Top

ಅಡಿಲೇಡ್ ಟೆಸ್ಟ್: ಭಾರತಕ್ಕೆ 31 ರನ್​ಗಳ ರೋಚಕ ಜಯ

ಅಡಿಲೇಡ್ ಟೆಸ್ಟ್: ಭಾರತಕ್ಕೆ 31 ರನ್​ಗಳ ರೋಚಕ ಜಯ
X

ಭಾರತೀಯ ಬೌಲರ್​ಗಳ ಸಂಘಟಿತ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡ 31 ರನ್​ಗಳಿಂದ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದೆ. ಈ ಮೂಲಕ ಭಾರತ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಅಡಿಲೇಡ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲು 323 ರನ್​ಗಳ ಕಠಿಣ ಗುರಿ ಪಡೆದಿದ್ದ ಆಸ್ಟ್ರೇಲಿಯಾ ತಂಡ ಭಾರತೀಯರ ಸಂಘಟಿತ ದಾಳಿಗೆ ತತ್ತರಿಸಿ 291 ರನ್ ಗಳಿಗೆ ಪತನಗೊಂಡಿತು.

ಪಂದ್ಯದ ಅಂತಿಮ ದಿನವಾದ ಸೋಮವಾರ 4 ವಿಕೆಟ್​ಗೆ 104 ರನ್​ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯಾ ತಂಡ ನೆಲಕಚ್ಚಿ ಆಡುತ್ತಿದ್ದ ಶಾನ್ ಮಾರ್ಷ್​ ಅವರ ನೆರವಿನಿಂದ ಹೋರಾಟ ನಡೆಸಿತು. ಆದರೆ 166 ಎಸೆತಗಳಲ್ಲಿ 5 ಬೌಂಡರಿ ಸೇರಿದ 60 ರನ್ ಗಳಿಸಿದ್ದ ಮಾರ್ಷ್​ ಅವರನ್ನು ಜಸ್​ಪ್ರೀತ್ ಬುಮ್ರಾ ಔಟ್ ಮಾಡುತ್ತಿದ್ದಂತೆ ಆಸ್ಟ್ರೇಲಿಯಾದ ಪತನ ಆರಂಭಗೊಂಡಿತು.

ನಾಯಕ ಟಿಮ್ ಪೇನ್ 41 ರನ್ ಬಾರಿಸಿ ತಂಡದ ಪರ ಎರಡನೇ ಗರಿಷ್ಠ ರನ್ ಬಾರಿಸಿದ ಆಟಗಾರ ಎನಿಸಿಕೊಂಡರು. ಬಾಲಂಗೋಚಿಗಳಾದ ಪ್ಯಾಟ್ ಕಮಿನ್ಸ್ (28), ಮಿಚೆಲ್ ಸ್ಟಾರ್ಕ್ (28) ಮತ್ತು ನಾಥನ್ ಲಿಯೋನ್ (38) ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಕಷ್ಟು ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಭಾರತದ ಪರ ಜಸ್​ಪ್ರೀತ್ ಬುಮ್ರಾ, ಮೊಹಮದ್ ಶಮಿ ಮತ್ತು ಆರ್​. ಅಶ್ವಿನ್ ತಲಾ 3 ವಿಕೆಟ್ ಕಿತ್ತರೆ, ಇಶಾಂತ್ ಶರ್ಮ 1 ವಿಕೆಟ್ ಗಳಿಸಿದರು.

  • ಸಂಕ್ಷಿಪ್ತ ಸ್ಕೋರ್
  • ಭಾರತ 250 ಮತ್ತು 307
  • ಆಸ್ಟ್ರೇಲಿಯಾ 235 ಮತ್ತು 2ನೇ ಇನಿಂಗ್ಸ್ 291 (ಶಾನ್ ಮಾರ್ಷ್​ 61, ಪೇನ್ 40, ಲಿಯೊನ್ 38, ಸ್ಟಾರ್ಕ್ 28, ಕಮಿನ್ಸ್ 28, ಶಮಿ 65/3, ಬುಮ್ರಾ 68/3, ಅಶ್ವಿನ್ 92/3).

Next Story

RELATED STORIES