Top

ಬೆಳಗಾವಿ ಅಧಿವೇಶನ 4ನೇ ದಿನ: ಬರ, ಕೆರೆ, ಫ್ಲೆಕ್ಸ್ ಪ್ರತಿಧ್ವನಿ

ಬೆಳಗಾವಿ ಅಧಿವೇಶನ 4ನೇ ದಿನ: ಬರ, ಕೆರೆ, ಫ್ಲೆಕ್ಸ್ ಪ್ರತಿಧ್ವನಿ
X

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ನಾಲ್ಕನೇ ದಿನವಾದ ಗುರುವಾರ ಬರ, ಕೆರೆಗೆ ನೀರು, ಫ್ಲೆಕ್ಸ್ ತೆರವು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು.

ವಿಧಾನಸಭೆಯಲ್ಲಿಂದು ರಾಜ್ಯದ ಸಣ್ಣ ಕೆರೆಗಳ ಹೂಳೆತ್ತುವ ವಿಚಾರ ಪ್ರಸ್ತಾಪದ ವೇಳೆ ಸ್ಪೀಕರ್ ರಮೇಶ್ ಕುಮಾರ್ ಗದ್ಗದಿತರಾದರು. ಕೆರೆಗಳಲ್ಲಿ ಅರಣ್ಯ ಇಲಾಖೆ ಜಾಲಿ,ನೀಲಗಿರಿ ಮರ ನೆಟ್ಟಿದೆ..ಮರ ಇರೋದ್ರಿಂದ ನಾವು ಹೂಳೆತ್ತುವುದು ಕಷ್ಟ ಅಂತ ಸಣ್ಣ ನೀರಾವರಿ ಸಚಿವ ಪುಟ್ಟರಾಜು ಅಸಹಾಯಕತೆ ತೋಡಿಕೊಂಡ್ರು. ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿಯ ಕುಮಾರ್ ಬಂಗಾರಪ್ಪ ಕೆರೆಕುಂಟೆಗಳ ಹೂಳು‌ತೆಗೆಯದೆ ಹೋದ್ರೆ ನೀರು ನಿಲ್ಲಿಸುವುದು ಕಷ್ಟ. ಅದ್ರಲ್ಲೂ ಕೋಲಾರದ ಕೆರೆಗಳಲ್ಲಿ ಇನ್ನೂ ಕಷ್ಟ.

ಹೀಗಾಗಿಯೇ ನೀರಿನ ಸಮಸ್ಯೆ ಬಿಗಡಾಯಿಸಿದೆ ಅಂತ ಬಾಯಿಹಾಕಿದ್ರು..ಕುಮಾರ್ ಬಂಗಾರಪ್ಪ ಮಾತು ಕೇಳಿದ ತಕ್ಷಣವೇ ಕೋಲಾರದ ನೀರಿನ ಸಮಸ್ಯೆ ನೆನೆದು ಸ್ಪೀಕರ್ ಕಣ್ಣೀರು ಹಾಕಿದ್ರು..ಅಲ್ಲದೆ ಜಾಲಿ ನೆಟ್ಟಿದ್ದರ ಬಗ್ಗೆ ಸಿಟ್ಟಿಗೆದ್ದ ಸ್ಪೀಕರ್,ಅರಣ್ಯ ಇಲಾಖೆ ಮುಳ್ಳಿನ ಗಿಡ ನೆಟ್ಟಿದ್ದು ಸರಿಯಲ್ಲ,ರಾಜಮಹಾರಾಜರು ಕೆರೆಗಳನ್ನ ಕಟ್ಟಿದ್ದು ಮುಳ್ಳು ಬೆಳೆಸೋಕಾ ಅಂತ ಕಿಡಿಕಾರಿದ್ರು..ಅರಣ್ಯ ಇಲಾಖೆಯನ್ನ ತರಾಟೆಗೆ ತೆಗೆದುಕೊಂಡ ಸ್ಪೀಕರ್ ಸ್ವಾಭಿಮಾನ ವಿದ್ರೆ ಜನರೇ ಕೆರೆಗಳಿಗೆ ನುಗ್ಗಿ ಜಾಲಿಯನ್ನ ತೆಗೆಯುತ್ತಾರೆ ಅಂತ ಎಚ್ಚರಿಕೆಯನ್ನ ನೀಡಿದ್ರು.

