Top

ಸಾವಿಗೂ ಮುನ್ನ ಪತ್ರಕರ್ತ ಖಶೋಗಿ ಹೇಳಿದ್ದೇನು..?

ಸಾವಿಗೂ ಮುನ್ನ ಪತ್ರಕರ್ತ ಖಶೋಗಿ ಹೇಳಿದ್ದೇನು..?
X

ಅಕ್ಟೋಬರ್ 2ರಂದು ಇಸ್ತಾಂಬುಲ್‌ನಲ್ಲಿರುವ ರಾಜತಾಂತ್ರಿಕ ಕಚೇರಿಯಲ್ಲಿ ಹತ್ಯೆಗೀಡಾಗಿದ್ದ ಪತ್ರಕರ್ತ ಜಮಾಲ್ ಖುಶೋಗಿ ತಮ್ಮ ಕೊನೆ ಘಳಿಗೆಯಲ್ಲಿ ಏನೆಂದು ಹೇಳಿದ್ದರೆಂದು ಬಹಿರಂಗವಾಗಿದೆ.

ಖಶೋಗಿ ತಮ್ಮ ಕೊನೆ ಘಳಿಗೆಯಲ್ಲಿ ಉಸಿರಾಡಲು ಸಾಧ್ಯವಾಗುತ್ತಿಲ್ಲವೆಂದು ಹೇಳಿದ್ದು, ಆಡಿಯೋ ತುಣುಕಿನಲ್ಲಿ ಖಶೋಗಿಯನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಿರುವುದು ಗೊತ್ತಾಗಿದೆ. ಅಲ್ಲದೇ ಆಡಿಯೋದಲ್ಲಿ ಕೇಳಿದ ಶಬ್ದದ ಪ್ರಕಾರ, ಖಶೋಗಿಯನ್ನು ಗರಗಸದಿಂದ ಕೊರೆದು ಕೊಂದಿರುವ ಶಂಕೆ ಉಂಟಾಗಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಕಾಣೆಯಾಗಿದ್ದ ಪತ್ರಕರ್ತ ಖಶೋಗಿ ಅಕ್ಟೋಬರ್ 2ರಂದು ಸೌದಿ ರಾಜತಾಂತ್ರಿಕ ಕಚೇರಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಕೊಲೆಗೆ ಸೌದಿ ರಾಜನೇ ಕಾರಣವೆಂದು ದೂರಲಾಗಿತ್ತು. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ.

Next Story

RELATED STORIES