Top

ಕರ್ನಾಟಕ ಮೀನುಗಾರರ ಮೇಲೆ ಗೋವಾ ಪೊಲೀಸರ ದಬ್ಬಾಳಿಕೆ

ಕರ್ನಾಟಕ ಮೀನುಗಾರರ ಮೇಲೆ ಗೋವಾ ಪೊಲೀಸರ ದಬ್ಬಾಳಿಕೆ
X

ಲಕ್ಷಾಂತರ ಮೌಲ್ಯದ ಮೀನುಗಳನ್ನು ಗೋವಾ ಪೊಲೀಸರು, ನಗರಸಭೆಯ ಕಸದತೊಟ್ಟಿಗೆ ಎಸೆದು, ಕರ್ನಾಟಕ ಮೀನುಗಾರರ ಮೇಲೆ ದಬ್ಬಾಳಿಕೆ ನಡೆಸಿರುವ ಘಟನೆ ಗೋವಾದ ಪಣಜಿಯಲ್ಲಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರವಿ ಲಂಬಾಣಿ ರಾಮಣ್ಣ ಲಂಬಾಣಿ ಮೀನುಗಾರನಿಗೆ ಕಿರುಕುಳ ನೀಡಿ ಅಟ್ಟಹಾಸ ಮೆರೆದಿದ್ದಾರೆ, ಅಧಿಕೃತ ಎಪ್ ಡಿ ಎ ಪ್ರಮಾಣ ಪತ್ರ ಇದ್ದರು ಸಹ ಹತ್ತು ಲಕ್ಷ ರೂಪಾಯಿ ಮೌಲ್ಯದ ಮೀನನ್ನು ಕಸದ ಬುಟ್ಟಿಗೆ ಎಸೆದು ಕಿರುಕುಳ ನೀಡಿದ್ದಾರೆ. ಇನ್ನೂ ಕನ್ನಡಿಗರ ಮೇಲಿನ ಗುಂಡಾ ವರ್ತನೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ.

ದಾಖಲೆಯಲ್ಲಿ ನಮೂದಿಸದ ಕ್ಷುಲ್ಲಕ ಕಾರಣ ನೀಡಿ ಡಂಪ್ ಯಾರ್ಡ್ ಗೆ ಮೀನುಗಳನ್ನು ಎಸೆದ ಪೊಲೀಸರು, ಫಾರ್ಮಾಲಿನ್ ನೆಪವೊಡ್ಡಿ ರಾಜ್ಯದ ಮೀನನ್ನು ಸ್ಥಗಿತ ಗೊಳಿಸಿರುವ ಗೋವಾ ಸರ್ಕಾರ ಆಹಾರ ಮತ್ತು ಮಾದಕ ವಸ್ತು ಸುರಕ್ಷತಾ ವಿಭಾಗದಿಂದ ಪ್ರಮಾಣಿಕರಿಸಿದ ಎಪ್ ಡಿ ಎ ಪ್ರಮಾಣ ಪತ್ರ ಎಲ್ಲಿಗೆ ಸಾಗಾಟವಗುತ್ತಿದೆ ಎಂದು ದಬ್ಬಾಳಿಕೆ ಮಾಡಿದ್ದರೆ.

ಕನ್ನಡಿಗರ ಮೇಲೆ ದೌರ್ಜನ್ಯ ಎಸಗುತ್ತಿರುವ ಗೋವಾ ಪೊಲೀಸರು ಮತ್ತು ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಮಾಡುತ್ತೀದ್ದರೆ.

Next Story

RELATED STORIES