ಬೆಳಗಾವಿ ಅಧಿವೇಶನದಲ್ಲಿ ಪ್ರತಿಧ್ವನಿಸಿದ ಡಿಸ್ನಿಲ್ಯಾಂಡ್

X
TV5 Kannada13 Dec 2018 9:48 AM GMT
ಮೊದಲು ನೀರಾವರಿ ಯೋಜನೆಗೆ ಆದ್ಯತೆ ನೀಡಿ. ದುಡ್ಡು ಹೆಚ್ಚಿದ್ದಾಗ ಡಿಸ್ನಿಲ್ಯಾಂಡ್ ಬೇಕಾದರೆ ಮಾಡಿ ಎಂದು ಸರ್ಕಾರಕ್ಕೆ ವಿಪಕ್ಷ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ಹೇಳಿದ್ದಾರೆ.
ದೋಸ್ತಿ ಸರ್ಕಾರದ ಯೋಜನೆಯಾದ ಕೆಆರ್ಎಸ್ ಡಿಸ್ನಿಲ್ಯಾಂಡ್ ವಿಚಾರವನ್ನು ಇಂದು ವಿಧಾನಸಭೆಯಲ್ಲಿ ಯಡಿಯೂರಪ್ಪ ಪ್ರಸ್ತಾಪಿಸಿದರು. ರೈತರು ಸಂಕಷ್ಟದಲ್ಲಿದ್ದಾರೆ ಈ ಸಂದರ್ಭದಲ್ಲಿ ನಾವು ಕೆಆರ್ಎಸ್ ಡಿಸ್ನಿಲ್ಯಾಂಡ್ ಮಾಡುವುದು ಎಷ್ಟರ ಮಟ್ಟಿಗೆ ಸರಿ ಮೊದಲು ರೈತರ ಬಗ್ಗೆ ಗಮನ ಹರಿಸೋಣ ನಂತರ ಬೇರೆ ವಿಚಾರ ಎಂದು ಡಿ ಕೆ ಶಿವಕುಮಾರ್ಗೆ ತಿರುಗೇಟು ನೀಡಿದರು.
ಇನ್ನು ಇದೇ ವೇಳೆ ಯಡಿಯೂರಪ್ಪ ಸಲಹೆಗೆ ಪ್ರತಿಕ್ರಿಯಿಸಿದ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್, ನಾವು ಡಿಸ್ನಿಲ್ಯಾಂಡ್ ಯೋಜನೆಗೆ ಹಣ ಖರ್ಚು ಮಾಡುತ್ತಿಲ್ಲ. ಕೃಷ್ಣ ಮೇಲ್ದಂಡೆ ಯೋಜನೆಗೆ ಬದ್ಧರಾಗಿದ್ದೇವೆ ಎಂದು ತಿಳಿಸಿದರು.
Next Story