ಸೋತು ಕಂಗೆಟ್ಟ ಮರಿ ಟೈಗರ್ ಗೆಲುವಿಗೆ ದಚ್ಚು ಮಾಸ್ಟರ್ ಪ್ಲಾನ್

ಟೈಗರ್ ಪ್ರಭಾಕರ್.. 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಭಿನ್ನ-ವಿಭಿನ್ನ ಪಾತ್ರಗಳನ್ನು ಮಾಡಿ ಕನ್ನಡಿಗರ ನೆನಪಿನ ಶಾಸನದಲ್ಲಿ ಅಚ್ಚಳಿಯದೆ ಉಳಿದಿರುವ ಅದ್ಭುತ ನಟ. ಆದ್ರೆ ಸತತ ಸೋಲು ಮರಿಟೈಗರ್ನ ಕಂಗೆಡಿಸಿತ್ತು. ಟೈಸನ್ ಸಿಲುಕಿಕೊಂಡುರುವ ಸೋಲಿನ ಸರಪಳಿಯಿಂದ ಬಿಡಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಏನದು ಮಾಸ್ಟರ್ ಪ್ಲಾನ್ ಎನ್ನುವುದರ ಮಾಹಿತಿ ಇಲ್ಲಿದೆ ಓದಿ.
ಮರಿ ಟೈಗರ್ ಹಿಂದೆ ಚಾಲೆಂಜಿಂಗ್ ಸ್ಟಾರ್ ಶ್ಯಾಡೋ..!!
ಸೋತು ಕಂಗೆಟ್ಟಿದ ಟೈಸನ್ಗೆ ಚಕ್ರವರ್ತಿಯ ಶ್ರೀರಕ್ಷೆ..!!
ಲಕ್ ಅಥವಾ ಅದೃಷ್ಟ ಅನ್ನೋದು ಮನುಷ್ಯನಿಗೆ ಬಹಳ ಮುಖ್ಯ. ಎಲ್ಲಾ ಇದ್ರು ಲಕ್ ಅನ್ನೋ ಮ್ಯಾಜಿಕ್ ಜೀವನದಲ್ಲಿ ಇರದ್ದಿದ್ರೆ ಏನೂ ಪ್ರಯೋಜನವಿಲ್ಲ.ಹಾಗೇ ಅಂತಾ ಪ್ರಮಾಣಿಕ ಪ್ರಯತ್ನ ಪಡದಿದ್ರೆ ದೇವರು ಏನು ಮಾಡೋಕ್ಕೆ ಆಗಲ್ಲ. ಸದ್ಯಕ್ಕೆ ಸ್ಯಾಂಡಲ್ವುಡ್ನಲ್ಲಿ ಸನ್ನಾಫ್ ಟೈಗರ್ ವಿನೋದ್ ಪ್ರಭಾಕರ್ಗೆ ಲಕ್ ಇಲ್ಲ. ಆದ್ರೆ ಪ್ರಮಾಣಿಕ ಪ್ರಯತ್ನವಿದೆ, ಆ ಪ್ರಮಾಣಿಕ ಪ್ರಯತ್ನಕ್ಕೆ ಸ್ನೇಹಿತನಾಗಿ ವಿನೋದ್ಗೆ ಸಾಥ್ ನೀಡುತ್ತಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್.
ಮರುಜನ್ಮ ಕೊಟ್ಟವರು ದರ್ಶನ್ ಎಂದ ಸನ್ ಆಫ್ ಟೈಗರ್
ಟೈಸನ್ ಚಿತ್ರಗಳಿಗೆ ಸಾಥ್ ಕೊಡ್ತಾ ಬರ್ತಿದ್ದಾರೆ ಜಗ್ಗುದಾದಾ..!
