Top

ದೈಹಿಕ, ಮಾನಸಿಕ ನೋವು ಮರೆಯಲು ದಚ್ಚು ದಿಟ್ಟ ನಿರ್ಧಾರ

ದೈಹಿಕ, ಮಾನಸಿಕ ನೋವು ಮರೆಯಲು ದಚ್ಚು ದಿಟ್ಟ ನಿರ್ಧಾರ
X

ಸ್ಯಾಂಡಲ್​ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಡಿ ಬಾಸ್ ದಚ್ಚು ಈಸ್ ಬ್ಯಾಕ್. ಪೂಜ್ಯ ಸಮಾನ ಅಂಬಿ ಅಗಲಿಕೆ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದ ದಚ್ಚು, ನೋವು ಮರೆತು ಅಖಾಡಕ್ಕೆ ಇಳಿದಿದ್ದಾರೆ. ಅಭಿಮಾನಿಗಳ ನೆಚ್ಚಿನ ದಾಸನ ಕಾರ್ಯವೈಖರಿಗೆ ಚಿತ್ರರಂಗವೇ ಬೆಚ್ಚಿಬಿದ್ದಿದೆ.

ಕನ್ನಡ ಚಿತ್ರರಂಗದ ನಂಬರ್ ಒನ್ ಮಾಸ್ ಹೀರೋ ಅಂದ್ರೆ ಅದು ಒನ್ ಅಂಡ್ ಓನ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್. ಬಾಕ್ಸ್ ಆಫೀಸ್ ಸುಲ್ತಾನನಾಗಿ, ಅಭಿಮಾನಿಗಳ ನೆಚ್ಚಿನ ಡಿ ಬಾಸ್ ಆಗಿ ದಚ್ಚು ಸದಾ ಸದ್ದು ಮಾಡ್ತಾನೇ ಇರ್ತಾರೆ. ಅದ್ರಲ್ಲೂ ಹಗಲಿರುಳು ದುಡಿಯೋ ತನ್ನ ಕಾರ್ಯವೈಖರಿಯಿಂದ ಎಲ್ಲರ ಹುಬ್ಬೇರಿಸೋ ಜಾಯಮಾನ ದಾಸನದ್ದು ಅಂದ್ರೆ ತಪ್ಪಾಗಲ್ಲ.

ದೈಹಿಕ, ಮಾನಸಿಕ ನೋವು ಮರೆಯಲು ದಚ್ಚು ದಿಟ್ಟ ನಿರ್ಧಾರ

ನೋವು ಮರೆತು ಅಖಾಡಕ್ಕೆ ಇಳಿದೇ ಬಿಟ್ರು ಒಡೆಯ ಡಿ ಬಾಸ್

ಯಜಮಾನ ಚಿತ್ರದ ಸಾಂಗ್ ಶೂಟಿಂಗ್​ಗೆ ಅಂತ ಸ್ವೀಡನ್​ಗೆ ತೆರಳಿದ್ದ ದಾಸ ದರ್ಶನ್, ತಂದೆ ಸಮಾನ ಅಂಬಿ ಅಗಲಿಕೆಯ ವಿಚಾರ ಕೇಳಿ ಕಂಗಾಲಾಗಿದ್ರು. ಅಲ್ಲಿಂದ ಶೂಟಿಂಗ್ ನಿಲ್ಲಿಸಿ, ಬೆಟ್ಟದಷ್ಟು ನೋವನ್ನ ಮನಸ್ಸಲ್ಲೇ ಇಟ್ಟುಕೊಂಡು, ಎರಡ್ಮೂರು ಫ್ಲೈಟ್ಸ್ ಬದಲಾಯಿಸಿಕೊಂಡು ಅಂಬಿ ಅಂತ್ಯಕ್ರಿಯೆಯಲ್ಲಿ ಭಾಗಿಯಾದ್ರು.

ಅಷ್ಟೇ ಅಲ್ಲ, ಸಹೋದರ ಸಮಾನನಾದ ಅಭಿಷೇಕ್ ಹಾಗೂ ತಾಯಿ ಸಮಾನ ಸುಮಲತಾ ಅಂಬರೀಶ್​ಗೆ ತಾನಿದ್ದೇನೆ ಅನ್ನೋ ಧೈರ್ಯ ಸ್ಥೈರ್ಯ ತುಂಬಿದ್ರು. ಮನೆ ಮಗನಂತೆ ಎಲ್ಲಾ ಕಾರ್ಯಗಳನ್ನ ಹತ್ತಿರವಿದ್ದೇ ನಿಭಾಯಿಸಿದ್ರು. ಇದೆಲ್ಲಾ ಮಾನಸಿಕ ನೋವಾದ್ರೆ, ಮೈಸೂರಿನಲ್ಲಿ ನಡೆದ ಕಾರ್ ಆ್ಯಕ್ಸಿಡೆಂಟ್​ನಿಂದ ಗಾಯಗೊಂಡ ದಚ್ಚುಗೆ ಕೈ ಪೆಟ್ಟಾಗಿ ಅದೂ ಕೂಡ ಎಲ್ಲಿಲ್ಲದ ನೋವು ಕೊಡಲು ಆರಂಭಿಸಿತ್ತು.

ಆದ್ರೀಗ ಆ ದೈಹಿಕ ಹಾಗೂ ಮಾನಸಿಕ ನೋವನ್ನ ಮರೆಯಲು ದಚ್ಚು ಕೈಕಟ್ಟಿ ಮನೆಯಲ್ಲಿ ಕೂರದೆ ಶೂಟಿಂಗ್​ಗೆ ಮರಳಿದ್ದಾರೆ. ಹೌದು.. ಸಂದೇಶ್ ನಾಗರಾಜ್ ನಿರ್ಮಾಣದ ಹಾಗೂ ಎಂಡಿ ಶ್ರೀಧರ್ ನಿರ್ದೇಶನದ ಒಡೆಯ ಸಿನಿಮಾದ ಶೂಟಿಂಗ್ ಶುರುಮಾಡಿದ್ದಾರೆ ದಚ್ಚು. ದರ್ಶನ್ ಎಲ್ಲೇ ಹೋದ್ರೂ ಅವ್ರನ್ನ ಫಾಲೋ ಮಾಡೋ ಒಂದು ದೊಡ್ಡ ಅಭಿಮಾನಿ ಬಳಗ ಇದ್ದೇ ಇರುತ್ತೆ. ಅದ್ರಂತೆ ನೆಚ್ಚಿನ ನಾಯಕನಟನನ್ನ ನೋಡಲು ಫ್ಯಾನ್ಸ್ ಮುಗಿಬಿದ್ದಿದ್ದು ವಿಶೇಷ. ಡಿ ಬಾಸ್ ಡಿ ಬಾಸ್ ಅಂತ ಕೂಗಿ ಕರೆಯುತ್ತಿದ್ದ ಅಭಿಮಾನಿಗಳತ್ತ ದರ್ಶನ್ ಪ್ರೀತಿಯಿಂದ ಕೈಬೀಸಿ ಕೃತಜ್ಞತೆ ಸಲ್ಲಿಸಿದ್ದು ನಿಜಕ್ಕೂ ಮೆಚ್ಚಲೇಬೇಕು. ಇನ್ನು ಡಿಬಾಸ್ ಸಿನಿಮಾ ಪ್ರೀತಿಗೆ ಎಂಥವ್ರೂ ಸಲಾಂ ಹೇಳಲೇಬೇಕು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES