ನ್ಯೂ ಇಯರ್ ಎಂಜಾಯ್ ಮಾಡಬೇಕಾ? ಈ ಸ್ಟೋರಿ ನೋಡಿ

X
TV5 Kannada12 Dec 2018 4:44 AM GMT
ಈ ವರ್ಷ ಹೊಸ ವರ್ಷ ಆಚರಣೆಯಲ್ಲಿ ಡಿ.ಜೆ ಗೆ ಬ್ರೇಕ್ ಹಾಕಲಾಗಿದೆ. ಪಬ್ ಒಳಗೆ ಮದ್ಯಪಾನ ಸೇವಿಸಿ ಡಿಜೆ ಮ್ಯೂಸಿಕ್ ಹಾಕಿ ನೈಟ್ ಫುಲ್ ಆಚರಣೆ ಮಾಡಬರದೆಂದು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಆದೇಶ ನೀಡಲಾಗಿದೆ.
ಮ್ಯೂಸಿಕ್ ಸೌಂಡ್ ಇಟ್ಟು ಪಾರ್ಟಿ ಎಂಜಾಯ್ ಮಾಡಬೇಕು ಅನ್ನೊರ ಆಸೆ ಇರುವವರಿಗೆಲ್ಲ ಈ ಬಾರಿ ನ್ಯೂ ಇಯರ್ ಆಚರಣೆಯಲ್ಲಿ ಸ್ವಲ್ಪ ಬೇಸರ ತರಬಹುದು. ಪಾರ್ಟಿಗಳ ಸೌಂಡ್ ವಾಲ್ಯೂಮ್ ಮ್ಯೂಟ್ ಮಾಡಿ ಆಚರಣೆ ಮಾಡಬೇಕಾಗುತ್ತಾದೆ.
ಈಗಾಗಲೇ ಸಿಲಿಕಾನ್ ಸಿಟಿಯ ಎಲ್ಲಾ ಬಾರ್ ಹಾಗೂ ಹೋಟೆಲ್ ಮಾಲೀಕರಿಗೆ ನೋಟಿಸ್ ನೀಡಿದ್ದು, ಪಾರ್ಟಿ ಹೆಸರಲ್ಲಿ ಸಾರ್ವಜನಿಕರಿಗೆ ತೊಂದರೆ ಮಾಡುವುದನ್ನು ತಡೆಯಲು ಮಂಡಳಿ ಮುಂದಾಗಿದೆ. ಸಂಬಂಧ ಪಟ್ಟ ಪೊಲೀಸ್ ಇಲಾಖೆಗೂ ಈ ಬಗ್ಗೆ ಆದೇಶವನ್ನು ಮಾಲಿನ್ಯ ಮಂಡಳಿ ನೀಡಿದೆ. ಇನ್ನೂ ನಿಯಮ ಮೀರಿ ಆಚರಣೆ ನೆಡೆಸಲು ಮುಂದದರೆ ಲೈಸನ್ಸ್ ಕ್ಯಾನ್ಸಲ್ ಆಗುವ ಸಾಧ್ಯತೆ ಇದೆ.
Next Story