Top

ಬಾಲಿವುಡ್ ನಟ ಶಾಹಿದ್‌ ಕಪೂರ್‌ಗೆ ಕ್ಯಾನ್ಸರ್..?

ಬಾಲಿವುಡ್ ನಟ ಶಾಹಿದ್‌ ಕಪೂರ್‌ಗೆ ಕ್ಯಾನ್ಸರ್..?
X

ಬಾಲಿವುಡ್ ಖ್ಯಾತ ನಟ ಶಾಹಿದ್ ಕಪೂರ್‌ಗೆ ಕ್ಯಾನ್ಸರ್‌ ಇದೆ ಎಂಬ ಸುದ್ದಿ ಹಬ್ಬಿದ್ದು, ಈ ಬಗ್ಗೆ ಖುದ್ದು ಶಾಹಿದ್ ಕಪೂರ್ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಕೆಲ ದಿನಗಳಿಂದ ಶಾಹಿದ್ ಕಪೂರ್‌ಗೆ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್ ಇದೆ ಎಂಬ ಸುಳ್ಳು ವದಂತಿ ಹಬ್ಬಿದ್ದು, ಈ ಬಗ್ಗೆ ಟ್ವೀಟ್ ಮಾಡಿದ ಶಾಹಿದ್ ಕಪೂರ್, ನಾನು ಆರೋಗ್ಯವಾಗಿದ್ದೇನೆ. ಸುಳ್ಳು ವದಂತಿಯ ಬಗ್ಗೆ ತಲೆಕೆಡಿಸಿಕೊಳ್ಳಬೇಡಿರೆಂದು ಟ್ವೀಟ್ ಮಾಡಿದ್ದಾರೆ.

ಸದ್ಯ ಶಾಹಿದ್ ದೆಹಲಿಯಲ್ಲಿ ಪತ್ನಿ ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದು, ಸದ್ಯದಲ್ಲೇ ಲೋನಾವಾಲಾದಲ್ಲಿ ನಡೆಯಲಿರುವ ಕಬೀರ್ ಸಿಂಗ್ ಸಿನಿಮಾ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.ಅಂದಹಾಗೆ ಕಬೀರ್‌ ಸಿಂಗ್‌ ಸಿನಿಮಾ ತೆಲುಗುವಿನಲ್ಲಿ ಪ್ರಸಿದ್ಧವಾಗಿದ್ದ ವಿಜಯ್‌ ದೇವರಕೊಂಡ ನಟನೆಯ ಅರ್ಜುನ್ ರೆಡ್ಡಿ ಸಿನಿಮಾದ ರಿಮೇಕ್ ಆಗಿದೆ.

ಅರ್ಜುನ್ ರೆಡ್ಡಿ ಸಿನಿಮಾ ನಿರ್ದೇಶಿಸಿದ್ದ ಸಂದೀಪ್ ವಂಗಾ ಕಬೀರ್ ಸಿಂಗ್ ಸಿನಿಮಾ ನಿರ್ದೇಶಿಸುತ್ತಿದ್ದು, ಮುಂದಿನ ವರ್ಷ ಜೂನ್ 21ರಂದು ಕಬೀರ್ ಸಿಂಗ್ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾನೆ.

Next Story

RELATED STORIES