Top

ದರ್ಶನ್ ಇಲ್ಲ ಅಂದಿದ್ರೆ ನಾನಿವತ್ತು ಇಲ್ಲಿ ಇರ್ತಿರಲಿಲ್ಲ: ಸೃಜನ್ ಲೋಕೇಶ್

ದರ್ಶನ್ ಇಲ್ಲ ಅಂದಿದ್ರೆ ನಾನಿವತ್ತು ಇಲ್ಲಿ ಇರ್ತಿರಲಿಲ್ಲ: ಸೃಜನ್ ಲೋಕೇಶ್
X

ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್, ನಟ ದರ್ಶನ್ ಬಗ್ಗೆ ಮಾತನಾಡಿದ ಮನದಾಳದ ಮಾತಿದ್ದು. ದರ್ಶನ್ ಮತ್ತು ಸೃಜನ್ ಲೋಕೇಶ್ ಖಾಸಾ ಜಿಗರಿ ದೋಸ್ತ್ .ಅವರ ಬಗ್ಗೆ ಇವರು , ಇವರ ಬಗ್ಗೆ ಅವರು ಮಾತನಾಡೋದರಲಿಯೇ ವಿಶೇಷವಿದೆ.

ದರ್ಶನ್ ಬಗ್ಗೆ ಸೃಜನ್ ಮಾತನಾಡಿದ್ದ ಮಾತು ಆರ್ಟಿಫಿಷಲ್ ಅಲ್ಲಾ. ಆ ಸಂದರ್ಭವೇ ಪವಿತ್ರವಾದ್ದದು. ಪವಿತ್ರವಾದ ಕ್ಷೇತ್ರದಲ್ಲಿ, ಪ್ರಮಾಣಿಕ ಕನಸಿನ ಪ್ರಯತ್ನ ಜರುಗುವ ಸಮಯದಲ್ಲಿ ಹೊರಬಂದ ನುಡಿಯದು. ಇಷ್ಟು ದಿನ ಕಿರುತೆರೆಯ ರಿಯಲಿಟಿ ಶೋಗಳನ್ನು ನಿರ್ಮಾಣ ಮಾಡುತ್ತಿದ್ದ ಲೋಕೇಶ್ ಫಸ್ಟ್ ಟೈಮ್ ತಮ್ಮ ಲೋಕೇಶ್ ಪ್ರೊಡಕ್ಷನ್​ನಡಿ ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಅಂದು ಮಾತಿನ ಮಲ್ಲನ ಮೇಲೆ ದರ್ಶನ್ ಎದ್ದಿದ್ರಾ ದಂಗೆ..?

ದಚ್ಚು ಬೈಯ್ದು , ಉಗಿದ್ದಿದರೇ ಸೃಜಾ ಆಗುತ್ತಿರಲ್ವಂತೆ ಹಿಂಗೆ..!!

ಒಂದೇ ಚಿತ್ರದಲ್ಲಿ ಸೃಜನ್​​ಗೆ ಮೂರ್ ಮೂರು ಅವತಾರ..!!

ಲೋಕೇಶ್ ಪ್ರೋಡಕ್ಷನ್ಸ್​​​​​​​​​​ನಲ್ಲಿ ‘ಎಲ್ಲಿದ್ದೆ ಇಲ್ಲಿ ತನಕ' ಚಿತ್ತಾರ ..!!

ದರ್ಶನ್, ಸೃಜನ್​ ಲೋಕೇಶ್​​ರನ್ನು ಎಚ್ಚರಿಸದೇ ಇದ್ದಿದ್ರೆ, ಇಂದು ಮಜಾ ಟಾಕೀಸ್ ಮೂಲಕ ಕನ್ನಡಿಗರ ಮನೆ ಮನೆಯಲ್ಲಿಯೂ ಕಚಗುಳಿ ಇಡ್ತಿರಿಲ್ವೇನೋ ಸೃಜನ್. ಕನ್ನಡ ಚಿತ್ರರಂಗ ಪೂರ್ವ ಕಾಲದಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಚಂದನವನಕ್ಕೆ ಭದ್ರ ಭುನಾದಿ ಹಾಕಿದವರು ಸುಬ್ಬಯ್ಯ ನಾಯ್ಡು. ಅಪ್ಪನಂತೆ ಮಗ ಲೋಕೇಶ್ ಕೂಡ ಆದರ್ಶಪ್ರಯರಾಗಿ ಬದುಕಿ ಬಾಳಿದವರು.. ಈಗ ಅವರ ಮೊಮ್ಮಗ ಕೂಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಪ್ಪನ ಹೆಸರು ಉಳಿಸುವಂತ ನಿರ್ಮಾಣ ಸಂಸ್ಥೆಯನ್ನು ತೆರೆದಿದ್ದಾರೆ. ನಿರ್ಮಾಣ ಸಂಸ್ಥೆಯ ಮೂಲಕ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿದ ನಂತರ ಈಗ ಸಿನಿಮಾ ನಿರ್ಮಾಣಕ್ಕೂ ಮುಂದಾಗಿದ್ದಾರೆ.

