ಕಾರ್ಯಕರ್ತರ ಆಕ್ರೋಶಕ್ಕೆ ಪ್ರತಾಪ್ಸಿಂಹ ಹೇಳಿದ್ದೇನು..?

X
TV5 Kannada12 Dec 2018 7:24 AM GMT
ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡ ಹಿನ್ನಲೆಯಲ್ಲಿ ಬಿಜೆಪಿ ಸಂಸದ ಪ್ರತಾಪ್ಸಿಂಹ ಫೇಸ್ಬುಕ್ನಲ್ಲಿ ಸೋಲಿನ ಕುರಿತು ಪೋಸ್ಟ್ ಮಾಡಿದ್ದರೆ.
ಕಾರ್ಯಕರ್ತರನ್ನು ಉದ್ದೇಶಿಸಿ ಪ್ರತಾಪ್ ಸಿಂಹ ಪೋಸ್ಟ್ ಮಾಡಿದ್ದು, ಕಾರ್ಯಕರ್ತರೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೆಂಬಲಿಗರಿಗೆ ಸೋಲು ಬೇಸರ ತರುತ್ತೆ ನಿಜ. ಆದರೆ ಯಾಕಿಷ್ಟು ವಿಚಲಿತರಾಗಿದ್ದೀರಿ, ಜನರನ್ನು ದೂಷಿಸುವಂಥ ವೈರಾಗ್ಯದ ಮೆಸೇಜುಗಳೇಕೆ? ಸೋಲಿನ ಮನಸ್ಥಿತಿ ಏಕೇ? ಎಂದು ಪ್ರಶ್ನೆ ಮಾಡುವ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ.
15 ವರ್ಷ ಒಂದೆ ಮುಖ ನೋಡುತ್ತಾ ಇದ್ದರೆ ಹೇಗೆ? ಬದಲಾವಣೆ ಬೇಕು ಅನ್ನಿಸುತ್ತದೆ. ಇನ್ನು 4 ತಿಂಗಳು ಕಷ್ಟ ಪಡೋಣ. ಫೇಸ್ಬುಕ್, ಟ್ವಿಟರ್,ವ್ಯಾಟ್ಸಪ್ ಆಚೆಗಿನ ಜನತಾ ನ್ಯಾಯಾಲಯದ ಮುಂದೆ ಹೋಗೋಣ.ಮಾಡಿರುವ ಕೆಲಸಗಳನ್ನು ಮನವರಿಕೆ ಮಾಡಿಕೊಡೋಣ. 2019ರಲ್ಲಿ ಮತ್ತೆ ಮೋದಿಜಿಯನ್ನು ಪ್ರಧಾನಿ ಮಾಡಿ ಖುಷಿ ಪಡೋಣ ಎಂದು ಸಂಸದ ಪ್ರತಾಪ್ಸಿಂಹ ಹೇಳಿದರು.
Next Story