Top

ನಿಮಿಷ 10, ವಾರ್ತೆ 50

ನಿಮಿಷ 10, ವಾರ್ತೆ 50
X

1.ಇಂದಿನಿಂದ ಬೆಳಗಾವಿಯ ಸುವರ್ಣಸೌಧದಲ್ಲಿ 10 ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿದೆ. ಸರ್ಕಾರದ ಹಲವು ಮಹತ್ವದ ಯೋಜನೆಗಳು, ವಿಧೇಯಕಗಳ ಬಗ್ಗೆ ಚರ್ಚೆ ನಡೆಯಲಿದೆ. ಆದರೆ, ಬಿಜೆಪಿ ನಾಯಕರು ಮೈತ್ರಿ ಸರ್ಕಾರದ ವಿರುದ್ಧ ಅಟ್ಯಾಕ್​​ ಮಾಡೋಕೆ ಸಿದ್ಧರಾಗಿದ್ದು, ಕಬ್ಬಿಗೆ ಬೆಂಬಲ ಬೆಲೆ ನಿಗದಿ, ಸಕ್ಕರೆ ಕಾರ್ಖಾನೆಗಳಿಂದ ಕೊಡಬೇಕಿರುವ ಬಾಕಿ ವಿಚಾರಗಳನ್ನ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸಿಎಂ ಕುಮಾರಸ್ವಾಮಿ ಕಾಲೆಳೆಯೋಕೆ ನಿರ್ಧರಿಸಿದ್ದಾರೆ.

2. ಸರ್ಕಾರ ಹಾಗೂ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಲು ಬಿಜೆಪಿ ನಾಯಕರು ಕಾರ್ಯತಂತ್ರ ರೂಪಿಸ್ತಿದರೆ, ಬಿಜೆಪಿಗೆ ತಿರುಗೇಟು ನೀಡಲು ಸಿಎಂ ಕುಮಾರಸ್ವಾಮಿ ಕೂಡ ರೆಡಿಯಾಗಿದ್ದಾರೆ. ಅತಿವೃಷ್ಠಿ, ಅನಾವೃಷ್ಠಿಯಿಂದ ರಾಜ್ಯದ ಹಲವೆಡೆ ಆಸ್ತಿ ಪಾಸ್ತಿ ಹಾನಿ ಹಾಗೂ ಕೊಡಗಿನಲ್ಲಾದ ನಷ್ಟ, ಮಹಾದಾಯಿ ನದಿ ನೀರು ಹಂಚಿಕೆ ಇವೆಲ್ಲಾ ಇಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಲು ರೆಡಿಯಾಗಿದ್ದಾರೆ.

3. ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಹಳೆಯ ಗೆಳೆಯರು, ಕಡು ವೈರಿಗಳಿಗೆ ಅಕ್ಕಪಕ್ಕ ಸೀಟು ನೀಡಲಾಗಿದೆ. ಸದನದಲ್ಲಿ ಸಿದ್ದರಾಮಯ್ಯ - ವಿಶ್ವನಾಥ್‌ಗೆ 37 - 38 ನಂಬರಿನ ಅಕ್ಕಪಕ್ಕ ಆಸನ ಮೀಸಲು ಮಾಡಿದ್ದಾರೆ..ಆದರೆ ಇದೇ ಕಾರಣಕ್ಕೆ ಸಿದ್ದರಾಮಯ್ಯ ಮಲೆಷ್ಯಾ ಪ್ರವಾಸಕ್ಕೆ ಹೊರಟ್ರಾ..? ವೈರಿ ಪಕ್ಕ ಕುಳಿತುಕೊಳ್ಳೋಕೆ ಮುಜುಗರ ಆಯ್ತಾ ಎಂಬ ಪ್ರಶ್ನೆ ಮೂಡಿದೆ.

4. ಬೆಳಗಾವಿ ಅಧಿವೇಶನಕ್ಕೂ ಮೊದ್ಲು ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮಹಾಮೇಳಾವ್ ನಡೆಸಲು ಸಿದ್ಧತೆ ನಡೆಸೊದೆ. ಇಂದು ಬೆಳಗ್ಗೆ ​ ಟಿಳಕವಾಡಿಯ ವ್ಯಾಕ್ಷಿನ್ ಡಿಪೋದಲ್ಲಿ ಮಹಾಮೇಳಾವ್​ಗೆ ಎಂಇಎಸ್‌ ಸಿದ್ಧತೆ ನಡೆಸಿದೆ. ಮಹಾಮೇಳಾವ್‌ಗೆ ಅನುಮತಿ ನೀಡಲು ಬೆಳಗಾವಿ ಪೊಲೀಸರು ನಿರಾಕರಿಸಿದ್ದಾರೆ. ಆದರೆ ಅನುಮತಿ ಸಿಗದಿದ್ದರೂ ರಸ್ತೆಯಲ್ಲೇ ಮೇಳಾವ್‌ ನಡೆಸಲು MES ನಿರ್ಧಾರ ಮಾಡಿದೆ.

5.ಇಂದಿನಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ಆರಂಭವಾಗಲಿದೆ. ಆದ್ರೆ ಚಳಿಗಾಲ ಅಧಿವೇಶನಕ್ಕೂ ಮುನ್ನವೇ ರೈತರ ಪ್ರತಿಭಟನೆ ತೀವ್ರಗೊಂಡಿದೆ. ಬೆಳಗಾವಿ ಡಿಸಿ ಕಚೇರಿ ಎದುರು ರೈತಮುಖಂಡರಾದ ಕುರುಬೂರ ಶಾಂತಕುಮಾರ, ಸಿದ್ದಗೌಡ ಮೋದಗಿ, ಚೂನಪ್ಪಾ ಪೂಜಾರಿ ನೇತೃತ್ವದಲ್ಲಿ ರೈತರು ಅಹೋರಾತ್ರಿ ಧರಣಿ ನಡೆಸಿದರು. ಕಬ್ಬಿನ ದರ ನಿಗದಿ ಮತ್ತು ಕಬ್ಬಿನ ಬಾಕಿ ಬಿಲ್ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳದಲ್ಲೇ ಊಟ, ಭಜನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

6.ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ ಅಂತ ಮಾಜಿ ಡಿಸಿಎಂ ಆರ್​. ಅಶೋಕ್​ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವ್ರು ಮತ್ತೆ ಸಿದ್ದರಾಮಯ್ಯ ಫಾರಿನ್ ಟೂರ್ ಹೋಗ್ತಿದ್ದಾರೆ. ಸಿದ್ದರಾಮಯ್ಯ ಪ್ರವಾಸ ಹೋದಾಗಲೆಲ್ಲಾ ಭೂಕಂಪಗಳಾಗಿವೆ. ಸರ್ಕಾರ ದೇವೇಗೌಡ, ಕುಮಾರಸ್ವಾಮಿ ಅವರಿಂದ ನಡೆಯುತ್ತಿಲ್ಲಾ ಸಿದ್ದರಾಮಯ್ಯ ಅವರಿಂದ ಸರ್ಕಾರ ನಡೆಯುತ್ತದೆ ಎಂಬ ಮೇಸೇಜ್ ಕಳಿಸುವ ಕೆಲಸವಿದು ಅಂತ ಹೇಳಿದ್ದಾರೆ.

