Top

ಫಲಿಸಲಿಲ್ಲ ವಸುಂಧರಾ ರಾಜೆ ಪೂಜೆ..!

ಫಲಿಸಲಿಲ್ಲ ವಸುಂಧರಾ ರಾಜೆ ಪೂಜೆ..!
X

ರಾಜಸ್ಥಾನ: ಇಂದು ಪಂಚರಾಜ್ಯ ಚುನಾವಣೆ ಫಲಿತಾಂಶ ಹಿನ್ನೆಲೆ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ತ್ರಿಪುರ ಸುಂದರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದರು.

700 ವರ್ಷ ಹಿಂದಿನ ತ್ರಿಪುರ ಸುಂದರಿ ದೇವಸ್ಥಾನಕ್ಕೆ ಭೇಟಿ ನೀಡಿದ ವಸುಂಧರಾ ರಾಜೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಗೆಲುವಿಗಾಗಿ ಪ್ರಾರ್ಥಿಸಿದರು.

2013ರಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ವಸುಂಧರಾ ರಾಜೆ, ರಾಜಸ್ಥಾನದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಆದರೆ ಈ ಬಾರಿಯ ಚುನಾವಣೆ ರಾಜೆ ಪಾಲಿಗೆ ಕಠಿಣವಾಗಿದ್ದು, ರಾಜೆ ಆಡಳಿತ ಒಪ್ಪದ ರಾಜಸ್ಥಾನದ ಮತದಾರ ಈ ಬಾರಿ ಕಾಂಗ್ರೆಸ್‌ನತ್ತ ವಾಲಿದ್ದಾನೆ.

Next Story

RELATED STORIES