Top

ಫೇಸ್‌ಬುಕ್‌ನಲ್ಲಿ ಅಪರಿಚಿತರಿಗೆ ಫ್ರೆಂಡ್ ಆಗೋ ಮುನ್ನ ಎಚ್ಚರ..!

ಫೇಸ್‌ಬುಕ್‌ನಲ್ಲಿ ಅಪರಿಚಿತರಿಗೆ ಫ್ರೆಂಡ್ ಆಗೋ ಮುನ್ನ ಎಚ್ಚರ..!
X

ಬೆಂಗಳೂರಿನ ವಾದಿರಾಜ್ ಓದಿದ್ದು SSLC ಆದರು, ವಂಚನೆ ಮಾಡೋಕೆ ಆಯ್ಕೆ ಮಾಡ್ಕೊಂಡದ್ದು 420 ಕೆಲಸ. ಈತ ಫೇಸ್‌ಬುಕ್‌ನಲ್ಲಿ ಸುಂದರವಾಗಿ ಕಾಣೋ ಯುವತಿಯರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳಿಸಿ ಫ್ರೆಂಡ್‌ ಮಾಡ್ಕೋತಾನೆ. ಬಳಿಕ ನೀವ್ಯಾಕೆ ಮಾಡ್ಲಿಂಗ್‌, ಫಿಲ್ಮ್ ಹಾಗೂ ಸೀರಿಯಲ್‌ನಲ್ಲಿ ಆಕ್ಟ್ ಮಾಡ್ಬಾರ್ದು ಅಂತ ಮೈಂಡ್ ವಾಶ್ ಯುವತಿಯರಿಗೆ ವಂಚಿಸ್ತಾನೆ.

ಆರೋಪಿ ವಾದಿರಾಜ್​ನನ್ನು ನಂಬಿದ ಮೈಸೂರು ಮೂಲದ ಮಹಿಳೆ ಮಮತಾ ಎಂಬಾಕೆ ಮಾಡ್ಲಿಂಗ್‌ನಲ್ಲಿ ಅವಕಾಶ ಕೊಡಿಸ್ತೀನಿ ಅಂತ ನಂಬಿಸಿ ವಂಚನೆ ಮಾಡಿ ಸೇಲಂ ನಲ್ಲಿ ತಲೆಮರೆಸಿಕೊಂಡಿದ್ದ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿ ವಾದಿರಾಜ್‌ನನ್ನ ಬಂಧಿಸಿದ್ದಾರೆ. ಈತನ ವಿಚಾರಣೆ ಮಾಡಿದಾಗ ಕೇವಲ ಮಮತಾರಿಗೆ ಮಾತ್ರವಲ್ಲದೇ, ಹಲವು ಯುವತಿಯರಿಗೆ ವಂಚನೆ ಮಾಡಿದ್ದು, ಬೆಳಕಿಗೆ ಬಂದಿದೆ. ವಾದಿರಾಜ್ ಯಶವಂತಪುರ ಬಳಿಯ ನವನಿಧಿ ಲಾಡ್ಜ್‌ನಲ್ಲಿ ಭೇಟಿಯಾಗ್ತಿದ್ದ, ಅಲ್ದೇ 20 ಯುವತಿಯಿಂದ ತಲಾ 5 ರಿಂದ 10 ಲಕ್ಷದವರೆಗೆ ವಂಚಿಸಿದ್ದಾನೆ.

ಸದ್ಯ ಬಂಧಿತ ಆರೋಪಿಯಿಂದ 3 ಲಕ್ಷ ನಗದು ಹಾಗೂ 50 ಗ್ರಾಂ ಚಿನ್ನಾಭರಣವನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಅನ್ನೊ ಹಂಬಲದಲ್ಲಿ ಅಪರಿಚಿತ ಫೇಸ್‌ಬುಕ್‌ ಫ್ರೆಂಡ್‌ಗಳನ್ನು ನಂಬೋ ಮುನ್ನ ಹುಷಾರಾಗಿದ್ರೆ ಒಳಿತು.

Next Story

RELATED STORIES