ಮೌಳಿಯಿಂದ ಅಫಿಶಿಯಲ್ ಅನೌನ್ಸ್: ಯಶ್ ಕನ್ನಡದ No.1 ಸ್ಟಾರ್

ಅಬ್ಬಬ್ಬಾ... ನಮ್ಮ ಕನ್ನಡದ ಸಿನಮಾವೊಂದು ಈ ರೇಂಜ್ಗೆ ಸೌಂಡ್ ಮಾಡುತ್ತೆ ಅಂತ ಕನಸಲ್ಲೂ ಸಹ ಯಾರೂ ಊಹಿಸಿರಲಿಕ್ಕಿಲ್ಲ. ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ಸ್ಟಾರ್ ಡೈರೆಕ್ಟರ್ ರಾಜಮೌಳಿಯೇ ನಮ್ಮ ಸಿನಿಮಾ ಮೇಕಿಂಗ್ ನೋಡಿ ಥ್ರಿಲ್ ಆಗಿದ್ದಾರೆ. ಇಷ್ಟಕ್ಕೂ ಕನ್ನಡದ ನಂ.1 ಸ್ಟಾರ್ ಯಶ್ ಬಗ್ಗೆ ಮೌಳಿ ಹೇಳಿದ್ದೇನು..? ಇಲ್ಲಿದೆ ಓದಿ.
ನಾಲ್ಕೈದು ವರ್ಷದ ಹಿಂದೆ ಕನ್ನಡದ ಸೂಪರ್ ಸ್ಟಾರ್ ಯಾರು ಅಂತ ಕೇಳಿದ ರಾಜಮೌಳಿಗೆ ಮೊಟ್ಟ ಮೊದಲು ಕೇಳಿ ಬಂದ ಹೆಸ್ರೇ ಯಶ್. ಹೌದು... ದೊಡ್ಡ ಸ್ಟಾರ್ ಅಲ್ಲವಾದ್ರೂ, ರೀಸೆಂಟ್ ಆಗಿ ಬಂದು, ದೊಡ್ಡ ದೊಡ್ಡ ಸ್ಟಾರ್ಗಳನ್ನ ಹಿಂದಿಕ್ಕಿ, ನಂ.1 ಸ್ಥಾನಕ್ಕೇರಿದ ಯಶ್ ಬಗ್ಗೆ ಕೇಳಿ ಮೌಳಿ ಥ್ರಿಲ್ ಆಗಿದ್ರಂತೆ. ಅದ್ರಲ್ಲೂ ಯಶ್ ಬ್ಯಾಗ್ರೌಂಡ್ ಕೇಳಿ ಬಸ್ ಡ್ರೈವರ್ ಮಗನೊಬ್ಬ ಸೂಪರ್ ಸ್ಟಾರ್ ಆಗಿದ್ದು ಮೌಳಿಗೆ ಎಲ್ಲಿಲ್ಲದ ಖುಷಿ ಕೊಟ್ಟಿದೆ.
ಮಾತು ಮುಂದುವರಿಸುತ್ತಾ, ಇಂದಿಗೂ ಯಶ್ ತಂದೆ ಅದೇ ವೃತ್ತಿಯಲ್ಲಿ ಮುಂದುವರೆಯುತ್ತಿರೋದನ್ನ ಕೊಂಡಾಡಿದ ರಾಜಮೌಳಿ, ನಿಜವಾದ ಸೂಪರ್ ಸ್ಟಾರ್ ಯಶ್ ತಂದೆ ಅಂತ ಶಹಬ್ಬಾಶ್ಗಿರಿ ವ್ಯಕ್ತಪಡಿಸಿದ್ರು.
ಭಾಷೆ ಹಂಗೇಕೆ..? ನಾವು ಇಂಡಿಯನ್ಸ್..! ನಮ್ಮದು ಇಂಡಿಯನ್ ಸಿನಿಮಾ
ತೆಲುಗು ರಾಷ್ಟ್ರಗಳಲ್ಲಿ ಕನ್ನಡ ಕಹಳೆ ಮೊಳಗಿಸಿದ ಹೆಮ್ಮೆಯ ಕನ್ನಡಿಗ ಯಶ್..!
ಕನ್ನಡದ ಗಡಿಯಾಚೆಗೂ ಕನ್ನಡ ಸಿನಿಮಾನ ತೆಗೆದುಕೊಂಡು ಹೋಗ್ಬೇಕು ಅನ್ನೋ ಮಹದಾಸೆ ಕಂಡಿರೋ ಸ್ವಾಭಿಮಾನಿ ಕನ್ನಡಿಗ ಯಶ್, ನಮಗೆ ಭಾಷೆಯ ಹಂಗೇಕೆ..? ನಾವೆಲ್ಲಾ ಭಾರತೀಯರು, ನಮ್ಮದು ಇಂಡಿಯನ್ ಸಿನಿಮಾ ಆಗಿಸೋಕೆ ಎಲ್ರೂ ಒಂದಾಗಬೇಕು ಅನ್ನೋ ಬಲವಾದ ಅರ್ಥಪೂರ್ಣ ಮಾತನ್ನ ಹೇಳಿದ್ರು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5