Top

ಅಘೋರಿಗಳ ಜೊತೆ ಹೆಜ್ಜೆ ಹಾಕಿದ 'ಭೈರಾದೇವಿ'

ಅಘೋರಿಗಳ ಜೊತೆ ಹೆಜ್ಜೆ ಹಾಕಿದ ಭೈರಾದೇವಿ
X

ಮೊನ್ನೆ ಮೊನ್ನೆ ತಾನೇ ವೈರಾ ಚಿತ್ರ ಖ್ಯಾತಿಯ ನಟ ನವರಸನ್ ನಿರ್ದೇಶನದ ಮೊದಲ ಚಿತ್ರ ದಮಯಂತಿ ಚಿತ್ರದಲ್ಲಿ ರಾಧಿಕಾ ನಟಿಸುತ್ತಿದ್ದು, ಈ ಚಿತ್ರದಲ್ಲಿ ರಾಧಿಕಾಕುಮಾರಸ್ವಾಮಿ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆಯುವ ಮೂಲಕ ಸ್ಯಾಂಡಲ್‌ವುಡ್‌ ಬೆಡಗಿಯರು ಹುಬ್ಬೇರುವಂತೆ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ.

ಇದೀಗ ರಾಧಿಕಾ ಕುಮಾರಸ್ವಾಮಿ ಭೈರಾದೇವಿ ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದು, ಹಾಡೊಂದಕ್ಕೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ.

ಒಂದು ಕೋಟಿ ವೆಚ್ಚದಲ್ಲಿ ತಯಾರಾದ ಅದ್ಧೂರಿ ಸೆಟ್‌ನಲ್ಲಿ ರಾಧಿಕಾ ಅಘೋರಿಗಳ ಜೊತೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಸ್ಯಾಂಡಲ್‌ವುಡ್‌ನ ಹೆಸರಾಂತ ಕೊರಿಯೋಗ್ರಾಫರ್ ಹರ್ಷ ಶಿಷ್ಯ ಮೋಹನ್ ಕೊರಿಯೋಗ್ರಫಿಯಲ್ಲಿ ರಾಧಿಕಾ ಹೆಜ್ಜೆ ಹಾಕಿದ್ದಾರೆ. ಮೋಹನ್ ಬಿ ಕೆರೆ ಕಲಾಕುಂಚದಲ್ಲಿ ಈ ಸ್ಪೆಷಲ್ ಸೆಟ್ ತಯಾರಾಗಿದ್ದು, ಇದು ರಾಧಿಕಾ ಕುಮಾರಸ್ವಾಮಿ ಇಂಟ್ರಡಕ್ಷನ್ ಸಾಂಗ್ ಆಗಿದೆ.

ಭೈರಾದೇವಿ ಸಿನಿಮಾವನ್ನ ಆರ್‌ಎಕ್ಸ್‌ ಸೂರಿ ಖ್ಯಾತಿಯ ಶ್ರೀಜೈ ನಿರ್ದೇಶಿಸುತ್ತಿದ್ದು, ಶಮಿಕಾ ಎಂಟರ್​ಪ್ರೈಸಸ್ ಬ್ಯಾನರ್​ನಡಿ ಚಿತ್ರ ಮೂಡಿಬರಲಿದೆ. ಜಗದೀಶ್ ವಾಲಿ ಸಿನಿಮಾಟೋಗ್ರಫಿ ಮಾಡಿದ್ದು, ಮೋಹನ್.ಬಿ.ಕೆರೆ ಆರ್ಟ್ ಡೈರೆಕ್ಷನ್ ಮಾಡಿದ್ದಾರೆ.

Next Story

RELATED STORIES