ಚಿತ್ರರಂಗದಿಂದ ವಿನೋದ್ ಪ್ರಭಾಕರ್ ದೂರಾಗೇ ಬಿಟ್ಟರು ಎನ್ನುವಾಗ್ಲೇ ಮತ್ತೆ ನವಗ್ರಹ ಚಿತ್ರದಿಂದ ಪ್ರತ್ಯಕ್ಷರಾದ್ರು. ಇದ್ದಕ್ಕೆ ಪ್ರಮುಖ ಕಾರಣ ದಾಸ ದರ್ಶನ್. ನವಗ್ರಹ ಚಿತ್ರದ ನಂತರ ಕೊಂಚ ಡಲ್ ಆಗಿದ್ದ ಮರಿ ಟೈಗರ್ ಟೈಸನ್ ಚಿತ್ರದಿಂದ ಸಕ್ಸಸ್ ರುಚಿ ಕಂಡರು. ಆಗ ಇವರ ಹಿಂದಿದ್ದವರು ಇದೇ ದರ್ಶನ್. ಮಾನಸಿಕವಾಗಿ ಕುಗ್ಗೋಗಿರುವ ಮನುಷ್ಯನಿಗೆ ಮನಿ ಸರ್ಪೋಟ್ಗಿಂತ ಮಾರಲ್ ಸಪೋರ್ಟ್ ಬಲು ಮುಖ್ಯ. ಅದನ್ನೇ ವಿನೋದ್ಗೆ ಮಾಡಿದ್ದು ದರ್ಶನ್. ಸದ್ಯ ಮರಿ ಟೈಗರ್ ನಟನೆಯ ಬಹುತೇಕ ಎಲ್ಲಾ ಚಿತ್ರಗಳಿಗೆ ದರ್ಶನ್ ಕ್ಲಾಪ್ ಮಾಡಿದ್ದಾರೆ, ಟೀಸರ್ ಟ್ರೈಲರ್ಗಳನ್ನ ಲಾಂಚ್ ಮಾಡುತ್ತ ಬಂದಿದ್ದಾರೆ. ಈಗ ಶ್ಯಾಡೋ ಚಿತ್ರದ ಟೀಸರ್ನ ಲಾಂಚ್ ಮಾಡಿದ್ದಾರೆ.
ಶ್ಯಾಡೋ ಚಿತ್ರದ ಟೀಸರ್ ಲಾಂಚ್ ಮಾಡಿದ ಡಿ ಬಾಸ್
ಹೊಸ ಲುಕ್ನಲ್ಲಿ ಮರಿ ಟೈಗರ್ ವಿನು ಆ್ಯಕ್ಷನ್ ಖದರ್
ಶ್ಯಾಡೋ. ವಿನೋದ್ ಪ್ರಭಾಕರ್ ನಟನೆಯ ಮತ್ತೊಂದು ಹೊಸ ಸಿನಿಮಾ. ಈ ವರ್ಷದ ಜೂನ್ನಲ್ಲಿ ಸದ್ದು ಗದ್ದಲ್ಲವಿಲ್ಲದೆ ಶೂಟಿಂಗ್ ಅಖಾಡಕ್ಕೆ ಇಳಿದು ಈಗ ಟೀಸರ್ ಮೂಲಕ ಜನರ ಮುಂದೆ ಬಂದಿದೆ. ಟಾಲಿವುಡ್ನ ಸ್ಟಾರ್ ಡೈರೆಕ್ಟರ್ ಪೂರಿ ಜಗನ್ನಾತ್ ಶಿಷ್ಯ ರವಿ ಗೌಡ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ತೆಲುಗು ನಿರ್ಮಾಪಕರಾದ ಚಕ್ರವರ್ತಿ ಮತ್ತು ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಸದ್ಯ ಶೂಟಿಂಗ್ , ಎಡಿಟಿಂಗ್ಗಳನ್ನು ಮುಗಿಸಿಕೊಂಡಿರುವ ಶ್ಯಾಡೋ ಚಿತ್ರತಂಡ ಆಡಿಯೋ ರಿಲೀಸ್ ಮಾಡಿ ಸುದ್ದಿ ಮಾಡಿಸಿಕೊಂಡು ಮುಂದಿನ ವರ್ಷದ ಫೆಬ್ರವರಿ ತಿಂಗಳ ಅಂತ್ಯ ಅಥವಾ ಮಾರ್ಚ್ ತಿಂಗಳ ಪ್ರಾರಂಭದಲ್ಲಿ ಸಿನಿಮಾವನ್ನು ತೆರೆಗೆ ತರಲು ಯೋಜನೆ ಸಿದ್ಧಪಡಿಸಿಕೊಂಡಿದೆ.
ಶ್ರೀಧರ್ ಶಿವಮೊಗ್ಗ_ಎಂಟರ್ಟೈನ್ಮೆಂಟ್ ಬ್ಯೂರೋ_TV5