7. ಚೆನ್ನೈನ ಡಾ.ರೇಲಾ ಇನ್‌ಸ್ಟಿಟ್ಯೂಟ್‌ ಅಂಡ್ ಮೆಡಿಕಲ್‌ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಡೆದಾಡುವ ದೇವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ. ಅವರ ಆರೋಗ್ಯದಲ್ಲಾಗುತ್ತಿರುವ ತೀವ್ರಗತಿಯ ಸುಧಾರಣೆ ಕಂಡು ಆಸ್ಪತ್ರೆಯ ವೈದ್ಯರೇ ನಿಬ್ಬೆರಗಾಗಿದ್ದಾರೆ. ಯಶಸ್ವಿ ಶಸ್ತ್ರಚಿಕಿತ್ಸೆ ನಂತ್ರ ಐಸಿಯುನಲ್ಲಿಟ್ಟು, ಚಿಕಿತ್ಸೆ ನೀಡುತ್ತಿದ್ದಾರೆ .ಶ್ರೀಗಳು ಐಸಿಯುನಲ್ಲಿದ್ದರೂ ಶಿವಪೂಜೆಗೆ ಹಠ ಹಿಡಿದಿದ್ದಾರೆ. ಆದ್ರೆ, ಐಸಿಯುನಲ್ಲಿ ಶಿವಪೂಜೆ ಸಾಧ್ಯವಿಲ್ಲ. ಹೀಗಾಗಿ, ವಾರ್ಡ್‌ಗೆ ಸ್ಥಳಾಂತರವಾದ ಬಳಿಕ ಅವಕಾಶ ಕಲ್ಪಿಸುವುದಾಗಿ ಆಸ್ಪತ್ರೆ ಆಡಳಿತ ಮಂಡಳಿ ಹೇಳಿದೆ

8. ನಾಡದ್ರೋಹಿ ಎಂಇಎಸ್‌ ಮತ್ತೆ ಕ್ಯಾತೆ ತೆಗೆದಿದೆ. ಇಂದಿನಿಂದ ಚಳಿಗಾಲ ಅಧಿವೇಶನ ಆರಂಭವಾಗಲಿದೆ. ಇದಕ್ಕೆ ಪ್ರತಿಯಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ, ಮಹಾಮೇಳಾವ್ ನಡೆಸಲು ಮುಂದಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ಬೆಳಗಾವಿ ಟಿಳಕವಾಡಿಯ ವ್ಯಾಕ್ಷಿನ್ ಡಿಪೋದಲ್ಲಿ ಮಹಾಮೇಳಾವ್​ ಆಯೋಜಿಸಿದ್ದು, ಮಹಾರಾಷ್ಟ್ರದ ಮುಖಂಡರಾದ ಎಂ.ಪಿ. ಧನಂಜಯ, ಶಾಸಕ ಹಸನ್ ಮುಷರೀಪ್, ವಿರೋಧ ಪಕ್ಷದ ನಾಯಕ ಧನಂಜಯ ಮುಂಡೆಗೆ ಆಹ್ವಾನ ನೀಡಿದೆ. ಆದ್ರೆ ಮಹಾಮೇಳಾವ್‌ಗೆ ಬೆಳಗಾವಿ ಪೊಲೀಸರು ನಿರಾಕರಿಸಿದ್ದಾರೆ.

9. ಭಕ್ತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಸಿದ್ದಗಂಗಾ ಮಠದ ಕಿರಿಯಶ್ರೀಗಳು ಕೂಡ ಹೇಳಿದ್ದಾರೆ. ಭಕ್ತರು ಆಸ್ಪತ್ರೆಗೆ ಬರುವ ಅವಶ್ಯಕತೆ ಇಲ್ಲ. ಶೀಘ್ರದಲ್ಲಿಯೇ ಸ್ವಾಮೀಜಿ ಮಠಕ್ಕೆ ವಾಪಸ್‌ ಆಗಲಿದ್ದಾರೆ ಅಂತ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ವೈದ್ಯರ ನಿರೀಕ್ಷೆಗಿಂತಲೂ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇದರಿಂದ ಅಚ್ಚರಿಗೊಂಡಿರುವ ಡಾ.ರೇಲಾ ಇನ್‌ಸ್ಟಿಟ್ಯೂಟ್‌ ಅಂಡ್‌ ಮೆಡಿಕಲ್‌ ಸೆಂಟರ್‌ ಮುಖ್ಯಸ್ಥ ಡಾ.ಮೊಹಮ್ಮದ್‌ ರೇಲಾ ಅವರು ಸ್ವಾಮೀಜಿಯ ಆರೋಗ್ಯ ರಹಸ್ಯ ಕುರಿತು ಪುಸ್ತರ ಬರೆಯಲು ಆಲೋಚಿಸಿದ್ದಾರೆ.

10. ಕೋಲಾರದ ಪ್ರವಾಸಿ ಮಂದಿರ ಎದುರು ಆಯೋಜಿಸಿದ್ದ 531 ನೇ ಕನಕ ಜಯಂತಿ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ರು. ಬಳಿಕ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ಸಿದ್ದರಾಮಯ್ಯರ ಚಾಮುಂಡೇಶ್ವರಿ ಸೋಲು ನೆನೆದು ಭಾವುಕರಾದ್ರು. ಮಾಜಿ ಸಿಎಂ ದೇವರಾಜು ಅರಸು ನಂತರ ರಾಜ್ಯಕ್ಕೆ ಜನಪರ ಕೊಡುಗೆ ನೀಡಿದ ನಾಯಕ ಎಂದ್ರೆ ಸಿದ್ದರಾಮಯ್ಯ. ಅವರನ್ನೇ ಚಾಮುಂಡೇಶ್ವರಿಯಲ್ಲಿ ಸಂಚು ರೂಪಿಸಿ ಸೋಲಿಸಿದರು.