ಲೋಕೇಶ್ ಬ್ಯಾನರ್​ ನಡಿ ನಿರ್ಮಾಣವಾಗುತ್ತಿರುವ ಚೊಚ್ಚಲ ಸಿನಿಮಾ.. ತೇಜಸ್ವಿ ಅನ್ನೋರು ಈ ಚಿತ್ರದ ಸೂತ್ರಧಾರ.. ಸೃಜನ್ ಲೋಕೇಶ್ , ಹರಿಪ್ರಿಯಾ ಈ ಚಿತ್ರದ ಪ್ರಮುಖ ಪಾತ್ರಧಾರಿಗಳು.. ಈ ನೂತನ ಪ್ರಯತ್ನಕ್ಕೆ ಸ್ಯಾಂಡಲ್​ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ , ಅಭಿನಯ ಶಾರಧೆ ಜಯಂತಿ, ಹಿರಿಯ ನಟಿ ತಾರಾ , ರವಿಶಂಕರ್ , ವಿನೋದ್ ಪ್ರಭಾಕರ್ ಸಾಥ್ ನೀಡಿದ್ದಾರೆ..

ಅಮ್ಮನ ಒಂಬತ್ತು ಲಕ್ಷ ಬೆಲೆ ಬಾಳುವ ಒಡೆವೆಯನ್ನು ಅಡಮಾನವಿಟ್ಟು ಪ್ರೋಡಕ್ಷನ್ ಹೌಸ್ ಶುರು ಮಾಡಿದೆ. ಅಮ್ಮನ ಆಸೆಯಂತೆ ಇಂದು ಮೂನ್ನುರು ಜನ ನಮ್ಮ ಪ್ರೋಡಕ್ಷನ್ ಯುನಿಟ್​ನಲ್ಲಿ ಊಟ ಮಾಡ್ತಿದ್ದಾರೆ.. ಇದನ್ನು ಮೂರು ಪಟ್ಟು ಮಾಡಬೇಕು ಅನ್ನೋದು ನನ್ನ ಆಸೆ ಎಂದು, ತಮ್ಮ ಮನದಾಳವನ್ನು ಹಂಚಿಕೊಂಡರು.

ಫಸ್ಟ್ ಟೈಮ್ ಗೆಳೆಯ ಸಿನಿಮಾ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿದ್ದಕ್ಕೆ , ದರ್ಶನ್ ಮೆಚ್ಚುಗೆಯ ಮಾತುಗಳನ್ನಾಡಿದ್ರು.. ಶುಭವಾಗಲಿ ಎಂದು ಹಾರೈಸಿದರು.

ಈ ಚಿತ್ರದ ಮತ್ತೊಂದು ವಿಶೇಷ ಸೃಜನ್ ಲೋಕೇಶ್ ಸುಪುತ್ರ ಸುಕೃತ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.. ಆ ವಿಶೇಷವಾದ ಸಿಕ್ವೇನ್ಸ್​ನ ಸ್ವತಃ ಸೃಜನ್ ಲೋಕೇಶ್​​ರವರೇ ಡೈರೆಕ್ಟ್ ಮಾಡಲಿದ್ದಾರಂತೆ.. ಭಕ್ತ ಪ್ರಹ್ಲಾದ ಚಿತ್ರದಲ್ಲಿ ಲೋಕೇಶ್​ ನಟನೆಗೆ ಸುಬ್ಬಯ್ಯ ನಾಯ್ಡು ಆ್ಯಕ್ಷನ್ ಕಟ್ ಹೇಳಿದ್ರಂತೆ. ಭುಜಂಗಯ್ಯನ ದಶಾವತಾರ ಚಿತ್ರದಲ್ಲಿ ಲೋಕೇಶ್ , ತಮ್ಮ ಮಗ ಸೃಜನ್ ಲೋಕೇಶ್ ಪಾತ್ರಕ್ಕೆ ದಿಗ್ಧರ್ಶನ ಮಾಡಿದರಂತೆ. ಈಗ ಮತ್ತೆ ಆ ತಲೆಮಾರು ಮುಂದುವರೆಯುತ್ತಿದೆ.

Next Story

RELATED STORIES