Top

ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗ್ತಾರೆ- ಜಗದೀಶ್ ಶೆಟ್ಟರ್

ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗ್ತಾರೆ- ಜಗದೀಶ್ ಶೆಟ್ಟರ್
X

ದೇಶದ 22 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಹೊಡೆದಾಡಿ ಬಡೆದಾಡಿ ಕಾಂಗ್ರೆಸ್ 2 ಮನೆ ತೊಕೊಂಡಿದೆ ಅಷ್ಟೇ. ಮುಂದಿನ ಪ್ರಧಾನಮಂತ್ರಿಯೂ ಕೂಡ ನರೇಂದ್ರ ಮೋದಿಯವರೇ ಆಗಲಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.

2019ರಲ್ಲಿ ಮೋದಿಯವರೇ ಪ್ರಧಾನ ಮಂತ್ರಿಯಾಗಲಿದ್ದು, ಅವರಿಗೆ ಪರ್ಯಾಯ ನಾಯಕರಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಈ ಸ್ಥಳೀಯ ಚುನಾವಣೆಗಳೆಲ್ಲ ಲೋಕಸಭೆ ಚುನಾವಣೆಗೆ ಸಮನಾಗಲು ಸಾಧ್ಯವಿಲ್ಲ ಎಂದಿದ್ದಾರೆ.

ಇನ್ನು ಆಪರೇಶನ್ ಕಮಲ ಮಾಡಲು ಹೋಗಿ, ಅಬಾರ್ಷನ್ ಮಾಡಿಕೊಂಡ್ರು ಎಂಬ ಪ್ರಿಯಾಂಕ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಶೆಟ್ಟರ್, ಪ್ರಿಯಾಂಕ ಖರ್ಗೆ ಹೇಳಿದ ಹಾಗೇ ಅಬಾರ್ಷನ್ ಏನೂ ಆಗಿಲ್ಲ. ಎಲ್ಲವೂ ಸರಾಗವಾಗಿ ನಡಿತಿದೆ. ಆದರೆ ಕಾಂಗ್ರೆಸ್ಸಿಗರೇ 18 ರಿಂದ 20 ರಾಜ್ಯಗಳಲ್ಲಿ ಅಬಾರ್ಷನ್ ಮಾಡಿಕೊಂಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎಲ್ಲವೂ ಅರ್ಥವಾಗಲಿದೆ. ಮುಂದಿನ ಬಾರಿಯೂ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Next Story

RELATED STORIES