11.ರಮೇಶ್‌ಕುಮಾರ್ ಬಳಿಕ ಮಾತಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಮೊದಲಿಗೆ ಮೇರು ಧನಿಯಲ್ಲಿ ಗುಡುಗಿದ್ರು. ಯಾರು ಹೀಗೆ ಹುಟ್ಟಬೇಕು ಅಂತ ಕೇಳಿಕೊಂಡು ಬಂದಿರುವುದಿಲ್ಲ. ಬೆಳೆದು ದೊಡ್ಡವರಾಗಿ ಮಹನೀಯರಾದ ಮೇಲೆ ಅವ್ರ ಜಯಂತಿ ಆಚರಣೆ ಮಾಡಲಾಗುತ್ತೆ. ಅದಕ್ಕೆ ಟಿಪ್ಪು ಸುಲ್ತಾನ್ ಮತ್ತು ಕನಕದಾಸರ ಜಯಂತಿ ಆಚರಣೆ ಮಾಡ್ತೀವಿ ಎಂದರು.

12. ಮಂಗಳೂರಿನ ಬಂಟ್ವಾಳದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ವೇಳೆ ಕಾಂಗ್ರೆಸ್-ಬಿಜೆಪಿ ನಡುವೆ ವಾಗ್ವಾದ ನಡೆದಿದೆ.. ಸರ್ಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಸ್ತಕ್ಷೇಪ ಮಾಡುತ್ತಿದೆ ಅಂತ ಆರೋಪಿಸಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕಾರ್ಯಕ್ರಮವನ್ನ ವಿರೋಧಿಸಿದ್ರು.. ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದೆ..

13. ಹುಬ್ಬಳ್ಳಿಯ ಇಟ್ಟಿಗಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಚಾಲಕ ಮತ್ತು ಲಾರಿ ಚಾಲಕ ಮಾರಾಮಾರಿ ನಡೆಸಿದ್ದಾರೆ. ಓವರ್ಟೆಕ್​ ಮಾಡುವ ವಿಷಯಕ್ಕೆ ಸಂಭಂದಪಟ್ಟಂತೆ ರಸ್ತೆ ನಡುವೆ ಚಪ್ಪಲಿಯಿಂದ ಹೊಡೆದಾಟ ನಡೆಸಿದ್ದಾರೆ. ಇದ್ರಿಂದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕೆಲಹೊತ್ತು ಟ್ರಾಫಿಕ್​ಜಾಮ್ ಉಂಟಾಗಿತ್ತು.

14. 2 ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಹಾಲಯ್ಯ ಹಿರೇಮಠ ಮೃತ ದುರ್ದೈವಿ. ಮತ್ತೊಬ್ಬ ಬೈಕ್​ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತಿದ್ದಾನೆ.

15.ದಾವಣಗೆರೆ ಬಳಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನ ರಕ್ಷಣೆ ಮಾಡಲಾಗಿದೆ. ಬೆಂಗಳೂರಿನಿಂದ ಜಾನುವಾರುಗಳನ್ನ ಲಾರಿಯಲ್ಲಿ ತುಂಬಿಕೊಂಡು ಹೋಗಲಾಗುತಿತ್ತು. ಈವೇಳೆ ದಾಲಿ ನಡೆಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಿ 17ಕ್ಕೂ ಹೆಚ್ಚು ಜಾನುವಾರುಗಳನ್ನ ರಕ್ಷಣೆ ಮಾಡಿದ್ದಾರೆ.

16.ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಬಗ್ಗೆ ಪರ - ವಿರೋಧ ನಿಲುವು ಹಲವು ವರ್ಷಗಳಿಂದ ಕೇಳಿಬರುತ್ತಿವೆ. ಹಲವರು ಡಬ್ಬಿಂಗ್ ಪ್ರೋತ್ಸಾಹಿಸಿದರೆ ಕೆಲವು ವಿರೋಧಿಸುತ್ತಿದ್ದಾರೆ. ಈಗ ಮತ್ತೇ ಡಬ್ಬಿಂಗ್ ಅಲೆ ಜೋರಾಗಿದೆ. ಕನ್ನಡದಲ್ಲಿ ಡಬ್ಬಿಂಗ್‌ಗಾಗಿ ಹಕ್ಕೊತ್ತಾಯಿಸಿ ನಗರದ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಯ್ತು. ಡಬ್ಬಿಂಗ್ ವಿರೋಧಿ ಟಿವಿ ವಾಹಿನಿಗಳು ಮತ್ತು ಪರಭಾಷಾ ಚಿತ್ರವಿತರಕರ ವಿರುದ್ಧ ಬನವಾಸಿ ಬಳಗದಿಂದ ಪ್ರತಿಭಟನೆ ಹಮ್ಮಿಕೊಂಡಿತ್ತು..

17.ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ದಂಪತಿ ಲಂಡನ್ ಪ್ರವಾಸದಲ್ಲಿದ್ದಾರೆ. ಲಂಡನ್‌ನಲ್ಲಿ ಪ್ರತಿಷ್ಠಾಪಿಸಿರುವ ಬಸವಣ್ಣನ ಪ್ರತಿಮೆಗೆ ಯದುವೀರ್ ದಂಪತಿ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದ್ರು. ಲಂಡನ್‌ನ ಲ್ಯಾಂಬೆಥ್ ನಗರದ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್‌ ಯದುವೀರ್‌ಗೆ ಸಾಥ್ ನೀಡಿದ್ರು.. ಇನ್ನು ಲಂಡನ್‌ನಲ್ಲಿ ನೆಲೆಸಿರುವ ಕನ್ನಡಿಗರು ಯದುವೀರ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸಿದರು.

18. ಅಯೋಧ್ಯೆಯಲ್ಲಿ ಆದಷ್ಟು ಬೇಗ ರಾಮ ಮಂದಿರ ನಿರ್ಮಾಣವಾಗಬೇಕೆಂದು ಆಗ್ರಹಿಸಿ ದೆಹಲಿಯ ರಾಮ್​ ಲೀಲಾ ಮೈದಾನದಲ್ಲಿ ವಿಹೆಚ್‌ಪಿಯಿಂದ ಬೃಹತ್​ ಧರ್ಮಸಭೆ ಱಲಿ ನಡೆಯಿತು.. ಲೋಕಸಭಾ ಚುನಾವಣೆಗೂ ಮುನ್ನ ಕೊನೆಯ ಚಳಿಗಾಲದ ಅಧಿವೇಶನ ಮಂಗಳವಾರದಿಂದ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಬೇಕೆಂಬ ಒತ್ತಾಯ ಜೋರಾಗಿದೆ. ಆರ್​ಎಸ್​ಎಸ್​​ ಕಾರ್ಯಕಾರಿ ಮುಖ್ಯಸ್ಥ ಸುರೇಶ್​ ಭಯ್ಯಾಜಿ ಜೋಷಿ, ವಿಹೆಚ್​ಪಿ ಅಂತರ್​​ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಅಲೋಕ್​ ಕುಮಾರ್​, ವಿಹೆಚ್​ಪಿ ಅಧ್ಯಕ್ಷ ವಿಷ್ಣು ಸದಾಶಿವ ಕೋಕ್ಜೆ ಸೇರಿದಂತೆ ಅನೇಕ ಸ್ವಾಮೀಜಿಗಳು ಭಾಗವಹಿಸಿದರು.

