Top

ಟ್ರಂಪ್ `ಈಡಿಯೆಟ್’ ಫೋಟೋ ವಿವಾದಕ್ಕೆ ಗೂಗಲ್ ಸಿಇಒ ತೀಕ್ಷ್ಣ ಉತ್ತರ!

ಟ್ರಂಪ್ `ಈಡಿಯೆಟ್’ ಫೋಟೋ ವಿವಾದಕ್ಕೆ ಗೂಗಲ್ ಸಿಇಒ ತೀಕ್ಷ್ಣ ಉತ್ತರ!
X

ಈಡಿಯೆಟ್​ ಎಂದು ಸರ್ಚ್ ಮಾಡಿದರೆ ಅಮೆರಿಕದ ಅಧ್ಯಕ್ಷ ಟ್ರಂಪ್ ಫೋಟೋ ಬರುತ್ತಿರುವುದಕ್ಕೆ ರಿಪಬ್ಲಿಕ್ ಪಕ್ಷದ ಆಕ್ಷೇಪಕ್ಕೆ ಗೂಗಲ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಂದರ್ ಪಿಚಾಯಿ ತಿರುಗೇಟು ನೀಡಿದ್ದಾರೆ.

ಗೂಗಲ್ ಸಂಸ್ಥೆ ಜನಸಾಮಾನ್ಯರು ತಮ್ಮ ಅಭಿಪ್ರಾಯವನ್ನು ಕ್ರಿಯಾಶೀಲವಾಗಿ ಹಂಚಿಕೊಳ್ಳುವುದಕ್ಕೆ ಗೂಗಲ್ ವೇದಿಕೆ ಕಲ್ಪಿಸಿಕೊಟ್ಟಿದೆ. ಆದರೆ ಈ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿಲ್ಲ ಎಂದು ಸುಂದರ್ ಪಿಚಾಯಿ ಪ್ರತಿಕ್ರಿಯಿಸಿದ್ದಾರೆ.

ಒಂದು ಕಂಪನಿಯಾಗಿ ಹಾಗೂ ಉದ್ಯೋಗವಾಗಿ ನಾವು ಜನರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದ್ದೇವೆ. ಈ ನಿಟ್ಟಿನಲ್ಲಿ ಸಂಸ್ಥೆಯ ಉದ್ಯೋಗಿಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಜಗತ್ತು ಒಪ್ಪಿಕೊಳ್ಳಲು ಆಗದ ಹಲವು ವಿಷಯಗಳ ಬಗ್ಗೆ ನಾವು ಕೆಲಸ ಮಾಡಲಿದ್ದೇವೆ. ಮಾಡುತ್ತಿದ್ದೇವೆ ಎಂದು ಪಿಚಾಯಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಗೂಗಲ್ ಚೀನಾದಲ್ಲಿ ಚೈನೀಸ್ ಭಾಷೆಯಲ್ಲಿ ಸರ್ಚ್ ಇಂಜಿನ್ ಆರಂಭಿಸಿದ ಕೆಲವೇ ವರ್ಷದಲ್ಲಿ ರದ್ದುಗೊಳಿಸಿತ್ತು. ಸೆನ್ಶರ್ ಹಾಗೂ ಭದ್ರತಾ ದೃಷ್ಟಿಯಿಂದ 2010ರಲ್ಲಿ ಚೈನೀಸ್ ಭಾಷೆಯಲ್ಲಿದ್ದ ಸರ್ಚ್ ಇಂಜಿನ್ ವಾಪಸ್ ಪಡೆಯಲಾಗಿತ್ತು. ಭದ್ರತೆ ದೃಷ್ಟಿಯಿಂದಲೂ ಹಲವು ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಪಿಚಾಯ್ ವಿವರಿಸಿದರು.

Next Story

RELATED STORIES