ಹಾಸನದ ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಯ ಹಲವು ಕೆರೆಗಳಿಗೆ ಕ್ಯಾನಲ್ ಮೂಲಕ‌ನೀರು ಪೂರೈಸಲಾಗ್ತಿದೆ. ಆದರೆ ಕಳೆದ 33 ದಿನಗಳಿಂದ ಹೇಮಾವತಿಯನ್ನ ಹರಿಸಿಲ್ಲ. ಇದರಿಂದ ತಿಪಟೂರು, ತುರುವೇಕೆರೆ, ಕುಣಿಗಲ್, ಚಿಕ್ಕನಾಯಕನಹಳ್ಳಿ, ತುಮಕೂರು, ಸಿರಾ ನಗರಗಳಿಗೆ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ ಅಂತ ಶಾಸಕ ಮಾಧುಸ್ವಾಮಿ,ಮಸಾಲೆ ಜಯರಾಂ,ನಾಗೇಶ್,ಕುಣಿಗಲ್ ಶಾಸಕ ರಂಗನಾಥ್ ಪ್ರಸ್ತಾಪಿಸಿದ್ರು.

ಹೇಮಾವತಿಯೇನು ಹಾಸನ ರಾಜಕಾರಣಿಗಳ ಸೊತ್ತೇ, ಅವರು ಇಷ್ಟ ಬಂದಂತೆ ಮಾಡೋಕೆ ಅಂತ ಪರೋಕ್ಷವಾಗಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ಧ ಹರಿಹಾಯ್ದ್ರು..ಸ್ಪೀಕರ್ ಪದೇ ಪದೇ ಮನವಿ ಮಾಡಿದ್ರೂ ಮೊದಲು ನೀರು ಹರಿಸುವ ವ್ಯವಸ್ಥೆ ಮಾಡಿ ಆಕ್ರೋಶವ್ಯಕ್ತಪಡಿಸಿದ್ರು..ಈ ವೇಳೆ ಉತ್ತರಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಮಸ್ಯೆ ಪರಿಸುವ ಕೆಲಸ ಮಾಡ್ತೇನೆ ಅಂತ ಭರವಸೆ ನೀಡಿದ್ರು..

ಶಾಸಕ ಪಿ.ರಾಜೀವ್ ಅವರು ಬರದ ಮೇಲಿನ ಅಲ್ಪಕಾಲಾವಧಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಸದನದಲ್ಲಿ ಕೇವಲ ನಾಲ್ಕು ಸಚಿವರು ಇದ್ದಿದ್ದನ್ನು ಗಮನಿಸಿದ ಬಿಜೆಪಿಯ ರೇಣುಕಾಚಾರ್ಯ ಸರ್ಕಾರದ ವಿರುದ್ದ ಹರಿಹಾಯ್ದರು‌...ತಕ್ಷಣ ಎದ್ದ ಪ್ರತಿಪಕ್ಷ ನಾಯಕ ಯಡಿಯೂರಪ್ಪ.

ಈ ಪರಿಸ್ಥಿತಿಯನ್ನು ಗಮನಿಸಿದ್ರೆ ಇವರಿಗೆ ಸದನ ನಡೆಸುವ ಆಸಕ್ತಿ ಇದ್ದಂತಿಲ್ಲ.ಸರ್ಕಾರದ ಧೋರಣೆಯನ್ನು ಪ್ರತಿಭಟಿಸಿ ಸಭಾತ್ಯಾಗ ಮಾಡುವುದಾಗಿ ಘೋಷಿದ್ರು.ತಕ್ಷಣ ಆಡಳಿತ ಪಕ್ಷದ ಕಡೆಯಿಂದಲೂ ಟೀಕೆಗಳು ತೂರಿಬಂದ್ವು.

