Top

ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಾಸ್ಯನಟ ಕಪಿಲ್ ಶರ್ಮಾ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಾಸ್ಯನಟ ಕಪಿಲ್ ಶರ್ಮಾ
X

ಬಾಲಿವುಡ್ ಹಾಸ್ಯನಟ ಕಪಿಲ್ ಶರ್ಮಾ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದು, ತಾವು ಇಷ್ಟಪಟ್ಟ ಹುಡುಗಿಯನ್ನೇ ವರಿಸಿದ್ದಾರೆ. ಕಪಿಲ್ ಕೆಲ ವರ್ಷಗಳಿಂದ ಗಿನ್ನಿ ಚತ್ರಾತ್ ಎಂಬುವರನ್ನ ಪ್ರೀತಿಸುತ್ತಿದ್ದು, ಗುರು ಹಿರಿಯರ ಸಮ್ಮುಖದಲ್ಲಿ ಬುಧವಾರದಂದು ಜಲಂಧರ್‌ನಲ್ಲಿ ವಿವಾಹವಾದರು.

ದಿ ಕಪಿಲ್ ಶರ್ಮಾ ಶೋನ ಕೆಲ ಕಲಾಕಾರರು ಮದುವೆ ಸಂಭ್ರಮದಲ್ಲಿ ಭಾಗಿಯಾಗಿ, ಮೆರಗು ತುಂಬಿದರು. ಅಲ್ಲದೇ ಕೆಲ ಬಾಲಿವುಡ್ ಸೆಲೆಬ್ರಿಟಿಗಳು ಕಪಿಲ್ ಮತ್ತು ಗಿನ್ನಿಗೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಕಪಿಲ್ ಶರ್ಮಾ, ನನಗೆ ಇಷ್ಟು ಅದ್ಧೂರಿಯಾಗಿ ಮದುವೆಯಾಗುವ ಇಷ್ಟವಿರಲಿಲ್ಲ. ಆದರೆ ಗಿನ್ನಿ ಅವರ ಅಪ್ಪ-ಅಮ್ಮನಿಗೆ ಒಬ್ಬಳೇ ಮಗಳಾಗಿರುವುದರಿಂದ ಅವರ ಭಾವನೆಗೆ ಬೆಲೆ ಕೊಟ್ಟಿದ್ದೇನೆ ಎಂದಿದ್ದಾರೆ.

ಅಲ್ಲದೇ ಡಿಸೆಂಬರ್ 14ರಂದು ಅಮೃತ್‌ಸರದಲ್ಲಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಡಿಸೆಂಬರ್ 24ರಂದು ಬಾಲಿವುಡ್‌ ಗಣ್ಯರಿಗಾಗಿ ಮುಂಬೈನಲ್ಲಿ ಪಾರ್ಟಿ ಇಡಲಾಗಿದೆ.

Next Story

RELATED STORIES