Top

ವಿಧಾನಸಭೆ ಅಧಿವೇಶನ: ಬಿಎಸ್​ವೈ-ಕುಮಾರಸ್ವಾಮಿ ಜಟಾಪಟಿ

ವಿಧಾನಸಭೆ ಅಧಿವೇಶನ: ಬಿಎಸ್​ವೈ-ಕುಮಾರಸ್ವಾಮಿ ಜಟಾಪಟಿ
X

ವಿಧಾನಮಂಡಲದ ಉಭಯಸದನಗಳ ಕಲಾಪ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಬರಗಾಲ,ರೈತರ ಸಮಸ್ಯೆ ಮುಂದಿಟ್ಟುಕೊಂಡು ಸದನದ ಹೊರಗೆ ಹೋರಾಟ ನಡೆಸುತ್ತಿದ್ದ ಬಿಜೆಪಿ, ಅದನ್ನ ಕೈಬಿಟ್ಟು ಸದನದ ಒಳಗೆ ಸರ್ಕಾರದ ವಿರುದ್ಧದ ಹೋರಾಟಕ್ಕೆ ಮುಂದಾಗಿದೆ.

ಸಿಎಂ ತಾಜ್ ವೆಸ್ಟೆಂಡ್ ವಾಸ್ತವ್ಯವನ್ನ ಪ್ರಸ್ತಾಪಿಸುವ ಮೂಲಕ ಪ್ರತಿಪಕ್ಷ ನಾಯಕ ಬಿಎಸ್ ವೈ ಸಿಎಂ ಕುಮಾರಸ್ವಾಮಿಯವರನ್ನ ಅಣಕಿಸುವ ಪ್ರಯತ್ನವನ್ನೂ ನಡೆಸಿದ್ರು. ಮತ್ತೊಂದು ಕಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಗ್ಗೆ ಬಿಎಸ್ ವೈ ಲೇವಡಿ ಮಾಡಿದರೆ, ಬಿಎಸ್ ವೈ ಆರೋಪಕ್ಕೆ ತಿರುಗೇಟು ನೀಡುವ ಮೂಲಕ ಸಿಎಂ ಕೂಡ ಟಾಂಗ್ ಕೊಟ್ಟರು. ಇದು ಇವತ್ತಿನ ವಿಧಾನಸಭೆ ಕಲಾಪದಲ್ಲಿ ನಡೆದ ಪ್ರಮುಖ ಘಟನೆಗಳು.

ಪ್ರಶ್ನೋತ್ತರ ಕಲಾಪದ ನಂತರ ನಿಯಮ 69 ರಡಿ ಚರ್ಚೆಯ ವೇಳೆ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಸಿಕ್ಕ ಅವಕಾಶವನ್ನ ಚೆನ್ನಾಗಿಯೇ ಬಳಸಿಕೊಂಡ್ರು. ರೈತರ ಸಾಲಮನ್ನಾ ವಿಚಾರದಲ್ಲಿ ಗೊಂದಲ ಮುಂದುವರಿದಿದೆ. ರಾಷ್ಟ್ರೀಕೃತ ಬ್ಯಾಂಕ್ ನ 52 ಸಾವಿರ ಕೋಟಿ ಸಾಲಮನ್ನಾ ಮಾಡಿಲ್ಲ. ಸಾಲಮನ್ನಾ ಮಾಡುವ ನೆಪದಲ್ಲಿ ರೈತರನ್ನ‌ವಂಚಿಸುತಿದ್ದೀರಿ. ಇಷ್ಟೇ ಅಲ್ಲ 125 ತಾಲೂಕುಗಳಲ್ಲಿ ಬರಗಾಲವಿದ್ದರೂ ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದೀರಿ ಅಂತ ವಾಗ್ದಾಳಿ ನಡೆಸಿದ್ರು.

ಸರ್ಕಾರ ಕುಡಿಯುವ ನೀರಿಗೆ ೫೦ ಲಕ್ಷ ಕೊಟ್ಟಿದ್ದೇವೆ ಅಂತೀರ,ಕಳೆದ ಬಾರಿ ಹಾಕಿದ ಬೋರ್ ವೆಲ್ ರಿಪೇರಿ ಬಿಲನ್ನೇ ಕೊಟ್ಟಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ರು..ಮೇವಿಲ್ಲದೆ ಗೋವುಗಳು ಸಾಯುತ್ತಿವೆ,ಗೋ ಶಾಲೆಗಳನ್ನೇ ತೆರೆದಿಲ್ಲ,ಮೇವು ಬ್ಯಾಂಕ್ ಸ್ತಾಪಿಸಿಲ್ಲ..ಒಂದಿಬ್ಬರು ಸಚಿವರನ್ನ ಬಿಟ್ರೆ ಯಾರೂ ಬರ ಪ್ರದೇಶಗಳಿಗೆ ಭೇಟಿಯನ್ನೇ ಕೊಟ್ಟಿಲ್ಲ ಇದೇನಾ ನಿಮ್ಮ ಆಡಳಿತದ ವೈಕರಿ ಅಂತ ಸಿಎಂಗೆ ತಿರುಗೇಟು ನೀಡಿದ್ರು.