ಒಬ್ಬರೇ ಸಚಿವರನ್ನು ಇಟ್ಟುಕೊಂಡು ಸದನ ನಡೆಸಿದ ಉದಾಹರಣೆ ಇದೆ ಎಂದು ಜೆಡಿಎಸ್ ನ ಶಿವಲಿಂಗೇಗೌಡ ಮೂದಲಿಸಿದ್ರೆ,ಊಟದ ಸಮಯ ಶುಗರ್ ಬೇರೆ ಇದೆ ಹೋಗಲಿ ಬಿಡಿ ಎಂದು ಕಾಂಗ್ರೆಸ್ ಶಾಸಕರು ಟೀಕೆ ಮಾಡಿದ್ರು..ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಸಭಾಧ್ಯಕ್ಷರ ಪೀಠದ ಬಳಿಗೆ ತೆರಳಿ ಸದನವನ್ನು‌ಮುಂದೂಡುವಂತೆ ಮನವಿ ಮಾಡಿದ್ರು. ಅದರಂತೆ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಸದನವನ್ನ ಮುಂದೂಡಿದರು.

ಇನ್ನು.ಬೆಣ್ಣೆಹಳ್ಳ ಮತ್ತು ತುಪ್ಪರಿಹಳ್ಳ ಯೋಜನೆ ಜಾರಿಯಾಗಿಲ್ಲ,ಇದ್ರಿಂದ ನಮ್ಮ‌ಭಾಗಕ್ಕೆ ಸಾಕಷ್ಟು ಸಮಸ್ಯೆ ಎದುರಾಗಿದೆ ಅಂತ ಶಂಕರ್ ಮುನೇನಕೊಪ್ಪ ಅಳಲು ತೋಡಿಕೊಂಡ್ರು..ಈ ವೇಳೆ ನರಗುಂದ ಶಾಸಕ ಸಿ.ಸಿ ಪಾಟೀಲ್, ಕನಕಪುರ ಬಂಡೆ ಹೆಸರಿನ ನೀರಾವರಿ ಸಚಿವರು ಉತ್ತರ ಕರ್ನಾಟಕ ಭಾಗಕ್ಕೂ ಆ ಶಕ್ತಿಯನ್ನು ಪ್ರದರ್ಶನ ಮಾಡಬೇಕು.ಅವರು ಬಹಳ ಡೈನಾಮಿಕ್ ಮಂತ್ರಿಯಿದ್ದಾರೆ. ಅವರು ಯೋಜನೆ ಜಾರಿ ಮಾಡ್ತಾರೆ ಅನ್ನೋ ವಿಶ್ವಾಸವಿದೆ ಅಂತ ಡಿಕೆಶಿ ಕಾಲೆಳೆಯುವ ಕೆಲಸ ಮಾಡಿದರು.

ಇದಕ್ಕೆ ಧ್ಚನಿಗೂಡಿಸಿದ ಸ್ಪೀಕರ್ ರಮೇಶ್ ಕುಮಾರ್ ಶಿವಕುಮಾರ್ ನಿಮ್ಮ ಸಾಮರ್ಥ್ಯ ಹೇಗಿದೆ ನೋಡಿ ಅಂತ ಕಿಚಾಯಿಸಿದ್ರು...ಇದರ ಬಳಿಕ ಸ್ಪೀಕರ್ ರಮೇಶ್ ಕುಮಾರ್ ಬೆಂಗಳೂರಿ‌ನ ಫ್ಲೆಕ್ಸ್ ಬ್ಯಾನರ್ ಅಳವಡಿಕೆಗೆ ಹೈಕೋರ್ಟ್ ಛೀಮಾರಿಹಾಕಿದೆ,ನಾವು ಇಲ್ಲೂ ಹಾಕಿಸಿಕೊಳ್ಳಬೇಕಾ ಮೊದಲು ಸಂಜೆಯೊಳಗೆ ಫ್ಲೆಕ್ಸ್ ಬ್ಯಾನರ್ ತೆರವು ಮಾಡಿಸಿ ಅಂತ ಕಾನೂನು ಸಚಿವ ಕೃಷ್ಣಭೈರೇಗೌಡರಿಗೆ ಸಲಹೆ ನೀಡಿದ್ರು.

ಶಿವಕುಮಾರ್ ಜೋಹಳ್ಳಿ,ಪೊಲಿಟಿಕಲ್ ಬ್ಯೂರೋ,ಟಿವಿ೫,ಬೆಂಗಳೂರು

Next Story

RELATED STORIES