ಸಾಲದ ದೊರೆ ಮಲ್ಯರನ್ನು ಭಾರತಕ್ಕೆ ಕರೆತರುವಲ್ಲಿ ಮೋದಿ ಸಕ್ಸಸ್..!

ಸಾವಿರಾರು ಕೋಟಿ ಸಾಲ ಮಾಡಿ ಲಂಡನ್ಗೆ ಓಡಿ ಹೋಗಿದ್ದ ವಿಜಯ್ ಮಲ್ಯ ಭಾರತಕ್ಕೆ ರಿಟರ್ನ್ ಆಗ್ತಿದ್ದಾರೆ. ಮಲ್ಯರನ್ನು ಗಡಿಪಾರು ಮಾಡಿ ಭಾರತಕ್ಕೆ ಹಸ್ತಾಂತರಿಸುವಂತೆ ಇಂಗ್ಲೆಂಡ್ನ ವೆಸ್ಟ್ ಮಿನ್ಸ್ಟರ್ ಕೋರ್ಟ್ ಆದೇಶಿಸಿದೆ.
ಕೆಲ ತಿಂಗಳುಗಳಿಂತ ಭಾರತ ಸರ್ಕಾರ ಲಂಡನ್ನಲ್ಲಿ ತಲೆ ಮರೆಸಿಕೊಂಡಿದ್ದ ಮಲ್ಯ ವಿರುದ್ಧ ಕಾನೂನು ಹೋರಾಟ ನಡೆಸಿತ್ತು. ಸಾಲದ ದೊರೆಯನ್ನ ಭಾರತಕ್ಕೆ ಹಸ್ತಾಂತರಿಸುವಂತೆ ಬ್ರಿಟನ್ ಸರ್ಕಾರಕ್ಕೆ ಮನವಿ ಮಾಡಿತ್ತು. ಆದ್ರೆ ಭಾರತ ಸರ್ಕಾರದ ಕೋರಿಕೆ ವಿರೋಧಿಸಿ ಉದ್ಯಮಿ ಮಲ್ಯ ಲಂಡನ್ನ ವೆಸ್ಟ್ ಮಿನ್ಸ್ಟರ್ ಕೋರ್ಟ್ ಮೆಟ್ಟಿಲೇರಿದ್ರು. ಕಾನೂನು ಹೋರಾಟದಲ್ಲಿ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಗೆಲುವು ಸಾಧಿಸಿದೆ. ಕಿಂಗ್ಫಿಶರ್ ದೊರೆಯನ್ನ ಭಾರತಕ್ಕೆ ಕರೆತುವಲ್ಲಿ ಮೋದಿ ಸರ್ಕಾರ ಬಹುತೇಕ ಸಕ್ಸಸ್ ಆಗಿದೆ.
ಕೋರ್ಟ್ ತೀರ್ಪಿನ ವಿರುದ್ಧ ವಿಜಯ್ ಮಲ್ಯಗೆ ಹೈಕೋರ್ಟ್ನಲ್ಲಿ ಮೆಲ್ಮನವಿ ಸಲ್ಲಿಸಲು 14 ದಿನಗಳ ಕಾಲಾವಕಾಶವಿದೆ. ಸದ್ಯ ನ್ಯಾಯಾಲಯದ ತೀರ್ಪಿನ ಆದೇಶ ಪ್ರತಿ ಬ್ರಿಟನ್ ಗೃಹ ಕಾರ್ಯದರ್ಶಿಗೆ ತಲುಪಲಿದೆ. ಸರ್ಕಾರದ ಪರವಾಗಿ ಕಾರ್ಯದರ್ಶಿ ಗಡಿಪಾರು ಆದೇಶ ಹೊರಡಿಸಿ ಹಸ್ತಾಂತರ ಪ್ರಕ್ರಿಯೆಗೆ ಚಾಲನೆ ಕೊಡ್ತಾರೆ. ಗಡಿಪಾರು ಆದೇಶ ಪ್ರಶ್ನಿಸಿ ಮಲ್ಯ ಹೈಕೋರ್ಟ್ಗೆ ಮೆಟ್ಟಿಲೇರದಿದ್ರೆ ಗೃಹ ಕಾರ್ಯದರ್ಶಿ ಸಹ ಗಡಿಪಾರು ಆದೇಶ ಹೊರಡಿಸಿದ 28 ದಿನಗಳ ಒಳಗೆ ಮಲ್ಯ ಬ್ರಿಟನ್ ತೊರೆಯಬೇಕಾಗುತ್ತೆ.
