Top

ಜಾರಕಿಹೊಳಿ,ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಮತ್ತೆ ಭಿನ್ನಮತ ಸ್ಫೋಟ

ಜಾರಕಿಹೊಳಿ,ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಮತ್ತೆ ಭಿನ್ನಮತ ಸ್ಫೋಟ
X

ಅಧಿವೇಶನದ ಸ್ವಾಗತ ಕೋರುವ ಫ್ಲೆಕ್ಸ್ ವಿಚಾರದಲ್ಲಿ ಮತ್ತೆ ಜಾರಕಿಹೊಳಿ ಬ್ರದರ್ಸ್ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದೆ.

ಕುಂದಾನಗರಿ ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಪ್ರಾರಂಭವಾಗಿದೆ. ಅಧಿವೇಶನದ ಪ್ರಾರಂಭದಲ್ಲೇ ಜಿಲ್ಲಾ ರಾಜಕಾರಣದಲ್ಲಿ ಅಸಮಾಧಾನ ಸ್ಫೊಟಗೊಂಡಿದೆ.ಸಚಿವ ರಮೇಶ್ ಜಾರಕಿಹೊಳಿ ಬ್ರದರ್ಸ್ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಬಹಿರಂಗ ವಾಕ್ಸಮರ ಮುಂದುವರಿದಿದೆ..ಅಧಿವೇಶನದ ಸಮಯದಲ್ಲಿ ನಾಯಕರಿಗೆ ಸ್ವಾಗತ ಕೋರುವ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನ ಹಾಕಲಾಗ್ತದೆ.

ತಮ್ಮ ತಮ್ಮ ಪಕ್ಷದ ಹಿರಿಯ ನಾಯಕರ ಮನಸೆಳೆಯುವ ನಿಟ್ಟಿನಲ್ಲಿ ಸ್ಥಳೀಯ ಶಾಸಕರು,ಮುಖಂಡರು ಅವರ ಫೋಟೋಗಳನ್ನ ಫ್ಲೆಕ್ಸ್ ಬ್ಯಾನರ್ ನಲ್ಲಿ ಹಾಕಿ ಮಿಂಚ್ತಾರೆ...ಈ ಭಾರಿಯ ಫ್ಲೆಕ್ಸ್ ನಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಡಿಸಿಎಂ ಪರಂ,ಮಾಜಿ ಸಿಎಂ ಸಿದ್ದು,ಸಿಎಂ ಹೆಚ್ಡಿಕೆ,ದಿನೇಶ್ ಗುಂಡೂರಾವ್ ಹಾಗೂ ಈಶ್ವರ್ ಖಂಡ್ರೆಯವರ ಫೋಟೋಗಳನ್ನ ಹಾಕಿಸಿ,ರಮೇಶ್ ಜಾರಕಿಹೊಳಿ,ಸತೀಶ್ ಜಾರಕಿಹೊಳಿ ಫೋಟೋ ಹಾಕಿಸದಿದ್ದದ್ದು ಸಾಕಷ್ಟು ವಿವಾದಕ್ಕೆ ಕಾರಣವಾಯ್ತು.

ಅಧಿವೇಶನಕ್ಕೆಂದು ಸಿಎಂ ಕುಮಾರಸ್ವಾಮಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.ಸಂಪ್ರದಾಯದಂತೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಸ್ವಾಗತಿಸಬೇಕಿತ್ತು..ಆದ್ರೆ ರಮೇಶ್ ಜಾರಕಿಹೊಳಿ ಗೈರಾದ್ರು..ಈ ವೇಳೆ ಶಾಸಕಿ ಲಕ್ಷ್ಮಿ‌ಹೆಬ್ಬಾಳ್ಕರ್ ಅವ್ರೇ ಸಿಎಂ ಅವರನ್ನ ವೆಲ್ ಕಂ ಮಾಡಿದರು. ಈ ವೇಳೆ ರಮೇಶ್ ಗೈರಿನ ಬಗ್ಗೆ ಮಾಧ್ಯಮಗಳು ಪ್ರಶ್ನೆಕೇಳಿದ್ದಕ್ಕೆ ಹೆಬ್ಬಾಳ್ಕರ್ ನಾನೇನು ಪಿಆರ್ ಒ ಅಲ್ಲ ಅಂತ ಕಿಡಿಕಾರಿದ್ರು..ಅವರು ಯಾಕೆ ಬಂದಿಲ್ಲ ಅನ್ನೊದು ನನ್ನಗೇನು ಗೋತ್ತು ಅಂತ ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟರು. ಇತ್ತ ಅಧಿವೇಶನಕ್ಕೆ ಆಗಮಿಸಿದ್ದ ಜಾರಕಿಹೊಳಿ ಐದು ವರ್ಷಗಳಿಂದ ಆಕಿ‌ಮಾಡಿದ್ದೇನು ಅಂತ ಪ್ರಶ್ನೆ ಹಾಕುವ ಮೂಲಕ ಮತ್ತಷ್ಟು ಕೆಣಕಿದರು.

ರಮೇಶ್ ಜಾರಕಿಹೊಳಿ ತಮ್ಮ‌ವಿರುದ್ಧ ಕೊಟ್ಟ ಹೇಳಿಕೆಗೆ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು ನೀಡಿದ್ರು..ಅಧಿಕಾರ ಯಾರಿಗೂ ಶಾಶ್ವತವಲ್ಲ,ಐದು ವರ್ಷ ಯಾರಿಗೂ ನಾನು ಪಿಆರ್ ಒ ಆಗಿರಲಿಲ್ಲ,ನಾನೊಬ್ಬ ಶಾಸಕಿ,ಜನರ ಪಿಆರ್ ಒ ಅಂತ ಟಾಂಗ್ ಕೊಟ್ಟಿದ್ದಾರೆ.

ಪಿಆರ್ ಒ ಆಗೋಕೆ ನಾನು ಸರ್ಕಾರಿ ಕೆಲಸದಲ್ಲಿದ್ದೇನಾ? ರಾಜಕೀಯ ಶಾಶ್ವತ ಅಲ್ಲ,ಮಾತನಾಡುವಾಗ ಮರ್ಯಾದೆಯಿಂದ ಮಾತನಾಡಬೇಕು ಅಂತ ಎಚ್ಷರಿಕೆ ನೀಡಿದರು.ನಾನು ಹಳೇ ಕಹಿ ನೆನಪುಗಳನ್ನು ಮರೆತಿದ್ದೇನೆ, ಈಗ ಅಭಿವೃದ್ಧಿ ಬಗ್ಗೆ ಮಾತನಾಡಲಿ ಎಂದು ಹೇಳಿದರು.

Next Story

RELATED STORIES