19.ತೆಲಂಗಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಕ್ಕೆ ಇನ್ನೆರಡು ದಿನ ಬಾಕಿ ಇದೆ. ಈ ನಡುವೆ, ಅಸಾದುದ್ದೀನ್​ ಓವೈಸಿ ಪಕ್ಷ AIMIM ಪಕ್ಷವನ್ನು ತೊರೆದರೆ ಸಹಕಾರ ನೀಡುವುದಾಗಿ ಟಿಆರ್​ಎಸ್​ ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್​ ಅವರಿಗೆ ತೆಲಂಗಾಣ ಬಿಜೆಪಿ ಹೇಳಿದೆ. ಈ ಬಗ್ಗೆ ಮಾತನಾಡಿರೋ ತೆಲಂಗಾಣ ಬಿಜೆಪಿ ಘಟಕದ ಮುಖ್ಯಸ್ಥ ಡಾ. ಕೆ.ಲಕ್ಷ್ಮಣ್‌ ತೆಲಂಗಾಣದಲ್ಲಿ ಬಿಜೆಪಿ ಸಹಕಾರವಿಲ್ಲದೇ ಯಾವ ಪಕ್ಷವೂ ಅಧಿಕಾರಕ್ಕ ಬರುವುದಿಲ್ಲ ಭವಿಷ್ಯ ನುಡಿದಿದ್ದಾರೆ.

20. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೇ ಮೊದಲ ಬಾರಿಗೆ ಮಹಾಘಟಬಂಧನ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇಂದು ನಡೆಯಲಿರುವ ಈ ಸಭೆಯಲ್ಲಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭಾಗಿಯಾಗಲಿದ್ದಾರೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಒಂದು ದಿನ ಮುಂಚಿತವಾಗಿ ನಡೆಯಲಿರುವ ಸಭೆಯಲ್ಲಿ ಕೇಜ್ರಿವಾಲ್ ಭಾಗಿಯಾಗುವುದರಿಂದ ಸಾಕಷ್ಟು ಕುತೂಹಲ ಮೂಡಿಸಿದೆ.

21.ಮದ್ಯ ದೊರೆ ವಿಜಯ್​ ಮಲ್ಯರನ್ನು ಭಾರತಕ್ಕೆ ಗಡಿಪಾರು ಮಾಡುವ ಸಂಬಂಧ ಅಲ್ಲಿನ ವೆಸ್ಟ್​ಮಿನಿಸ್ಟರ್​ ಕೋರ್ಟ್​ ಇಂದು ಅಂತಿಮ ನಿರ್ಧಾರ ಪ್ರಕಟಿಸಲಿದೆ. ಕೋರ್ಟ್​ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸಿಬಿಐ ಜಂಟಿ ನಿರ್ದೇಶಕ A. ಸಾಯಿ​ ಮನೋಹರ್​ ಅವರ ನೇತೃತ್ವದ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಅಧಿಕಾರಿಗಳನ್ನೊಳಗೊಂಡ ತಂಡ ಇಗಾಗ್ಲೆ ಬ್ರಿಟನ್​ಗೆ ತೆರಳಿದೆ.

22. ನಟ ಧ್ರುವ ಸರ್ಜಾ ತಮ್ಮ ಬಾಲ್ಯದ ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬನಶಂಕರಿಯ ದೇವಗಿರಿ ದೇವರ ಸಮ್ಮುಖದಲ್ಲಿ ಕಲಾ ನಿರ್ದೇಶಕ ಅರುಣ್ ಸಾಗರ್ ನಿರ್ಮಿಸಿದ್ದ ತೆಂಗಿನ ಗರಿಯ ಹಸಿರು ಚಪ್ಪರದಡಿಯಲ್ಲಿ ಉಂಗುರ ಬದಲಾಯಿಸಿಕೊಂಡ್ರು.. ಈ ವೇಳೆ ಕುಟುಂಬದ ಆಪ್ತರು, ಚಿತ್ರರಂಗದ ಗಣ್ಯರು ಹಾಜರಿದ್ರು.. ಈ ಮೂಲಕ ತಮ್ಮ ಹದಿನಾಲ್ಕು ವರ್ಷದ ಪ್ರೀತಿಗೆ ಹೊಸ ಅರ್ಥ ಬರೆದಿದ್ದಾರೆ.ಇದಕ್ಕೂ ಮುನ್ನ ಗೋ ಪೂಜೆ ಮಂತ್ರ ಪಠನೆ ಹಾಗೂ ಶಾಸ್ತ್ರಗಳನ್ನ ನೆರವೇರಿಸಲಾಯಿತು.

23. ಅಡಿಲೇಡ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಕುತೂಹಲ ಘಟ್ಟಕ್ಕೆ ಸಾಗಿದೆ. ನಾಲ್ಕನೆ ದಿನದಾಟ ಅಂತ್ಯವಾಗಿದ್ದು, ಟೀಂ ಇಂಡಿಯಾಗೆ ಗೆಲ್ಲಲು ಇನ್ನು 6 ವಿಕೆಟ್​ಗಳು ಬೇಕಿದೆ. 323 ರನ್​ಗಳ ಟಾರ್ಗೆಟ್ ಬೆನ್ನತ್ತಿರೋ ಆಸ್ಟ್ರೇಲಿಯಾ, ಉತ್ತಮ ಆರಂಭದ ಹೊರತಾಗಿಯೂ ನಾಲ್ಕು ವಿಕೆಟ್​ಗಳನ್ನ ಕಳೆದುಕೊಂಡು ಸಂಕಷ್ಟ ಸ್ಥಿತಿಯಲ್ಲಿ ಸಿಲುಕಿದೆ. ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿದೆ. ಆಸಿಸ್ ಗೆ ಗೆಲ್ಲಲು ಇನ್ನು 219 ರನ್​ಗಳ ಅಗತ್ಯ ಇದೆ. ಇದಕ್ಕೂ ಮುನ್ನ ಭಾರತ ಎರಡನೇ ಇನ್ನಿಂಗ್ಸ್​ನಲ್ಲಿ 307 ರನ್​ಗಳಿಗೆ ಆಲೌಟ್ ಆಯಿತು.