ವಿವಿಧ ಬ್ಯಾಂಕ್ಗಳ 9000 ಕೋಟಿ ಸಾಲದ ಒಡೆದ ವಿಜಯ್ ಮಲ್ಯ
ಮಾರ್ಚ್ 2016 - ಭಾರತ ತೊರೆದು ಲಂಡನ್ನಲ್ಲಿ ತಲೆ ಮರೆಸಿಕೊಂಡ ಉದ್ಯಮಿ
ಏಪ್ರಿಲ್ - ಇಡಿ ಮನವಿ ಮೇರೆಗೆ ಮುಂಬೈ ಸ್ಪೆಷಲ್ ಕೋರ್ಟ್ನಿಂದ ಬಂಧನ ರಹಿತ ವಾರಂಟ್ ಜಾರಿ
ನವೆಂಬರ್ - ಮಲ್ಯ ತಲೆಮರೆಸಿಕೊಂಡ ಆರೋಪಿ ಎಂದು PMLA ಕೋರ್ಟ್ ಘೋಷಣೆ
ಫೆಬ್ರವರಿ 2017 - ಮಲ್ಯ ಗಡಿಪಾರಿಗೆ ಭಾರತದಿಂದ ಬ್ರಿಟನ್ ಸರ್ಕಾರಕ್ಕೆ ಮನವಿ ಸಲ್ಲಿಕೆ
ಏಪ್ರಿಲ್ - ಸ್ಕಾಟ್ಲ್ಯಾಂಡ್ ಯಾರ್ಡ್ ಪೊಲೀಸರಿಂದ ಮಲ್ಯ ಬಂಧನ
ಅರೆಸ್ಟ್ ಆಗುತ್ತಿದ್ದಂತೆ ಜಾಮೀನು ಪಡೆದು ಹೊರಬಂದ ವಿಜಯ್ ಮಲ್ಯ
ಡಿಸೆಂಬರ್ 4 - ಭಾರತದ ಜೈಲಿನಲ್ಲಿ ಮೂಲಸೌಕರ್ಯ ಇಲ್ಲ ಎಂದು ಮಲ್ಯ ಕ್ಯಾತೆ
ಲಂಡನ್ನಿಂದ ಗಡಿಪಾರು ಪ್ರಶ್ನಿಸಿ ಕೋರ್ಟ್ನಲ್ಲಿ ಮಲ್ಯ ಅರ್ಜಿ
ಜುಲೈ - ಗಡಿಪಾರು ಬಳಿಕ ಮಲ್ಯರನ್ನು ಇರಿಸಲಾಗುವ ಮುಂಬೈ ಕೋರ್ಟ್ನ ವಿಡಿಯೋ ಕೇಳಿದ ಕೋರ್ಟ್
ಡಿಸೆಂಬರ್ 10 - ಮಲ್ಯ ಗಡಿಪಾರಿಗೆ ಲಂಡನ್ ಕೋರ್ಟ್ ಆದೇಶ
ಮಲ್ಯ ಸಾಲ ಮರುಪಾವತಿಗೆ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಸಾಲಕೊಟ್ಟು ಬ್ಯಾಂಕ್ಗಳು ಮಾತ್ರ ಒಪ್ಪುತ್ತಿಲ್ಲ.. 2016ರಲ್ಲಿ ಸಾಲದ ಅಸಲಿನ ಶೇ.80ರಷ್ಟು ಮೊತ್ತ ಪಾವತಿಸುವುದಾಗಿ ಮಲ್ಯ ಬ್ಯಾಂಕ್ಗಳಿಗೆ ಆಫರ್ ಕೊಟ್ಟಿದ್ರು. ಕಳೆದ ವಾರ ಶೇ.100 ಅಸಲು ಮೊತ್ತ ಮರುಪಾವತಿಸುವೆ. ದಯೆಮಾಡಿ ಬಡ್ಡಿ ಕೇಳಬೇಡಿ ಎಂದು ಟ್ವೀಟ್ ಸಹ ಮಾಡಿದರು.
ಒಟ್ಟಿನಲ್ಲಿ ಮದ್ಯದ ದೊರೆ ಮಲ್ಯಗೆ ಕೇಡುಗಾಲ ಶುರುವಾದಂತಿದೆ. ಭಾರತದ ಜೈಲಿನಲ್ಲಿ ಊಟ ತಿನ್ನೋ ಟೈಮ್ ಹತ್ತಿರ ಬಂದಂತಿದೆ. ಮಲ್ಯ ಹೈಕೋರ್ಟ್ ಮೆಟ್ಟಿಲೇರಿದ್ರೂ ಲಂಡನ್ನಿಂದ ಗಡಿಪಾರು ಆಗುವ ಸಾಧ್ಯತೆ ಇದೆ.