ಇಶಾ ಅಂಬಾನಿ ವಿವಾಹ: ಅದ್ಧೂರಿ ಮದುವೆಗೆ ಸಾಕ್ಷಿಯಾದ ಗಣ್ಯರು

ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿ ಆನಂದ್ ಪಿರಾಮಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಮುಂಬೈನಲ್ಲಿ ನಡೆದ ಅದ್ಧೂರಿ ವಿವಾಹ ಕಾರ್ಯಕ್ರಮದಲ್ಲಿ ಬಾಲಿವುಡ್ ಗಣ್ಯರು, ಕ್ರಿಕೆಟ್ ತಾರೆಯರು ಸೇರಿ ರಾಜಕೀಯ ಪ್ರಮುಖ ವ್ಯಕ್ತಿಗಳೂ ಭಾಗಿಯಾಗಿದ್ದರು.
ಮುಖೇಶ್ ಅಂಬಾನಿ ನಿವಾಸವಾದ ಮುಂಬೈನ ಅಂಟಿಲಿಯಾ ನಿವಾಸದಲ್ಲಿ ವಿವಾಹ ಜರುಗಿದ್ದು, ವಿವಾಹದ ಕೆಲ ಫೋಟೋಗಳು ವೈರಲ್ ಆಗಿದೆ.
ಅಮೆರಿಕದ ಮಾಜಿ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಹಿಲರಿ ಕ್ಲಿಂಟನ್, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಶರದ್ ಪವಾರ್, ರಾಜ್ನಾಥ್ ಸಿಂಗ್, ಮಮತಾ ಬ್ಯಾನರ್ಜಿ, ಮನೇಕಾ ಗಾಂಧಿ, ರಜನಿಕಾಂತ್, ವಿಜಯ್ ರೂಪಾನಿ, ಸುರೇಶ್ ಬಾಬು, ಪಿ.ಚಿದಂಬರಂ, ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್, ಸಲ್ಮಾನ್ ಖಾನ್, ಶಾರೂಖ್ ಖಾನ್, ದೀಪಿಕಾ ಪಡುಕೋಣೆ,ರಣ್ವೀರ್ ಸಿಂಗ್, ಪ್ರಿಯಾಂಕಾ ಛೋಪ್ರಾ, ನಿಕ್, ಶಾಹಿದ್ ಕಪೂರ್ ಸೇರಿ ಹಲವು ಗಣ್ಯರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.