24.ಜಮ್ಮು ಕಾಶ್ಮೀರದ ಬಾಲಕನೊಬ್ಬ ಗೂಗ್ಲಿ ಹಾಕಿ ಸ್ಪಿನ್​ ದಂತಕತೆ ಶೇನ್​ ವಾರ್ನ್​ ಅವರನ್ನ ಇಂಪ್ರೆಸ್ ಮಾಡಿದ್ದಾನೆ. ಕಣಿವೆ ರಾಜ್ಯದ ಪತ್ರಕರ್ತರೊಬ್ಬರು ಏಳು ವರ್ಷದ ಬಾಲಕ ಗೂಗ್ಲಿ ಹಾಕಿ ಬೌಲ್ಡ್ ಮಾಡಿದ ವಿಡಿಯೊವೊಂದನ್ನ ಸೋಶಿಯಲ್​ ಮೀಡಿಯಾ ಮೂಲಕ ಶೇನ್​ ವಾರ್ನ್​ಗೆ ಪೋಸ್ಟ್ ಮಾಡಿದ್ರು. ಈ ವಿಡಿಯೋವನ್ನ ನೋಡಿದ ಶೇನ್ ವಾರ್ನ್​ ಫುಲ್ ಖುಷಿಯಾಗಿ ಮೆಚ್ಚುಗೆ ವ್ಯಕ್ತಿಪಡಿಸಿದ ಸಂದೇಶವನ್ನ ಕಳುಹಿಸಿದ್ದಾರೆ. ಸದ್ಯ ಈ ವಿಡಿಯೊ ಸಿಖಪಟ್ಟೆ ವೈರಲ್ ಆಗಿದ್ದು ಇದು ಶತಮಾನದ ಎಸೆತ ಅಂತ ಕರೆಯಲಾಗುತ್ತಿದೆ.

25.ಭಾರತ ಮಹಿಳಾ ಕ್ರಿಕೆಟ್​ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮಹಿಳಾ ಬಿಗ್​ ಬ್ಯಾಶ್ ಟಿ20 ಲೀಗ್​ನಲ್ಲಿ ವೇಗದ ಅರ್ಧ ಶತಕ ಬಾರಿಸಿ ಮಿಂಚಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ಲೀಗ್​ನಲ್ಲಿ ಮಂಧಾನ ಕೇವಲ 24 ಎಸೆತದಲ್ಲಿ ಆರ್ಧ ಶತಕ ಸಿಡಿಸಿದ್ರು. ಒಟ್ಟು 49 ಎಸೆತದಲ್ಲಿ 13 ಬೌಂಡರಿ ಬಾರಿಸಿ 69 ರನ್​ ಗಳಿಸಿದರು.

26. ಟೀಂ ಇಂಡಿಯಾದ ಡೆಲ್ಲಿ ಡ್ಯಾಶರ್ ರಿಷಭ್ ಪಂತ್ ಆಸಿಸ್​ ವಿರುದ್ಧ ಎರಡನೇ ಇನ್ನಿಂಗ್ಸ್​ನಲ್ಲಿ ಭರ್ಜರಿ ಬ್ಯಾಟಿಂಗ್ ಗಮನ ಸೆಳೆದಿದ್ದಾರೆ. ನಾಲ್ಕನೆ ದಿನದಾಟದ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ರಿಷಭ್ ಪಂತ್ ಆಸಿಸ್ ಸ್ಪಿನ್ನರ್ ನಾಥಾನ್ ಲಿಯಾನ್ ಅವರ ಒಂದು ಓವರ್​ನಲ್ಲಿ 18 ರನ್​ ಬಾರಿಸಿದ್ರು. ರಿಷಭ್ ಆಟಕ್ಕೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.

27. ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ತಂಡದ ಮಾಜಿ ನಾಯಕ ಎಂ.ಎಸ್​.ಧೋನಿ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ನನ್ನೆಯಷ್ಟೆ ಕ್ರಿಕೆಟ್​ಗೆ ವಿದಾಯ ಹೇಳಿರುವ ಗಂಭೀರ್ ಸಂದರ್ಶನವೊಂದರಲ್ಲಿ ಮಾಜಿ ನಾಯಕ ಧೋನಿ ಅವರ ನಾಯತ್ವದ ಬಗ್ಗೆ ಕಿಡಿಕಾರಿದ್ದಾರೆ. 2012ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಫಿಟ್ ಆಗಿದ್ರು ತಂಡದಿಂದ ಕೈಬಿಟ್ಟಿದ್ದು ನನಗೆ ಶಾಕ್ ಆಗಿತ್ತು ಎಂದಿದ್ದಾರೆ.

28. ರಣಜಿ ಟೂರ್ನಿಯಲ್ಲಿ ಜಾರ್ಖಂಡ್ ತಂಡ ಒಡಿಶಾ ವಿರುದ್ಧ 2 ರನ್ ಗಳ ರೋಚಕ ಗೆಲುವು ಪಡೆದಿದೆ. ರಾಂಚಿಯಲ್ಲಿ ನಡೆದ ಸಿ ಗುಂಪಿನ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ಒಡಿಶಾ 260 ರನ್​ಗಳ ಸವಾಲು ಪಡೆದಿತ್ತು. ಒಂದು ಹಂತದಲ್ಲಿ ಒಡಿಶಾ 8 ವಿಕೆಟ್ ನಷ್ಟ್ಕಕೆ 154 ರನ್​ ಗಳಿಸಿ ಸಂಕಷ್ಟದಲ್ಲಿತ್ತು. ತಂಡದ ಬ್ಯಾಟ್ಸ್​ಮ್​ ಸೇನಾಪತಿ ನರೆವಿನಿಂದ ಗೆಲುವಿನ ಸಮೀಪಕ್ಕೆ ಸಾಗಿತ್ತು ಆದರೆ ಕೊನೆಯ ವಿರೋಚಿತ ಸೋಲು ಅನುಭವಿಸಿತು.

