Top

ಮೌಳಿಗೆ ಬಾಹುಬಲಿ ಪ್ರಭಾಸ್​ರಷ್ಟೇ ಇಷ್ಟ ಕನ್ನಡದ ರಾಕಿ ಭಾಯ್..!!​​​

ಮೌಳಿಗೆ ಬಾಹುಬಲಿ ಪ್ರಭಾಸ್​ರಷ್ಟೇ ಇಷ್ಟ ಕನ್ನಡದ ರಾಕಿ ಭಾಯ್..!!​​​
X

ಅದ್ಯಾವ ಘಳಿಗೆಯಲ್ಲಿ ಕನ್ನಡದ ಮೊಗ್ಗಿನ ಮನಸ್ಸು ಅರಳಿತೋ.. ಏನೋ.. ಅಂದಿನಿಂದ ಕನ್ನಡದ ಕಸ್ತೂರಿಯ ಸುವಾಸನೆ ಕರುನಾಡಿಗೆಲ್ಲಾ ಹರಡಿಬಿಟ್ಟಿತ್ತು. ಒಂದೇ ಒಂದು ದಶಕದಲ್ಲಿ ಊಹೆಗೂ ನಿಲುಕದ ರೀತಿ ಬೆಳೆದು ನಿಂತೇ ಬಿಟ್ರು, ಸ್ವಚ್ಚ ಕನ್ನಡದ ಸ್ವಾಭಿಮಾನಿ ಕನ್ನಡಿಗ, ಛಲಗಾರ, ಕನ್ನಡದ ಅಸಲಿ ಐಕಾನ್ ದಿ ಒನ್ ಅಂಡ್ ಓನ್ಲಿ ರಾಕಿಂಗ್ ಸ್ಟಾರ್ ಯಶ್.

ಮೊಗ್ಗಿನ ಮನಸ್ಸಿನ ಸುವಾಸನೆ ಇದೀಗ ಕನ್ನಡದ ಗಡಿ ದಾಟಿ, ಪಕ್ಕದ ರಾಷ್ಟ್ರಗಳಿಗೂ ಅದರ ಘಮಲು ಬೀರೋಕೆ ಶುರುವಾಗಿದೆ. ಅದೂ ಕೆಜಿಎಫ್ ಸಿನಿಮಾದ ಮೂಲಕ ಅನ್ನೋದು ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆ. ಹೌದು, ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ರಾಜಮೌಳಿಯೇ ಖುದ್ದು, ನಮ್ಮ ಕನ್ನಡದ ಸಿನಿಮಾನ ಕೊಂಡಾಡಿದ್ದಾರೆ.

KGFನ ಇಂಡಿಯನ್ ಸಿನಿಮಾ ಮಾಡೋ ಕನಸು ಕಂಡಿದ್ರು ಜಕ್ಕನ್ನ..!

ಇದು ಅಕ್ಷರಶಃ ನಿಜ. ಈ ಹಿಂದೆ ಇಡೀ ಭಾರತೀಯ ಚಿತ್ರರಂಗ ಬಾಹುಬಲಿ ಬಾಹುಬಲಿ ಅಂತ ಜಪ ಮಾಡಿತ್ತು. ಆದ್ರೀಗ ಅದೇ ಲೆವೆಲ್​ನಲ್ಲಿ ಕನ್ನಡದ ಕೆಜಿಎಫ್ ಸಿನಿಮಾ ಸದ್ದು ಮಾಡ್ತಿದೆ. ಅದಕ್ಕೆ ಕಾರಣ ಅದೇ ಬಾಹುಬಲಿ ಖ್ಯಾತಿಯ ರಾಜಮೌಳಿ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಇತ್ತೀಚೆಗೆ ಹೈದ್ರಾಬಾದ್​ನಲ್ಲಿ ನಡೆದ ಕೆಜಿಎಫ್ ಪ್ರೀ- ರಿಲೀಸ್ ಇವೆಂಟ್ ಇದಕ್ಕೆ ಸಾಕ್ಷಿಯಾಗಿದ್ದು ವಿಶೇಷ.

ಮೌಳಿ, ಬಾಹುಬಲಿ ಖ್ಯಾತಿಯ ಯಂಗ್ ರೆಬೆಲ್ ಸ್ಟಾರ್​ ಪ್ರಭಾಸ್​ರಷ್ಟೇ ಇಷ್ಟ ಪಡೋ ಮತ್ತೊಬ್ಬ ಸ್ಟಾರ್ ಅಂದ್ರೆ ಅದು ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್. ಹಾಗಾಗಿಯೇ ಕನ್ನಡದ ಕೆಜಿಎಫ್ ಸಿನಮಾನ ಪ್ಯಾನ್ ಇಂಡಿಯನ್ ಸಿನಿಮಾ ಮಾಡೋ ಕನಸು ಕೂಡ ಕಾಣ್ತಾರೆ ಜಕ್ಕನ್ನ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES