ಗಣೇಶ್ಗೆ ಅದೃಷ್ಟ ತಂದುಕೊಡ್ತು ಡಿಸೆಂಬರ್!

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರಶಾಂತ್ ರಾಜ್ ಕಾಂಬಿನೇಷನ್ ಒನ್ಸ್ ಅಗೇನ್ ವರ್ಕ್ಔಟ್ ಆಗಿದ್ದು, ಆರೆಂಜ್ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಆರೆಂಜ್ ಹುಡುಗನ ಆಲ್ರೌಂಡ್ ಪ್ರದರ್ಶನಕ್ಕೆ ಫುಲ್ ಮಾರ್ಕ್ಸ್ ಸಿಕ್ಕಿದೆ. ಎಲ್ಲಾ ಕಮರ್ಷಿಯಲ್ ಎಲಿಮೆಂಟ್ಸ್ ಬೆರೆಸಿ, ಕಟ್ಟಿಕೊಟ್ಟಿರೋ ಈ ರೊಮ್ಯಾಂಟಿಕ್ ಆ್ಯಕ್ಷನ್ ಸಿನಿಮಾ ಎರಡನೇ ವಾರದತ್ತ ಮುನ್ನುಗ್ಗುತ್ತಿದೆ.
ಗೋಲ್ಡನ್ ‘ಆರೆಂಜ್’ ಟೇಸ್ಟ್ಗೆ ಮನಸೋತ ಚಿತ್ರರಸಿಕರು
ಮತ್ತೆ ರಿಪೀಟ್ ಆಯ್ತು ಗಣಿ- ಪ್ರಶಾಂತ್ ಜೂಮ್ ಮ್ಯಾಜಿಕ್
ಎರಡು ವರ್ಷಗಳ ಹಿಂದೆ ಜೂಮ್ ಅನ್ನೋ ಹಿಟ್ ಸಿನಿಮಾ ಕೊಟ್ಟಿದ್ದ ಗಣೇಶ್- ಪ್ರಶಾಂತ್ ಜೋಡಿ ಆರೆಂಜ್ ಸಿನಿಮಾ ಮೂಲಕ ಮತ್ತೆ ಗೆದ್ದಿದ್ದಾರೆ.ಗಣೇಶ್- ಪ್ರಿಯಾ ಆನಂದ್ ಕೆಮೆಸ್ಟ್ರಿ, ಸಾಧುಕೋಕಿಲ- ಗಣೇಶ್ ಜುಗಲ್ ಬಂದಿ, ಎಸ್. ಎಸ್ ತಮನ್ ಮ್ಯೂಸಿಕ್ ಪ್ಲಸ್ ಆಗಿದ್ದು, ಆರೆಂಜ್ ರಂಗು ಕಣ್ಣಿಗೆ ಹಬ್ಬ. ಲವಲವಿಕೆಯ ಆರೆಂಜ್ ಹುಡುಗನಾಗಿ ಗೋಲ್ಡನ್ ಸ್ಟಾರ್ ಗಣೇಶ್ ಮೋಡಿ ಮಾಡಿದ್ದಾರೆ.
ಪ್ರೇಕ್ಷಕರ ಜೊತೆ ಸಿನಿಮಾ ನೋಡಿ ಖುಷಿಪಟ್ಟ ಚಿತ್ರತಂಡ
ಮತ್ತೆ ಮಳೆ ಹುಡುಗನಿಗೆ ಅದೃಷ್ಟ ತಂದುಕೊಡ್ತು ಡಿಸೆಂಬರ್..!
ರಾಜ್ಯಾದ್ಯಂತ 300ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ರಿಲೀಸ್ ಆಗಿರೋ ಆರೆಂಜ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಅರಮನೆ ನಗರಿ ಮೈಸೂರಿನ ಗಾಯಿತ್ರಿ ಚಿತ್ರಮಂದಿರದಲ್ಲಿ ನಿರ್ಮಾಪಕ ನವೀನ್ ಜೊತೆಗೂಡಿ ನಿರ್ದೇಶಕ ಪ್ರಶಾಂತ್ ರಾಜ್ ಸಿನಿಮಾ ವೀಕ್ಷಿಸಿದರು.
ಪ್ರಶಾಂತ್ ರಾಜ್ ಆಗಮಿಸುತ್ತಿದ್ದಂತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದದರು. ಆರೆಂಜ್ ಚಿತ್ರಕ್ಕೆ, ಗಣೇಶ್ ಮತ್ತು ಪ್ರಶಾಂತ್ ರಾಜ್ ಗೆ ಜೈಕಾರ ಹಾಕಿದರು. ಮೈಸೂರಿನಲ್ಲಿ ಸಿನಿಮಾ ಹೌಸ್ಫುಲ್ ಕಾಣ್ತಿರೋದಕ್ಕೆ ಪ್ರಶಾಂತ್ ಸಂತಸ ವ್ಯಕ್ತಪಡಿಸಿದರು.
ಗಣೇಶ್ ಅಭಿನಯದ ಮುಂಗಾರು ಮಳೆ, ಮಳೆಯಲಿ ಜೊತೆಯಲಿ, ಶೈಲೂ, ಶ್ರಾವಣಿ ಸುಬ್ರಮಣ್ಯ, ಚಮಕ್ ಸಿನಿಮಾಗಳು ಡಿಸೆಂಬರ್ನಲ್ಲೇ ರಿಲೀಸ್ ಆಗಿ ಸಕ್ಸಸ್ ಕಂಡಿದವು, ಇದೀಗ ಆರೆಂಜ್ ಸಿನಿಮಾ ಕೂಡ ಡಿಸೆಂಬರ್ನಲ್ಲೇ ತೆರೆಕಂಡು ಭರ್ಜರಿ ಓಪನಿಂಗ್ ಪಡ್ಕೊಂಡಿದ್ದು, ಗಣಿಗೆ ಡಿಸೆಂಬರ್ ಲಕ್ಕಿ ಅನ್ನೋದು ಮತ್ತೊಂದು ಪ್ರೂವ್ ಆಗಿದೆ. ಎರಡನೇ ವಾರದತ್ತ ಮುನ್ನುಗ್ಗುತ್ತಿರೋ ಸಿನಿಮಾ ಬಾಕ್ಸಾಫೀಸ್ ದೋಚುವ ಸುಳಿವು ಕೊಟ್ಟಿದೆ.