Top

ಕಾಂಗ್ರೆಸ್ ನಲ್ಲಿ ಮಹಿಳಾ ಶಾಸಕರಿಗೆ ಬೆಲೆ ಇಲ್ವಾ: ಲಕ್ಷ್ಮಿ ಹೆಬ್ಬಾಳ್ಕರ್

ಕಾಂಗ್ರೆಸ್ ನಲ್ಲಿ ಮಹಿಳಾ ಶಾಸಕರಿಗೆ ಬೆಲೆ ಇಲ್ವಾ: ಲಕ್ಷ್ಮಿ ಹೆಬ್ಬಾಳ್ಕರ್
X

ಜಾರಕಿಹೊಳಿ ಬ್ರದರ್ಸ್​ ಪಿಆರ್ ಒ ಹೇಳಿಕೆ ವಿಚಾರದ ಬಗ್ಗೆ ಅಸಮಾಧಾನಗೊಂಡಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕಾಂಗೆಸ್ ಮುಖಂಡ ವೇಣುಗೋಪಾಲ್ ಗೆ ದೂರವಾಣಿ ಮೂಲಕ ದೂರು ನೀಡಿದ್ದಾರೆ.

ಅಧಿವೇಶನದ ಸ್ವಾಗತ ಕೋರುವ ಫ್ಲೆಕ್ಸ್ ವಿಚಾರದಲ್ಲಿ ಮತ್ತೆ ಜಾರಕಿಹೊಳಿ ಬ್ರದರ್ಸ್ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಸಚಿವ ರಮೇಶ್ ಜಾರಕಿಹೊಳಿ ಬ್ರದರ್ಸ್ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಬಹಿರಂಗ ವಾಕ್ಸಮರ ಮುಂದುವರಿದಿದೆ.

ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ಮುಖಂಡ ವೇಣುಗೋಪಾಲ್​ಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ದೂರವಾಣಿಯ ಮೂಲಕ ಬುಧವಾರ ವೇಣುಗೋಪಾಲ್ ಗೆ ದೂರು ನೀಡಲಾಗಿದೆ.

ಕಾಂಗ್ರೆಸ್ ನಲ್ಲಿ ಮಹಿಳಾ ಶಾಕರಿಗೆ ಬೆಲೆಯೇ ಇಲ್ವಾ ನನ್ನನ್ನ ಪಿಆರ್ ಒ ಅನ್ನುವುದು ಎಷ್ಟು ಸರಿ , ಜಿಲ್ಲೆಯ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ. ಮುಖ್ಯಮಂತ್ರಿಗಳು ಬೆಳಗಾವಿಗೆ ಬಂದರೆ ಸ್ವಾಗತಿಸಲು ಬಂದಿಲ್ಲ ನಾನು ಸ್ವಾಗತಿಸಿದರೆ ಬಾಯಿಗೆ ಬಂದಂತೆ ಮಾತನಾಡ್ತಾರೆ ಯಾವುದೇ ಪ್ರಗತಿ ಪರ ಸಭೆಗಳನ್ನೂ ನಡೆಸುತ್ತಿಲ್ಲ ಎಂದು ವೇಣುಗೋಪಾಲ್ ಮುಂದೆ ಲಕ್ಷ್ಮಿ ಹೆಬ್ಬಾಳ್ಕರ್ ಸಮಸ್ಯೆ ತೋಡಿಕೊಂಡರು.

Next Story

RELATED STORIES