Top

ಹಿಂದುತ್ವದ ಮುಖವಾಡ ಧರಿಸಿ ಕಾಂಗ್ರೆಸ್ ಗೆದ್ದಿದೆ- ಸಿ.ಟಿ.ರವಿ

ಹಿಂದುತ್ವದ ಮುಖವಾಡ ಧರಿಸಿ ಕಾಂಗ್ರೆಸ್ ಗೆದ್ದಿದೆ- ಸಿ.ಟಿ.ರವಿ
X

ಪಂಚರಾಜ್ಯ ಚುನಾವಣಾ ಫಲಿತಾಂಶ ಕುರಿತಂತೆ ಮಾತನಾಡಿದ ಸಿ.ಟಿ.ರವಿ, ಕಾಂಗ್ರೆಸ್ ಹಿಂದೂ ಮುಖವಾಡ ಧರಿಸಿ ಗೆಲುವು ಸಾಧಿಸಿದೆ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಹಿಂದೂ ಧರ್ಮ ಒಡೆದು ಅಲ್ಪಸಂಖ್ಯಾತರನ್ನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹಿಂದುತ್ವದ ಮುಖವಾಡ ಧರಿಸಿ, ಗೋತ್ರದ ಮೂಲಕ ತಮ್ಮನ್ನು ತಾವು ಗುರುತಿಸಿಕೊಳ್ಳುವ ಕೆಲಸವನ್ನೂ ಕಾಂಗ್ರೆಸ್ ಮುಖಂಡರು ಮಾಡಿದರು ಎಂದು ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.

ಮೋದಿ ಪ್ರಸಿದ್ಧಿ ಎಲ್ಲೂ ಕಡಿಮೆಯಾಗಿಲ್ಲ, 2019ರ ಚುನಾವಣೆಯನ್ನ ಇನ್ನಷ್ಟು ಗಂಭೀರವಾಗಿ ತೆಗೆದುಕೊಳ್ಳುವುದಕ್ಕೆ ಜನ ತೀರ್ಪು ಕೊಟ್ಟಿದ್ದಾರೆ. ಇದನ್ನು ಎಚ್ಚರಿಕೆ ಗಂಟೆಯಾಗಿ ತೆಗೆದುಕೊಂಡು ಮೋದಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಗೆದ್ದು, ಭಾರತವನ್ನ ಮುನ್ನಡೆಸುತ್ತೇವೆ ಎಂದಿದ್ದಾರೆ.

Next Story

RELATED STORIES