29. ಗೋಲ್ಡನ್​ ಸ್ಟಾರ್ ಗಣೇಶ್​ ಅಭಿನಯದ 99 ಸಿನಿಮಾಗೆ ಜಾಕಿ ಭಾವನ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.. ಈ ಹಿಂದೆ ರೋಮಿಯೋ ಸಿನಿಮಾದಲ್ಲಿ ಒಟ್ಡಿಗೆ ನಟಿಸಿದ್ದ ಈ ಜೋಡಿ ಮತ್ತೊಮ್ಮೆ ಪ್ರೇಕ್ಷಕರನ್ನ ರಂಜಿಸೋಕೆ ಬರ್ತಿದೆ.. ತಮಿಳಿನ ಸೂಪರ್ ಹಿಟ್ 96 ರೀಮೇಕ್ ಆಗಿರೋ 99 ಚಿತ್ರಕ್ಕೆ ಪ್ರೀತಂ ಗುಬ್ಬಿ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.. ಕೋಟಿ ರಾಮು ನಿರ್ಮಾಣದ ಈ ಸಿನಿಮಾ ಮುಹೂರ್ತ ಇತ್ತೀಚೆಗೆ ನಗರದ ದೇವಸ್ಥಾನವೊಂದರಲ್ಲಿ ನೆರವೇರಿದ್ದು, ಶೀಘ್ರದಲ್ಲೇ ಶೂಟಿಂಗ್ ಶುರುವಾಗಲಿದೆ..

30.ದರ್ಶನ್​, ಸುದೀಪ್​ ಮದಕರಿನಾಯಕ ಸಿನಿಮಾದಲ್ಲಿ ನಟಿಸೋಕು ಮೊದ್ಲೆ ದುರ್ಗದ ಮತ್ತೊಬ್ಬ ನಾಯಕರ ಕುರಿತಾದ ಚಿತ್ರಕ್ಕೆ ಚಾಲನೆ ಸಿಕ್ಕಿದೆ.. ಚಿತ್ರದುರ್ಗದ ಪಾಳೇಗಾರನಾದ ಬಿಚ್ಚುಗತ್ತಿ ಭರಮಣ್ಣ ನಾಯಕನ ಕುರಿತಾದ ಬಿಚ್ಚುಗತ್ತಿ ಅನ್ನೋ ಸಿನಿಮಾ ಮುಹೂರ್ತ ನೆರವೇರಿದ್ದು, ದರ್ಶನ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದಾರೆ.. ಹಾಸ್ಯನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಭರಮಣ್ಣ ನಾಯಕನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ..ಹರಿಸಂತು ನಿರ್ದೇಶನದ ಬಿಚ್ಚುಗತ್ತಿ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಲಿದ್ದಾರೆ..

31.ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾ ಚಿತ್ರೀಕರಣ ಇಂದಿನಿಂದ ಶುರುವಾಗಿದೆ.. ಕಾರು ಅಪಘಾತದಲ್ಲಿ ಕೈಗೆ ಪೆಟ್ಟು ಮಾಡಿಕೊಂಡಿದ್ದ ದಚ್ಚು, ಇತ್ತೀಚೆಗೆ ಯಜಮಾನ ಚಿತ್ರದ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದರು. ಇಂದಿನಿಂದ ಒಡೆಯನ ದರ್ಬಾರ್ ಶುರುವಾಗಿದ್ದು, ಎಂ ಡಿ ಶ್ರೀಧರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಾಣದ ಈ ಚಿತ್ರಕ್ಕೆ ರಾಘವಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

32.ಗಣರಾಜ್ಯೋತ್ಸವಕ್ಕೆ ಮಣಿಕರ್ಣಿಕಾ ಸಿನಿಮಾ ರಿಲೀಸ್​ ಅನುಮಾನ ಅನ್ನೋ ಸುದ್ದಿ ಬಾಲಿವುಡ್ ಗಲ್ಲಿಗಳಲ್ಲಿ ಹರಿದಾಡ್ತಿದೆ.. ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಜೀವನಾಧರಿತ ಈ ಚಿತ್ರದಲ್ಲಿ ಕಂಗನಾ ರಾಣಾವತ್, ಲಕ್ಷ್ಮೀ ಬಾಯಿ ಪಾತ್ರ ಮಾಡ್ತಿದ್ದಾರೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಈ ಐತಿಹಾಸಿಕ ಚಿತ್ರಕ್ಕೆ ಕಥೆ ಬರೆದಿದ್ದು, ಕ್ರಿಶ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ತಡವಾಗ್ತಿರೋದ್ರಿಂದ ರಿಲೀಸ್​ ಕೂಡ ತಡವಾಗೋ ಸಾಧ್ಯತೆಯಿದೆಯಂತೆ.

33.ಬಾಲಿವುಡ್​ ನಡ ಶಾಹಿದ್ ಕಪೂರ್ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ ಅನ್ನೋದೆಲ್ಲಾ ಸುಳ್ಳು ಸುದ್ದಿ ಅಂತ ಕುಟುಂಬ ಸದಸ್ಯರು ಸ್ಪಷ್ಟನೆ ನೀಡಿದ್ದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.. ಕಳೆದೊಂದು ವಾರದಿಂದ ಶಾಹಿದ್ ಉದರ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡಿತ್ತು.. ಕೊನೆಗೂ ಶಾಹಿದ್ ಕುಟುಂಬ ಸದಸ್ಯರು ತುಟಿ ಬಿಚ್ಚಿದ್ದು, ಇದೆಲ್ಲಾ ಸುಳ್ಳು ಸುಖಾಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಅಂತ ವಿನಂತಿಸಿಕೊಂಡಿದ್ದಾರೆ.

34.ಸಿಎಂ ಕುಮಾರಸ್ವಾಮಿ ರಾಜ್ಯದ ಹಲವೆಡೆ ರೈತರಿಗೆ ಸಾಲ ಋಣಮುಕ್ತ ಪ್ರಮಾಣ ಪತ್ರ ನೀಡಿದ್ದಾರೆ. ಆದ್ರೆ ಸಾಲ ವಸೂಲಾತಿ ನೆಪದಲ್ಲಿ ರೈತರಿಗೆ ಕಿರುಕುಳ ಮುಂದುವರಿದಿದ್ದು, ಖಾಸಗಿ ಬ್ಯಾಂಕುಗಳು ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡ್ತಿವೆ. ರಾಯಚೂರು ಜಿಲ್ಲೆ ಸಿಂಧನೂರಿನ ವೀರೇಶಯ್ಯ ಎನ್ನುವ ರೈತ ಐಸಿಐಸಿಐ ಬ್ಯಾಂಕನಿಂದ ೨೦೧೧ರಲ್ಲಿ ಸಾಲ ಪಡೆದಿದ್ದ. ಕಳೆದ ಮೂರು ತಿಂಗಳ ಹಿಂದಷ್ಟೇ ಮರುಪಾವತಿಯೂ ಮಾಡಿದ್ದ. ಆದ್ರೆ ಮರುಪಾವತಿ ಮಾಡಿದ್ದಕ್ಕೆ ಎನ್‌ಓಸಿ ನೀಡದೇ ಮತ್ತೇ ಮರುಪಾವತಿಗಾಗಿ ರೈತನ ಮೇಲೆ ಕೇಸ್ ದಾಖಲಿಸಿ ಬೆಂಗಳೂರು ಕೋರ್ಟ್ ಮೂಲಕ ನೋಟಿಸ್ ನೀಡಿದ್ದಾರೆ. ಇದ್ರಿಂದ ದಿಕ್ಕು ತೋಚದ ರೈತ ಮಾದ್ಯಮದ ಮೊರೆ ಹೋಗಿದ್ದು ನ್ಯಾಯ ಕೊಡಿಸಿ ಅಂತ ಮನವಿ ಮಾಡಿಕೊಂಡಿದ್ದಾನೆ.

