Top

ತೆಲಂಗಾಣ ಸಿಎಂ ಆಗಿ ಕೆಸಿ ಚಂದ್ರಶೇಖರ್ ಪ್ರಮಾಣ!

ತೆಲಂಗಾಣ ಸಿಎಂ ಆಗಿ ಕೆಸಿ ಚಂದ್ರಶೇಖರ್ ಪ್ರಮಾಣ!
X

ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ಕೆ.ಸಿ. ಚಂದ್ರಶೇಖರ್ ಹೈದರಬಾದ್​ನ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಎರಡನೇ ಬಾರಿಗೆ ತೆಲಂಗಾಣ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಪುರೋಹಿತರ ಸಲಹೆ ಮೇರೆಗೆ ಕೆ.ಸಿ. ಚಂದ್ರಶೇಖರ್ 1 ಗಂಟೆ 34 ನಿಮಿಷಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಇ.ಎಲ್​.ಎಸ್. ನರಸಿಂಹನ್ ಪ್ರತಿಜ್ಞಾ ವಿಧಾನ ಭೋದಿಸಿದರು.

ಕಾಂಗ್ರೆಸ್ ಮತ್ತು ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಮೈತ್ರಿಕೂಟದ ವಿರುದ್ಧ ಟಿಆರ್​ಎಸ್ ಪಕ್ಷ ಭಾರೀ ಅಂತರದಿಂದ ಜಯಭೇರಿ ಬಾರಿಸಿತ್ತು. 119 ಸ್ಥಾನಗಳ ವಿಧಾನಸಭಾ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಹುಮತಕ್ಕೆ 62 ಸ್ಥಾನಗಳ ಅಗತ್ಯವಿದ್ದರೂ 88 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ಟಿಆರ್​ಎಸ್​ ಅಧಿಕಾರಕ್ಕೆ ಮರಳಿದೆ. ಕಾಂಗ್ರೆಸ್ 19 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಚಂದ್ರಶೇಖರ್ 1985ರಿಂದ ಇಲ್ಲಿಯವರೆಗೆ ಗಜ್ವೆಲ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು ಒಂದೂ ಬಾರಿಯೂ ಸೋತಿಲ್ಲ. ಇದೀಗ ಸತತ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಚಂದ್ರಶೇಖರ್ ಅವರು ವಾಸ್ತು, ಜ್ಯೋತಿಷ್ಯ ಮತ್ತು ದೇವರ ಮೇಲೆ ಅಪಾರ ನಂಬಿಕೆ ಹೊಂದಿದ್ದು, ಅದರಂತೆ ನಡೆದುಕೊಳ್ಳುತ್ತಾ ಬಂದಿದ್ದಾರೆ. ಯಾದ್ರಾದ್ರಿ ದೇವಸ್ಥಾನದ ಪ್ರಮುಖ ಆರ್ಚಕರಾದ ಲಕ್ಷ್ಮೀ ನಾರಾಯಣ ಆಚಾರ್ಯ ಅವರ ಸಲಹೆ ಮೇರೆಗೆ 1.34ಕ್ಕೆ ಪ್ರಮಾಣ ವಚನ ಸ್ವೀಕರಿಸಿದರು.

Next Story

RELATED STORIES