Top

ಕಾಂಗ್ರೆಸ್​ಗೆ ನೈತಿಕತೆ ಇಲ್ಲ​: ಹೊರಟ್ಟಿ ಆಕ್ರೋಶ

ಕಾಂಗ್ರೆಸ್​ಗೆ ನೈತಿಕತೆ ಇಲ್ಲ​: ಹೊರಟ್ಟಿ ಆಕ್ರೋಶ
X

ಮೈತ್ರಿ ಸರಕಾರದಲ್ಲಿ ಕಾಂಗ್ರೆಸ್​ಗೆ ನೈತಿಕತೆ ಇಲ್ಲ ಎಂದು ಸಭಾಪತಿ ಸ್ಥಾನದ ಅವಕಾಶ ವಂಚಿತರಾದ ಜೆಡಿಎಸ್​ನ ಮಾಜಿ ಸಚಿವ ಬಸವರಾಜ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ.

ವಿಧಾನ ಪರಿಷತ್​ ಸಭಾಪತಿಯಾಗಿ ಬುಧವಾರ ಕಾಂಗ್ರೆಸ್ ಪಕ್ಷದ ಪ್ರತಾಪ್ ಚಂದ್ರ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದ ಬೆನ್ನಲ್ಲೇ ಬಸವರಾಜ ಹೊರಟ್ಟಿ ತಮ್ಮ ಅಸಮಧಾನ ಮಾಧ್ಯಮಗಳ ಮುಂದೆ ಹೊರಹಾಕಿದರು.

ಮೈತ್ರಿ ಸರ್ಕಾರ ರಚನೆಯಾದ ನಂತರ ಪರಿಷತ್​ಗೆ ಹಂಗಾಮಿ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಬುಧವಾರದ ಪರಿಷತ್​ ಕಲಾಪದ ವೇಳೆ ಸದನದಿಂದ ಎದ್ದು ಹೊರನಡೆದರು. ಸ್ವಲ್ಪ ಸಮಯದ ಬಳಿಕ ಸದನಕ್ಕೆ ಆಗಮಿಸಿದ ಹೊರಟ್ಟಿ ಮುಖದಲ್ಲಿ ದುಃಖದ ಛಾಯೆ ಎದ್ದು ಕಾಣುತ್ತಿತ್ತು. ಅಲ್ಲದೇ ಮಾಧ್ಯಮಗಳ ಮುಂದೆ ತಮ್ಮ ಅಸಮಧಾನ ಹೊರಹಾಕಿದರು.

ನಾನು ಯಾವುದೇ ಲಾಬಿ ಕೂಡ ನಡೆಸಿರಲಿಲ್ಲ. ಕಳೆದ ವಿಧಾನ ಸಭಾ ಚುನಾವಣೆ ಫಲಿತಾಂಶದ ನಂತರ ಬೇಷರತ್​ ಬೆಂಬಲ ಘೋಷಿಸಿ ಕಾಂಗ್ರೆಸ್​ ಸರ್ಕಾರ ರಚಿಸಲು ಮುಂದೆ ಬಂದಿತ್ತು. ಆಗಲೇ ದೇವೇಗೌಡರು ಎರಡು ದಿನ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳೋಣ ಎಂದು ತಿಳಿಸಿದ್ದರು. ಆದರೂ ಬೇಷರತ್ ಬೆಂಬಲ ಎಂದು ಕಾಂಗ್ರೆಸ್​ ಮುಂದೆ ಬಂದಿದ್ದರಿಂದ ಮೈತ್ರಿ ಸರ್ಕಾರಕ್ಕೆ ಒಪ್ಪಿಗೆ ಸೂಚಿಸಲಾಗಿತ್ತು. ಆದರೆ ಈಗ ಪ್ರತಿಯೊಂದಕ್ಕೂ ಷರತ್ತುಗಳನ್ನು ವಿಧಿಸುತ್ತಿದ್ದಾರೆ ಎಂದು ಹೊರಟ್ಟಿ ಅಸಮಾಧಾನ ತೋಡಿಕೊಂಡಿದ್ದಾರೆ.

ಈ ನಡೆಯಿಂದ ಮುಂದೆ ಮೈತ್ರಿ ಸರ್ಕಾರದ ಮೇಲೆ ಪ್ರಭಾವ ಬೀರಲಿದೆ. ಬೇಷರತ್ ಬೆಂಬಲ ಎಂದು ಕಾಂಗ್ರೆಸ್ ನಡೆದುಕೊಂಡ ರೀತಿಯಿಂದ ಬೇಸರವಾಗಿದ್ದು, ಇನ್ನು ಮುಂದೆ ತಟಸ್ಥವಾಗಿರುತ್ತೀನಿ," ಎಂದು ಆಪ್ತರಲ್ಲಿ ಬಸವರಾಜ್ ಹೊರಟ್ಟಿ ಅಸಮಾಧಾನ ಹೊರ ಹಾಕಿದ್ದಾರೆ.

Next Story

RELATED STORIES