35.ಮೈಸೂರಿನಲ್ಲಿ ವಿಶೇಷ ಮ್ಯಾರೇಜ್ ನೇರವೇರಿದೆ. ಮಾತು ಬಾರದ ಶಶಿಕಲಾ ಹಾಗೂ ಒಂದು ಕಾಲಿಲ್ಲದ ಮಾದೇಶ್ ಅಗ್ರಹಾರದ ಹೊಸಮಠದಲ್ಲಿ ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದಕ್ಕೆ ಶರಣು ವಿಶ್ವ ವಚನ ಫೌಂಡೆಶನ್ ಸಾಕ್ಷಿಯಾಗಿದ್ದು, ಇಬ್ಬರು ವಿಶೇಷ ಚೇತನರ ಮದುವೆಯನ್ನ ವಚನ ಮಾಂಗಲ್ಯದ ಮೂಲಕ ಮಾಡಲಾಯ್ತು.

36.ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆಯಲ್ಲಿರುವ ಶ್ರೀರಾಮ ವಿದ್ಯಾ ಕೇಂದ್ರದ ಕ್ರೀಡೋತ್ಸವದಲ್ಲಿ ಆನಂದ್ ಸಿಂಗ್ ಭಾಗಿಯಾಗಿದ್ದರು. ತಡರಾತ್ರಿವರೆಗೂ ಕ್ರೀಡೋತ್ಸವದಲ್ಲಿ ಪಾಲ್ಗೊಂಡು ಕಲ್ಕಡ್ಕ ಭಟ್ ಜೊತೆ ಕಾಣಿಸಿಕೊಂಡಿದ್ದು, ಕಾಂಗ್ರೆಸ್​​ ಪಕ್ಷದಲ್ಲಿ ಸಂಚಲನ ಮೂಡಿಸಿದೆ.

37.ಆಂಧ್ರ ಮತ್ತು ತೆಲಗಾಣದಲ್ಲಿ ಅಂತರ್‌ರಾಜ್ಯಕಳ್ಳತನ ಮಾಡ್ಕೊಂಡು ಜೀವನ ಸಾಗಿಸುತ್ತಿದ್ರು. ಖದೀಮರು ಕಲಬುರಗಿಯ ರೇವಣಸಿದ್ದೇಶ್ವರ ಕಾಲೋನಿಯ ಧನಂಜಯ್ ಅವರ ಮನೆಗೆ ಕನ್ನ ಹಾಕಿ ಎಸ್ಕೇಪ್ ಆಗಿದ್ರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಂತಾರಾಜ್ಯ ಕುಖ್ಯಾತ ಮನೆಗಳರ ಹೆಡೆಮುರಿ ಕಟ್ಟೋದ್ರಲ್ಲಿ ಸಕ್ಸಸ್​​ ಆಗಿದ್ದಾರೆ.

38.ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಕಾರ್ಪೊರೇಷನ್ ಬ್ಯಾಂಕ್. ಇಲ್ಲಿನ ಮ್ಯಾನೇಜರ್‌ ಉಮಾಪತಿ ಮಾಡಬಾರದ ಕೆಲ್ಸ ಮಾಡಿ, ರೈತರ ಹಿಡಿಶಾಪಕ್ಕೆ ಗುರಿಯಾಗಿದ್ದಾನೆ. ಕೆಲ ಮಧ್ಯವರ್ತಿಗಳ ಜೊತೆ ಸೇರಿ, ರೈತರ ಸಾಲದ ದುಡ್ಡನ್ನ ಗುಳುಂ ಮಾಡಿದ್ದಾನೆ. ಸುತ್ತಮುತ್ತಲ ಗ್ರಾಮಗಳ ರೈತರು, ಜಮೀನು ಪಹಣೆ ದಾಖಲೆಗಳನ್ನ ಅಡವಿಟ್ಟು, ಸಾಲ ಪಡೆದಿದ್ದಾರೆ. ಲೋನ್‌ ಬಿಡುಗಡೆ ಮಾಡುತ್ತಿದ್ದಂತೆ, ಮ್ಯಾನೇಜರ್‌ ಉಮಾಪತಿಯ ವರ್ಗಾವಣೆಯೂ ಆಗಿದೆ. ಇದೇ ಸಂದರ್ಭವನ್ನಬಳಸಿಕೊಂಡ ಅಮ್ಮುಟೂರ್‌ ಟ್ರಾವಲ್ ಏಜೆನ್ಸಿ ಮಾಲೀಕ ಧನಂಜಯ್ ಎಂಬಾದ, ರೈತರಿಂದ ಕಮಿಷನ್ ಪಡೆದು, ಸಾಲದ ಹಣವನ್ನೂ ಪೂರ್ತಿಯಾಗಿಯೂ ನೀಡದೆ ಸುಮಾರು ಒಂದೂವರೆ ಕೋಟಿ ಹಣವನ್ನ ವಂಚಸಿದ್ದಾನೆ.

39.28 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಆದ್ರೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇದಕ್ಕೆಲ್ಲಾ ಕ್ಯಾರೆ ಅಂತಿಲ್ಲ. ಹೀಗಾಗಿ ಇಂದು ಪೊಲೀಸರು ಹಾಗೂ ರೈತರ ನಡುವೆ ಜಟಾಪಟಿ ನಡೆದಿದೆ. ಜಿಲ್ಲಾಡಳಿತ ಪ್ರತಿ ಗುಂಟೆಗೆ 13 ಸಾವಿರ ಅಂತ ಪರಿಹಾರ ನಿಗದಿ ಮಾಡಲಾಗಿತ್ತು. ಆದ್ರೀಗ ಕೇವಲ 3500ರೂಗಳಿಗೆ ಇಳಿಕೆ ಮಾಡಿದ್ದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ರೈತರು ಅಹೋರಾತ್ರಿ ಧರಣಿ ಮಾಡಿದ್ರೂ ಜಿಲ್ಲಾಡಳಿತ ಸೌಜನ್ಯಕ್ಕೂ ಬಂದಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