ಇನ್ನು ನಿಯಮ ೬೯ ರಡಿ ರೈತರ ಸಾಲಮನ್ನಾ,ಬರಗಾಲದ ಚರ್ಚೆ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಹಾಲಿ ಸಿಎಂ ಕುಮಾರಸ್ವಾಮಿ ಕಾಲೆಳೆಯುವ ಪ್ರಯತ್ನ ಮಾಡಿದ್ರು. ರಾಜ್ಯದಲ್ಲಿ ಭೀಕರ ಬರಗಾಲವಿದೆ. ಆದರೆ ನಿಮ್ಮ‌ ಸಚಿವರು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡ್ತಿಲ್ಲ, ಹೇಗಿದ್ದೂ ನೀವು ತಾಜ್ ವೆಸ್ಟೆಂಡ್ ನಲ್ಲಿ ವಾಸ್ತವ್ಯ ಹೂಡಿದ್ದೀರಿ,ಅಲ್ಲಿಯೇ ಸಚಿವರಿಗೆ ಎರಡು ರೂಂ ಮಾಡಿಕೊಡಿ,ಆಗ ಹೇಗಿದ್ರೂ ಜನ ಸಮಸ್ಯೆ ಹೇಳಿಕೊಂಡು ಅಲ್ಲಿಗೆ ಬರೋಕೆ ಆಗಲ್ಲ ಅಂತ ಸಲಹೆ ಕೊಟ್ರು.

ಈ ಮೂಲಕ ಹೈಫೈ ವಾಸ್ತವ್ಯದ ಬಗ್ಗೆ ಪರೋಕ್ಷವಾಗಿ ಟಾಂಗ್ ಕೊಟ್ರು..ಇದೇ ವೇಳೆ ೧೦೪ಸ್ಥಾನ ಗೆದ್ದವರು ವಿರೊಧಪಕ್ಷದಲ್ಲಿ ಕೂತಿದ್ದೇವೆ, ೩೭ ಸೀಟು ಗೆದ್ದು ಸಿಎಂ ಆಗಿದ್ದೀರ,ಈಗಲಾದ್ರೂ ರೈತರ ಸಮಸ್ಯೆ ಕಡೆ ಗಮನಕೊಡಿ ಸ್ವಾಮಿ ಅಂತ ಸಿಎಂ ಕುಮಾರಸ್ವಾಮಿಗೆ ಕಾಲೆಳೆದ್ರು..

ಈ ವೇಳೆ ಮಧ್ಯಪ್ರವೇಶ ಮಾಡಿದ ಸಿಎಂ ಕುಮಾರಸ್ವಾಮಿ, ಜಾರ್ಖಂಡ್ ನಲ್ಲಿ ಒಬ್ಬೇ ಒಬ್ಬರು ಪಕ್ಷೇತರ ಸದಸ್ಯ ಮದುಖೋಡಾ ಗೆದ್ರು,ಒಂದು ಸ್ಥಾನ ಗೆದ್ರೂ ಅವರೇ ಸಿಎಂ ಆದ್ರು ಅನ್ನೋದನ್ನ ನೆನಪಿಸಿ ಸಮರ್ಥಿಸಿಕೊಳ್ಳೋಕೆ ಹೊರಟ್ರು..ಅಲ್ಲದೆ ಹಿಂದೆ ನಿಮ್ಮ ಜೊತೆ ಸರ್ಕಾರ ರಚಿಸಿದಾಗಲೂ ನಾವು ೩೭ ಶಾಸಕರಿದ್ದಿದ್ದು,ಆಗಲೂ ಸಿಎಂ ಆಗಿರಲಿಲ್ವೇ ಅಂತ ಬಿಎಸ್ ವೈ ಗೆ ಕುಟುಕಿದ್ರು..ಸಿಎಂ ಕೊಟ್ಟ ಹೇಳಿಕೆಗೆ ಮತ್ತೆ ಮರುಮಾತನಾಡದೆ ಬಿಎಸ್ ವೈ ನಂತರ ಬರಗಾಲದ ಬಗ್ಗೆ ಚರ್ಚೆಯನ್ನ ಮುಂದುವರಿಸಿದ್ರು.

ಕಂದಾಯ, ಲೋಕೋಪಯೋಗಿ, ಜಲಸಂಪನ್ಮೂಲ ಇಲಾಖೆಯಲ್ಲಿ ನಡೆಯುವ ಎಂಜಿನಿಯರ್ ವರ್ಗಾವಣೆಯ ದಂಧೆಯ ಕರಾಳಮುಖವನ್ನ ಪ್ರತಿಪಕ್ಷ ನಾಯಕ ಬಿಎಸ್ ವೈ ಬಿಚ್ಚಿಟ್ರು. ರಾಜ್ಯ ಚೀಫ್ ಎಂಜಿನಿಯರ್ ಹುದ್ದೆಗೆ ೧೦ ಕೋಟಿ,ಮುಖ್ಯ ಯೋಜನಾಧಿಕಾರಿ ಹುದ್ದೆಯ ವರ್ಗಾವಣೆಗೂ 10 ಕೋಟಿ,ಲೋಕೋಪಯೋಗಿ ಇಲಾಖೆಯ ಚೀಫ್ ಎಂಜಿನಿಯರ್ ವರ್ಗಾವಣೆಗೂ ೧೦ ಕೋಟಿ. ನೀರಾವರಿ ನಿಗಮದ ಎಂಜಿನಿಯರ್ಸ್ ವರ್ಗಾವಣೆಗೆ ೧೦ ಕೋಟಿ..ರಾಜ್ಯದ ನಾಲ್ಕು ಜೋನ್ ಗಳ ವಿಭಾಗೀಯ ಎಂಜಿನಿಯರ್ಸ್ ವಾರ್ಗಾವಣೆಗೆ 5 ಕೋಟಿ. ಕಾರ್ಯಪಾಲಕ ಎಂಜಿನಿಯರ್ಸ್ ಹುದ್ದೆಗೆ 50 ಲಕ್ಷ ಹಣವನ್ನ ಲಂಚವಾಗಿ ನೀಡಬೇಕು.

ಇದರ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ್ರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿರೋದು ಯಾಕೆ ಅಂತ ಪ್ರಶ್ನೆಯನ್ನ ಹಾಕಿದ್ರು...ಈ ಮೂಲಕ ಅಧಿಕಾರಿಗಳ ವರ್ಗಾವಣೆ ದಂಧೆಯನ್ನ ಎಳೆಎಳೆಯಾಗಿ ಬಿಚ್ಚಿಟ್ರು...ಇಷ್ಟೇ ಅಲ್ಲ ೧೦೦ ಕೋಟಿ ಹಣ ಬಿಡುಗಡೆ ಮಾಡಿದ್ರೆ, ೩೫ ಕೋಟಿ ಹಣವೂ ಖರ್ಚಾಗಲ್ಲ ಅಂತ ಭ್ರಷ್ಟಾಚಾರದ ಬಗ್ಗೆ ಆರೋಪಿಸಿದ್ರು..ಬಿಎಸ್ ವೈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಜೆಡಿಎಸ್ ನ ಶಿವಲಿಂಗೇಗೌಡ ಅಧಿಕಾರಿಗಳು ೧೦ ಕೋಟಿ ಕೊಟ್ಟು ಕೆಲಸಕ್ಕೆ ಬಂದು ಮಣ್ಣು ಹೊಯ್ಕೋಳ್ತಾನಾ..ಪೇಪರ್ ನಲ್ಲಿ ಬಂದಿದ್ದನ್ನೇ ಭ್ರಷ್ಟಾಚಾರ ಅನ್ನೋಕೆ ಸಾಧ್ಯವೇ ಅಂತ ತಳ್ಳಿಹಾಕಿದ್ರು.

ಇನ್ನು ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕ ಮಾಡಿಲ್ಲ, ನನ್ನ ಶಾಲೆಯಲ್ಲೇ ಶಿಕ್ಷಕರನ್ನ ನೇಮಿಸಿಲ್ಲ,ಶಿಕ್ಷಣ ಇಲಾಖೆಯೇನು ಕತ್ತೆ ಕಾಯ್ತಿದ್ಯಾ ಅಂತ ಬಿಜೆಪಿ ಸದಸ್ಯ ಮಾಧುಸ್ವಾಮಿ ಕಿಡಿಕಾರಿದ್ರು..ಈ ವೇಳೆ ಆಡಳಿತ ಪಕ್ಷದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ತೀರ್ವ ಆಕ್ಷೇಪ ವ್ಯಕ್ತಪಡಿಸಿದ್ರು..ಕೆಲಕಾಲ ಸದನದಲ್ಲಿ‌ಸದ್ದುಗದ್ದಲಕ್ಕೂ ಕಾರಣವಾಯ್ತು.

Next Story

RELATED STORIES