಿಗೊಬ್ಬ -3 ಟೀಮ್, ಸಂಕ್ರಾಂತಿ ನಂತ್ರ ಮತ್ತೆ ಚಿತ್ರೀಕರಣಕ್ಕೆ ಚಾಲನೆ ಕೊಡಲಿದೆ.. ನಿರ್ಮಾಪಕ ಸೂರಪ್ಪ ಬಾಬು ಸಿಕ್ಕಾಪಟ್ಟೆ ಅದ್ದೂರಿಯಾಗಿ ಕೋಟಿಗೊಬ್ಬ-3 ಚಿತ್ರವನ್ನ ಕಟ್ಟಿಕೊಡ್ತಿದ್ದು, ಸ್ವತ: ಸುದೀಪ್ ಕಥೆ ಬರೆದಿದ್ದಾರೆ.. ಹೊಸ ನಿರ್ದೇಶಕ ಶಿವ ಕಾರ್ತಿಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.. ಸದ್ಯ ಸೈರಾ ಮತ್ತು ಪೈಲ್ವಾನ್ ಸಿನಿಮಾ ಶೂಟಿಂಗ್​ನಲ್ಲಿ ಕಿಚ್ಚ ಭಾಗವಹಿಸಿದ್ದು, ಆ ನಂತ್ರ ಕೋಟಿಗೊಬ್ಬ-3 ತಂಡವನ್ನ ಸೇರಿಕೊಳ್ಳಲಿದ್ದಾರೆ..

ಸೈರಾ, ಪೈಲ್ವಾನ್​ ಶೂಟಿಂಗ್ ಕಾರಣ ಕೋಟಿಗೊಬ್ಬ-3 ಶೂಟಿಂಗ್ ತಡವಾಗ್ತಿದೆ.. ಸದ್ಯ ಚಿತ್ರದ ಒಂದಷ್ಟು ಮೇಕಿಂಗ್ ಸ್ಟಿಲ್ಸ್​ ರಿವೀಲ್​ ಆಗಿದ್ದು, ಕಿಚ್ಚನ ಖಡಕ್ ಲುಕ್ಕಿಗೆ ಫ್ಯಾನ್ಸ್ ಕಳ್ದೋಗಿದ್ದಾರೆ.. ಸ್ಟೈಲಿಶ್ ಸರ್ಬಿಯಾದಲ್ಲಿ ನಡೆದ ಆಕ್ಷನ್ ಎಪಿಸೋಡ್ ಮೇಕಿಂಗ್ ಸ್ಟಿಲ್ಸ್ ಇದು. ಫಾರಿನ್ ವಿಲನ್​ಗಳ ಎದುರು ಹಸಿದ ಹೆಬ್ಬುಲಿಯಂತೆ ಕಿಚ್ಚ ಅಬ್ಬರಿಸಿರೋ ದೃಶ್ಯಗಳ ಮೇಕಿಂಗ್ ಝಲಕ್ ಇದು.

ಇನ್ನೂ ಮೇಕಿಂಗ್ ಸ್ಟಿಲ್ಸ್​ನಲ್ಲಿ ನಾಯಕಿ ಮಡೋನಾ ಸೆಬಾಸ್ಟಿಯನ್ ಕೂಡ ಇದ್ದಾರೆ.. ಮತ್ತೊಂದ್ಕಡೆ ಮೇಕಿಂಗ್ ಹಂತದಲ್ಲೇ ಕೋಟಿಗೊಬ್ಬ-3 ಸಿನಿಮಾ ಬೇಜಾನ್ ಸೌಂಡ್ ಮಾಡ್ತಿದೆ.. 21ಕೋಟಿಗೆ ಕೋಟಿಗೊಬ್ಬ-3 ಹಿಂದಿ ಡಬ್ಬಿಂಗ್ ಮತ್ತು ಕನ್ನಡ ಸ್ಯಾಟಲೈಟ್ ರೈಟ್ಸ್​​​​ ಕೇಳ್ತಿದ್ದಾರೆ.. ಆದ್ರೆ, ನಿರ್ಮಾಪಕ ಸೂರಪ್ಪ ಬಾಬು ಮಾತ್ರ ಡೀಲ್​ಗೆ ಒಪ್ಪಿಲ್ಲವಂತೆ.. ಮೇಕಿಂಗ್ ಹಂತದಲ್ಲೇ ಈ ಪಾಟಿ ಡಿಮ್ಯಾಂಡ್ ಕ್ರಿಯೇಟ್ ಮಾಡ್ಕೊಂಡಿರೋ ಈ ಆಕ್ಷನ್ ಎಂಟ್ರಟ್ರೈನರ್ ಮುಂದಿನ ದಿನಗಳಲ್ಲಿ ಮತ್ತಷ್ಟು ಸದ್ದು ಮಾಡೋದು ಗ್ಯಾರೆಂಟಿ..

ಕೋಟಿಗೊಬ್ಬ -3 ಚಿತ್ರಕ್ಕೆ ಅರ್ಜುನ್ ಜನ್ಯಾ ಟ್ಯೂನ್ ಹಾಕ್ತಿದ್ದು, ಶೇಖರ್ ಚಂದ್ರ ಕ್ಯಾಮರಾಮನ್ ಆಗಿ ಕೆಲಸ ಮಾಡ್ತಿದ್ದಾರೆ. ಸಂಕ್ರಾಂತಿ ನಂತ್ರ ಬ್ಯಾಂಕಾಕ್ ಮತ್ತು ಬೆಂಗಳೂರಿನಲ್ಲಿ ಮುಂದಿನ ಶೆಡ್ಯೂಲ್​ ಶೂಟಿಂಗ್ ನಡೆಯಲಿದೆ. 2016ರಲ್ಲಿ ಬಂದ ಕೋಟಿಗೊಬ್ಬ-2 ಸಿನಿಮಾ ತಮಿಳುನಲ್ಲೂ ಧೂಳೆಬ್ಬಿಸಿತ್ತು. ಈ ಸಿನಿಮಾ ಕೂಡ ಕನ್ನ ಮಾತ್ರವಲ್ಲದೇ ಬೇರೇ ಭಾಷೆಗಳಲ್ಲಿ ರಿಲೀಸ್ ಆಗೋ ಸಾಧ್ಯತೆಯಿದೆ.

Next Story

RELATED STORIES