Top

ಸಾವಿನ ಮನೆಗೆ ತೆರಳಿ ಸಾಂತ್ವನ ಹೇಳಿದ ಕೋತಿ!

ಸಾವಿನ ಮನೆಗೆ ತೆರಳಿ ಸಾಂತ್ವನ ಹೇಳಿದ ಕೋತಿ!
X

ಮಂಗವೊಂದು ಸಾವಿನ ಮನೆಗೆ ತೆರಳಿ ತನ್ನದೆ ಭಾಷೆಯಲ್ಲಿ ಶೃದ್ಧಾಂಜಲಿ ಸಲ್ಲಿಸಿ ಮನೆಯವರಿಗೆ ಸಾಂತ್ವನ ಹೇಳಿರುವ ಘಟನೆ ಗದಗ ಜಿಲ್ಲೆ‌ಯ ನರಗುಂದ ಪಟ್ಟಣದಲ್ಲಿ ನಡೆದಿದೆ.

71 ವರ್ಷದ ನಾಗನಗೌಡ ಪಾಟೀಲ್ ಎಂಬುವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಕುಟುಂಬದವರು ಶೋಕದಲ್ಲಿದ್ದರು. ಅಷ್ಟರಲ್ಲಿ ಕಪಿಯೊಂದು ಮೃತರ ಮನೆಗೆ ಧಾವಿಸಿದೆ. ಅರ್ಚಕರು ಪೂಜೆ ಸಲ್ಲಿಸುವ ವೇಳೆ ಶವದಬಳಿ ಸುಮ್ಮನೆ ಕೂತು ಶೃದ್ಧಾಂಜಲಿ ಸಲ್ಲಿಸಿದೆ‌.‌ ನಂತರ ಮನೆಯಿಂದ ಹೊರಬಂದು, ಮೃತನ ಹಿರಿಯ ಪುತ್ರ ಮರಿಗೌಡ ಅವರ ಪಕ್ಕದಲ್ಲಿ‌ ಹಾಗೂ ಅವರ ಹೆಗಲೇರಿ ತಲೆಮೇಲೆ ಕೈಯಾಡಿಸಿ ಅವರ ಕಿವಿಯಲ್ಲಿ ತನ್ನದೆ ಭಾಷೆಯಲ್ಲಿ ಸಾಂತ್ವಾನ ಹೇಳಿದೆ.

ಈ ವೇಳೆ ನೂರಾರು ಸಂಖ್ಯೆಯಲ್ಲಿ ಜನರಿದ್ದರೂ ಯಾರೋಬ್ಬರಿಗೂ ತೊಂದರೆ ಮಾಡದೆ, ಕುಟುಂಬದವರಿಗೆ ಪ್ರೀತಿ, ಕನಿಕರ ತೋರಿಸಿದೆ. ಮಂಗನ ಈ ವರ್ತನೆ ಸಾರ್ವಜನಿಕರನ್ನು ಒಂದು ವೇಳೆ ನಿಬ್ಬೆರಗಾಗುವಂತೆ ಮಾಡಿತು.

Next Story

RELATED STORIES