Top

ತೆಲುಗು- ಹಿಂದಿಗೆ KGFನ ಹೊತ್ತೊಯ್ದಿದ್ದೇ ಬಾಹುಬಲಿ ಡೈರೆಕ್ಟರ್..!!

ತೆಲುಗು- ಹಿಂದಿಗೆ KGFನ ಹೊತ್ತೊಯ್ದಿದ್ದೇ ಬಾಹುಬಲಿ ಡೈರೆಕ್ಟರ್..!!
X

ಹೈದರಾಬಾದ್‌ನಲ್ಲಿ ನಡೆದ ಕೆಜಿಎಫ್ ಪ್ರಿ-ರಿಲೀಸ್ ಇವೆಂಟ್‌ನಲ್ಲಿ ರಾಜಮೌಳಿ ಸಿಕ್ರೇಟ್ ಒಂದನ್ನ ರಿವೀಲ್ ಮಾಡಿದ್ದಾರೆ.

ಮೌಳಿ ಆ್ಯಕ್ಷನ್ ಕಟ್ ಹೇಳ್ತಿರೋ ತ್ರಿಬಲ್ ಆರ್ ಚಿತ್ರದ ಕಥೆಯನ್ನ ರಾಜಮೌಳಿ ಮಾರ್ಚ್​- ಏಪ್ರಿಲ್​ನಲ್ಲೇ ಬೆಂಗಳೂರಿನ ತಾಜ್ ವೆಸ್ಟ್ ಎಂಡ್​ ಹೋಟೆಲ್​ನಲ್ಲಿ ಸಿದ್ದಪಡಿಸಿದ್ರು. ಆಗ್ಲೇ ಯಶ್ ಮತ್ತು ಕೆಜಿಎಫ್ ಪ್ರೊಡ್ಯೂಸರ್ ವಿಜಯ್ ಕಿರಗಂದೂರು ಮೌಳಿಯನ್ನ ಭೇಟಿ ಮಾಡಿ ಕೆಜಿಎಫ್ ಮೇಕಿಂಗ್ ಝಲಕ್​ನ ಅವ್ರಿಗೆ ತೋರಿಸಿದ್ರಂತೆ. ಮೇಕಿಂಗ್​ನಲ್ಲಿದ್ದ ಒರಿಜಿನಾಲಿಟಿ, ಅದಕ್ಕಾಗಿ ಚಿತ್ರತಂಡ ಹಾಕಿರೋ ಪರಿಶ್ರಮ, ಚಿತ್ರದ ಟೆಕ್ನಿಕಲ್ ಸ್ಟ್ರೆಂತ್ ಬಗ್ಗೆ ಅಕ್ಷರಶಃ ಬೆರಗಾಗಿದ್ದರು ಮೌಳಿ.

ಅಷ್ಟೇ ಅಲ್ಲ, ಈ ಸಿನಿಮಾನ ಬಾಹುಬಲಿ ರೀತಿ ಇಂಡಿಯನ್ ಸಿನಿಮಾ ಮಾಡೋ ಕನಸು ಕೂಡ ಅಂದೇ ಕಂಡಿದ್ದರು. ಹಾಗಾಗಿಯೇ ಕೆಜಿಎಫ್​ ಚಿತ್ರವನ್ನ ತೆಲುಗಿನ ಪ್ರತಿಷ್ಠಿತ ಕಂಪೆನಿ ವಾರಾಹಿ ಚಲನ ಚಿತ್ರಂ ಮಾಲೀಕ ಸಾಯಿ ಕೊರ್ರಪಾಟಿಗೆ ರೆಫರ್ ಮಾಡಿದ್ರು. ಅದಾದ ಬಳಿಕ ಬಾಲಿವುಡ್ ಅಂಗಳಕ್ಕೂ ರಾಜಮೌಳಿಯೇ ರೆಫರ್ ಮಾಡಿ ಕೆಜಿಎಫ್ ಮೇಕಿಂಗ್​ನ ಗತ್ತು ಗಮ್ಮತ್ತು ಅನಿಲ್ ತದಾನಿ ಮನಮುಟ್ಟುವಂತೆ ಮಾಡಿದ್ರು. ಈ ವಿಚಾರಗಳನ್ನ ಖುದ್ದು ರಾಜಮೌಳಿ, ಪ್ರೀ ರಿಲೀಸ್ ಇವೆಂಟ್​ನಲ್ಲಿ ರಿವೀಲ್ ಮಾಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಇನ್ನು ರಾಜಮೌಳಿ ಮೂಲತಹ ರಾಯಚೂರಿನವರು. ಹಾಗಾಗಿ ಮೌಳಿಗೂ ಕನ್ನಡದ ಮೇಲೆ ಎಲ್ಲಿಲ್ಲದ ಪ್ರೀತಿ- ಗೌರವ. ಅದ್ರಲ್ಲೂ ಒಂದೊಳ್ಳೆ ಸಿನಿಮಾ ಮಾಡೋದ್ರ ಹಿಂದಿನ ಸಾಧಕ ಬಾಧಕಗಳನ್ನ ತುಂಬಾ ಅಚ್ಚುಕಟ್ಟಾಗಿ ಅರಿತಿರೋ ಸಿನಿಸಂತ. ಅದೇ ಕಾರಣಕ್ಕಾಗಿಯೇ ಇಂದು ಯಶ್ ಹಾಗೂ ಅವ್ರ ಕೆಜಿಎಫ್ ಸಿನಿಮಾನ ಪ್ಯಾನ್ ಇಂಡಿಯನ್ ಸಿನಿಮಾ ಮಾಡಲು ಹೊರಟಿದ್ದಾರೆ. ಅದೇನೇ ಇರಲಿ, ಕನ್ನಡಿಗರಿಂದ, ಕನ್ನಡಿಗರಿಗಾಗಿ, ಕನ್ನಡಿಗ ಯಶ್ ಕೆಜಿಎಫ್ ವಿಚಾರದಲ್ಲಿ ಇಡ್ತಿರೋ ಪ್ರತಿಯೊಂದು ಹೆಜ್ಜೆ ಮೈಲಿಗಲ್ಲಾಗಿ ನಿಲ್ಲಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES