ಅಂಬಾನಿ ಪುತ್ರಿಯ ಪ್ರಿ-ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಮೆರಗು ತುಂಬಿದ ಪಾಪ್ ಗಾಯಕಿ

ಉದಯ್ಪುರ: ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿ ಪ್ರಿ-ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಪಾಪ್ ಗಾಯಕಿ ಬಿಯೋನ್ಸ್ ತಮ್ಮ ಕಂಠಸಿರಿಯ ಮೂಲಕ ಎಲ್ಲರ ಗಮನ ಸೆಳೆದರು.
ಉದಯ್ಪುರದ ಓಬೆರಾಯ್ ಉದಯ್ ವಿಲಾಸ್ ಹೊಟೇಲ್ನಲ್ಲಿ ಇಶಾ ಅಂಬಾನಿ ಆನಂದ್ ಪಿರಾಮಲ್ ಪ್ರಿ-ವೆಡ್ಡಿಂಗ್ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ಹಾಲಿವುಡ್ ಟಾಪ್ ಸಿಂಗರ್ ಬಿಯೋನ್ಸ್ ಸಂಗೀತ ಕಾರ್ಯಕ್ರಮ ನೀಡಿದರು. ಇನ್ನು ತಮ್ಮ ಪರ್ಫಾಮೆನ್ಸ್ನ ಸಣ್ಣ ತುಣುಕನ್ನು ಬಿಯೋನ್ಸ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಹಲವು ಬಾಲಿವುಡ್ ಗಣ್ಯರು ಹಾಜರಿದ್ದು, ತನ್ನ ತಾಯಿ ಟೀನಾರೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾದ ಬಿಯೋನ್ಸ್, ತಮ್ಮ ಸಂಗೀತ ಸುಧೆಯಿಂದ ನೆರೆದಿದ್ದವರಿಗೆ ಮನರಂಜನೆ ನೀಡಿದರು.
ಅಲ್ಲದೇ ಬಾಲಿವುಡ್ ಪ್ರಸಿದ್ಧ ತಾರೆಯರಾದ ಶಾರೂಖ್ ದಂಪತಿ ಮತ್ತು ಅಭಿಷೇಕ್ ಬಚ್ಚನ್ ದಂಪತಿ ನೃತ್ಯ ಸಂಗೀತದ ಮೂಲಕ ಎಲ್ಲರ ಗಮನ ಸೆಳೆದರು.
ಇನ್ನು ಈ ಕಾರ್ಯಕ್ರಮದ ಬಗ್ಗೆ ಸಂಭ್ರಮ ವ್ಯಕ್ತಪಡಿಸಿದ ಬಿಯೋನ್ಸ್ ತಾಯಿ ಟೀನಾ, ಇನ್ಸ್ಟಾಗ್ರಾಮ್ನಲ್ಲಿ ಭಾರತೀಯ ಉಡುಗೆಯಲ್ಲಿರುವ ಫೋಟೋವೊಂದನ್ನ ಅಪ್ಲೋಡ್ ಮಾಡಿ, ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಖುಷಿ ಕೊಟ್ಟಿದೆ ಎಂದಿದ್ದಾರೆ.