Top

ಚಿಕ್ಕಬಳ್ಳಾಪುರದಲ್ಲಿ ದಿಗಂತ್- ಐಂದ್ರಿತಾ ಪರಿಸರ ಸ್ನೇಹಿ ಮದ್ವೆ ಹೇಗೆಲ್ಲಾ ನಡೆಯುತ್ತೆ ಗೊತ್ತಾ..?

ಚಿಕ್ಕಬಳ್ಳಾಪುರದಲ್ಲಿ ದಿಗಂತ್- ಐಂದ್ರಿತಾ ಪರಿಸರ ಸ್ನೇಹಿ ಮದ್ವೆ ಹೇಗೆಲ್ಲಾ ನಡೆಯುತ್ತೆ ಗೊತ್ತಾ..?
X

ನಟ ದಿಗಂತ್ ಹಾಗೂ ನಟಿ ಐಂದ್ರಿತಾ ಸ್ಯಾಂಡಲ್​​​ವುಡ್​​ನ ಲವ್ ಬರ್ಡ್ಸ್​. ಮನಸಾರೆ, ಪಾರಿಜಾತ ಮೂಲಕ ಗಮನ ಸೆಳೆದ ಈ ಜೋಡಿ ಹತ್ತು ವರ್ಷಗಳಿಂದ ಜೋಪಾನವಾಗಿ ಕಾಪಾಡಿಕೊಂಡ ಪ್ರೀತಿಗೆ ಈಗ ಮದುವೆಯ ಮುದ್ರೆ ಒತ್ತುತ್ತಿದ್ದಾರೆ.

ಮನಸಾರೆ ಸಿನಿಮಾದಿಂದ ಶುರುವಾದ ಇವರ ಪ್ರೀತಿಗೆ ಇಬ್ಬರ ಫ್ಯಾಮಿಲಿ ಕೂಡ ಒಪ್ಪಿಗೆ ಸೂಚಿಸಿತ್ತು. ಇದೀಗ ತಮ್ಮಿಬ್ಬರ ಇಷ್ಟದಂತೆ ಇದೇ ತಿಂಗಳ 11, 12 ರಂದು ಹಸೆಮಣೆ ಏರುತ್ತಿದ್ದಾರೆ ದಿಗಂತ್ ಹಾಗೂ ನಟಿ ಐಂದ್ರಿತಾ.

ಇಬ್ಬರು ಹೊಸ ಬಾಳಿಗೆ ಕಾಲಿಡುತ್ತಿರುವ ಈ ಘಳಿಗೆಯನ್ನು ಮತ್ತಷ್ಟು ಮೆಮೋರೇಬಲ್ ಆಗಿಸಲು ತಮ್ಮಿಬ್ಬರ ಕಲ್ಪನೆಯಂತೆ ಮದುವೆಯಾಗುತ್ತಿದ್ದಾರೆ. ಚಿಕ್ಕಬಳ್ಳಾಪುರದ ಬಳಿ ಇರೋ ನಂದಿ ಬೆಟ್ಟದ ಡಿಸ್ಕವರಿ ವಿಲೇಜ್​ ರೆಸಾರ್ಟ್​ ನಲ್ಲಿ ಕುಟುಂಬದ ಬಂಧುಗಳು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿ ಸಪ್ತಪದಿ ತುಳಿಯಲಿದ್ದಾರೆ.

ಇದೊಂದು ಪರಿಸರ ಸ್ನೇಹಿ ಮದುವೆಯಾಗಿದ್ದು ಯಾವುದೇ ದುಂದು ವೆಚ್ಚ ಇಲ್ಲದೇ ತುಂಬಾ ಸರಳವಾಗಿ ಹಚ್ಚ ಹಸುರಿನ ಪರಿಸರದ ನಡುವೆ ನಡೆಯಲಿದೆ. ಬೆಂಗಾಲಿ ಹಾಗೂ ಬ್ರಾಹ್ಮಣ ಎರಡೂ ಸಂಪ್ರದಾಯದಂತೆ ಮದುವೆ ನಡೆಯಲಿದ್ದು ನಾಳೆ ಅರಿಶಿಣ ಶಾಸ್ತ್ರ ನಡೆಯಲಿದೆ.

ಇನ್ನು ಶನಿವಾರ ರಿಟ್ಜ್ ಕಾರ್ಟನ್ ಹೋಟೆಲ್​ನಲ್ಲಿ ಈ ತಾರಾ ಜೋಡಿ ರಿಸೆಪ್ಷನ್ ಇಟ್ಟುಕೊಂಡಿದ್ದು, ರಿಸೆಪ್ಷನ್​​ನಲ್ಲಿ ಕನ್ನಡ ಚಿತ್ರರಂಗದ ನಟ, ನಟಿಯರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಲಿದ್ದಾರೆ. ದಿಗಂತ್ ಹಾಗೂ ಐಂದ್ರಿತಾ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದ್ದು. ಈ ಕ್ಯೂಟ್​ ಕಪಲ್​ ಮದುವೆಗೆ ಕ್ಷಣಗಣನೆ ಶುರುವಾಗಿದೆ.

Next Story

RELATED STORIES