40.ಉತ್ತರ ಕರ್ನಾಟಕದ ಶಕ್ತಿ ಕೇಂದ್ರದಲ್ಲಿ ದೋಸ್ತಿ ಸರ್ಕಾರದ ಮೊದಲ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಅಧಿವೇಶನದ ಮೇಲೆ ಉತ್ತರ ಕರ್ನಾಟಕದ ಕಬ್ಬು ಬೆಳೆದ ರೈತ ಹೋರಾಟದ ಕರಿನೆರಳು ಆವರಿಸಿದೆ. ಬೆಳಗಾವಿ ಡಿಸಿ ಕಚೇರಿ ಎದುರು ರೈತರ ಹೋರಾಟ 3ನೇ ದಿನ ಪೂರೈಸಿದ್ದು, ಅಧಿವೇಶನದ ಮೊದಲ ದಿನವೇ ರೈತರು ಡಿಸಿ ಕಚೇರಿಯಿಂದ ಚೆನ್ನಮ್ಮ ವೃತ್ತದ ವರೆಗೂ ಧೀಡ್​​​ ನಮಸ್ಕಾರ ಹಾಕಿದ್ರು. ಅಲ್ದೇ, ಇಡೀ ದಿನ ವಿನೂತನವಾಗಿ ಪ್ರತಿಭಟನೆ ನಡೆಸಿದ ರೈತರು ವಿನೂತನ ಪ್ರತಿಭಟನೆಗಳನ್ನ ನಡೆಸಿದರು.

41.ಬೆಳಗಾವಿ ಸುವರ್ಣಸೌಧಲ್ಲಿ ಇಂದಿನಿಂದ ವಿಧಾನಮಂಡಲದ ಅಧಿವೇಶನ ಪ್ರಾರಂಭವಾಗಿದೆ. ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪವನ್ನ ಸೂಚಿಸಲಾಯ್ತು. ಮಾಜಿ ಪ್ರಧಾನಿ ವಾಜಪೇಯಿ, ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಷರೀಪ್, ಕೇಂದ್ರ ಸಚಿವರಾಗಿದ್ದ ಅನಂತಕುಮಾರ್, ಮಾಜಿ ಶಾಸಕ ಹೆಚ್.ಎಸ್.ಪ್ರಕಾಶ್ ಹಾಗೂ ಅಂಬರೀಶ್, ಎಂ.ಪಿ.ರವೀಂದ್ರರ ನಿಧನದ ಬಗ್ಗೆ ಸ್ಪೀಕರ್ ಸಂತಾಪ ನಿರ್ಣಯವನ್ನ ಮಂಡಿಸಿದ್ರು. ಇದಕ್ಕೆ ಸಿಎಂ ಕುಮಾರಸ್ವಾಮಿ ಹಾಗೂ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಅನುಮೋದಿಸಿದ್ರು. ಸಿಎಂ ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಬಿಎಸ್ ವೈ, ಡಿಕೆಶಿ, ಎನ್.ಮಹೇಶ್ ಸೇರಿದಂತೆ ಹಲವರು ಅಗಲಿದ ನಾಯಕರ ಬಗ್ಗೆ ತಮ್ನ ನೆನಪಿನ ಬುತ್ತಿಯನ್ನ ಬಿಚ್ಚಿಟ್ಟರು. ಸಂತಾಪ ಸೂಚನೆಯಡಿ ಹಿರಿಯ ಸದಸ್ಯರ ಸ್ಮರಣೆಯ ಬಳಿಕ ಸದನವನ್ನ ನಾಳೆಗೆ ಮುಂದೂಡಲಾಯ್ತು.

42.ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನಲ್ಲಿರುವ ಬಸವ ತೀರ್ಥ ಮಠದ ಮಠಾಧೀಶರು. ಹುಮನಾಬಾದ್ ತಾಲೂಕಿನ ಹಲವು ಗ್ರಾಮಗಳಲ್ಲಿ ಈ ಮಠಕ್ಕೆ ಸೇರಿದ್ದ ಜಮೀನಿದೆ. ಬೋರಂಪಳ್ಳಿಯಲ್ಲಿರುವ 12 ಎಕರೆ ಜಮೀನು ಅಕ್ರಮವಾಗಿ ಪಡೆದಿದ್ದಾರೆ ಎಂದು ಆರ್ ಟಿಐ ಕಾರ್ಯಕರ್ತ ಆರೋಪ ಮಾಡಿದ್ದಾರೆ. ಅಷ್ಟೇ ಹೈ ಕೋರ್ಟ್ ಆದೇಶವನ್ನು ತಿದ್ದಿ ಅಕ್ರಮವಾಗಿ ಜಾಗವನ್ನ ಕಬಳಿಸಿದ್ದೂ ಅಲ್ಲದೇ, ತಮ್ಮನ್ನು ಕೊಲ್ಲಲು ಸುಪಾರಿ ಕೊಟ್ಟಿದ್ದಾರೆ ಅಂತಾ ಆರೋಪಿಸಿದ್ದಾರೆ.

43.ನವದೆಹಲಿಯ ಪಾರ್ಲಿಮೆಂಟ್ ಹೌಸ್‌ನಲ್ಲಿ ನಡೆದ ಸಭೆಯಲ್ಲಿ ಮಾಜಿ ಪ್ರಧಾನಿಗಳಾದ ದೇವೇಗೌಡ, ಮನಮೋಹನ್ ಸಿಂಗ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರಾದ ಮಮತಾ ಬ್ಯಾನರ್ಜಿ, ಅಬ್ದುಲ್ ಫಾರೂಕ್, ಡಿಎಂಕೆ ವತಿಯಿಂದ ಎಂ.ಕೆ.ಸ್ಟಾಲಿನ್, ಅಹಮದ್ ಪಟೇಲ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಶರದ್ ಪವಾರ್ ಸೇರಿದಂತೆ ದೇಶದ 17 ವಿವಿಧ ಪಕ್ಷಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದರು.

44.ಟೀಂ ಇಂಡಿಯಾ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ 31 ರನ್​ಗಳ ಜಯಭೇರಿ ಬಾರಿಸಿದೆ. ಕೊಹ್ಲಿ ತಂಡದ ಗೆಲುವಿಗೆ ಪ್ರಮುಖವಾಗಿ ಕಾರಣರಾಗಿದ್ದು ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ ಪೂಜಾರ. ಆಡಿದ ಎರಡು ಇನ್ನಿಂಗ್ಸ್​ಗಳಲ್ಲೂ ರನ್ ಮಳೆ ಸುರಿಸಿದ ಈ ