Top

ದುರಹಂಕಾರದ ಮಾತು ಬಿಡಿ: ಯಡಿಯೂರಪ್ಪ

ದುರಹಂಕಾರದ ಮಾತು ಬಿಡಿ: ಯಡಿಯೂರಪ್ಪ
X

ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನಮ್ಮ ಬಗ್ಗೆ ಸೊಕ್ಕಿನ, ದುರಹಂಕಾರದ ಮಾತು ಬಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.

ಬೆಳಗಾವಿಯ ಅಧಿವೇಶನದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರು ಅಂದರೆ ತಮ್ಮ ಮನೆಯ ಜೀತದಾಳು ಎಂದು ಮುಖ್ಯಮಂತ್ರಿ ತಿಳಿದಿದ್ದಾರೆ. ಜನರಿಗೆ ಬಹಳ ಸುಲಭವಾಗಿ ಸಿಗುವ ಮುಖ್ಯಮಂತ್ರಿ ಎಂದು ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ. ನೀವೇ ತಾನೆ ಗೆಸ್ಟ್ ಹೌಸ್ ಇದ್ದರೂ 16 ಕಿಮಿ ದೂರದ ಹೋಟೆಲ್ ನಲ್ಲಿ ಇದಿರಿ ಎಂದರು.

ವಿರೋಧ ಪಕ್ಷದ ನಾಯಕರ ಬಗ್ಗೆ, ಮಾದ್ಯಮಗಳ ಬಗ್ಗೆ ಹಗುರವಾಗಿ ಮಾತಾಡೋದು ಬೇಡ ಉತ್ತರ ಕರ್ನಾಟಕದ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದೀರಿ ಇನ್ನೂರು ಮುನ್ನೂರು ಜನ ರೈತರಿಗೆ ಸಾಲ ಮನ್ನಾ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕೊಟ್ಟು ದೊಡ್ಡ ಸಾಧನೆ ಮಾಡಿರೋರ ಹಾಗೆ ಓಡಾಡ್ತಿದ್ದೀರಿ. ನಿಮ್ಮ ರಾಜಕೀಯ ದೊಂಬರಾಟ ನಡೆಯಲ್ಲ ಎಂದು ಹೇಳಿದರು.

16 ಟೆಂಟ್ ಹಾಕಿಕೊಂಡು ರೈತರು ಯಾವತ್ತೂ ಪ್ರತಿಭಟನೆ ಮಾಡಿದ ಉದಾಹರಣೆಯೇ ಇಲ್ಲ. ಆದರೆ ಪ್ರತಿಭಟನೆ ಮಾಡೋಕೆ ಟೆಂಟ್ ಕೂಡಾ ಹಾಕಿಸಿಕೊಟ್ಟಿದ್ದೀರಿ. ಅಧಿವೇಶನ ಮುಗಿದ ಮೇಲೆ ರಾಜ್ಯದ ಉದ್ದಗಲಕ್ಕೂ ಹೋರಾಟ ಮಾಡುತ್ತೇವೆ. ಸಿಎಂ ಕುಮಾರಸ್ವಾಮಿಗೆ ಮುಖ್ಯಮಂತ್ರಿಯಾಗಿ ಸರ್ಕಾರ ನಡೆಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಆಗ್ರಹಿಸಿ ರಾಜ್ಯದ ಉದ್ದಗಲಕ್ಕೂ ಹೋರಾಟ ಮಾಡುತ್ತೇವೆ. ಈ ಬಗ್ಗೆ ನಮ್ಮ ಪ್ರಮುಖ ಮುಖಂಡರ ಜೊತೆ ಚರ್ಚೆ ಮಾಡಿದ್ದೇನೆ ಎಂದು ಕುಮಾರಸ್ವಾಮಿ ವಿರುದ್ದ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

Next Story

RELATED STORIES