Top

ತೆಲಂಗಾಣದಲ್ಲಿ ಜಯಭೇರಿ: 2 ದಿನದಲ್ಲಿ ಕೆಸಿಆರ್​ ಪ್ರಮಾಣ ವಚನ?

ತೆಲಂಗಾಣದಲ್ಲಿ ಜಯಭೇರಿ: 2 ದಿನದಲ್ಲಿ ಕೆಸಿಆರ್​ ಪ್ರಮಾಣ ವಚನ?
X

ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಕೆಸಿ ಚಂದ್ರಶೇಖರ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಸತತ ಎರಡನೇ ಬಾರಿ ಅಧಿಕಾರ ಹಿಡಿದಿದೆ.

ಡಿಸೆಂಬರ್ 7ರಂದು ನಡೆದ 119 ಸ್ಥಾನಗಳಿಗೆ ನಡೆದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮಂಗಳವಾರ ನಡೆದಿದ್ದು, ಟಿಆರ್​ಎಸ್​ ಪಕ್ಷ 85 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಕಳೆದ ಬಾರಿಗಿಂತ 22 ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಿರುವುದು ಪಕ್ಷದ ವಚ್ಚಸ್ಸು ಹೆಚ್ಚಿರುವುದಕ್ಕೆ ಸಾಕ್ಷಿಯಾಗಿದೆ.

ಅವಧಿಗೂ ಮುನ್ನವೇ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗಿದ್ದ ಚಂದ್ರಶೇಖರ್ ನಿಲುವಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಇದರ ಬೆನ್ನಲ್ಲೇ ಬಿಜೆಪಿ ಕೂಡ ಮೈತ್ರಿ ಕಡಿದುಕೊಂಡಿದ್ದಕ್ಕೆ ತೀವ್ರ ವಾಗ್ದಾಳಿ ನಡೆಸಿತ್ತು. ಅಲ್ಲದೇ ಕಾಂಗ್ರೆಸ್ ಮತ್ತು ತೆಲುಗುದೇಶಂ ಎರಡು ಜೊತೆಗೂಡಿ ಅಖಾಡಕ್ಕೆ ಇಳಿದಿದ್ದವು.

ಈ ಎಲ್ಲಾ ವಿರೋಧಗಳ ನಡುವೆಯು ಜನರು ಪೂರ್ಣ ಬಹುಮತದೊಂದಿಗೆ ಕೆ.ಸಿ. ಚಂದ್ರಶೇಖರ್ ಅವರನ್ನು ಕೈಹಿಡಿದಿದ್ದಾರೆ. ಈ ಬಾರಿ ಟಿಆರ್​ಎಸ್​ಗೆ ಒಟ್ಟಾರೆ ಮತದಾನದ ಪೈಕಿ ಶೇ.73ರಷ್ಟು ಮತಗಳು ಒಲಿದಿರುವುದು ಅವರ ವರ್ಚಸ್ಸು ಹೆಚ್ಚಲು ಕಾರಣವಾಗಿದೆ.

ಭರ್ಜರಿ ಗೆಲುವಿನೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಟಿಆರ್​ಎಸ್​ ಮುಖ್ಯಸ್ಥ ಚಂದ್ರಶೇಖರ್ ಮತ ಎಣಿಕೆಯ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಿ ಸರಕಾರ ರಚನೆಗೆ ಪ್ರಸ್ತಾಪನೆ ಸಲ್ಲಿಸಲಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆದರೆ ಬುಧವಾರವೇ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Next Story

RELATED STORIES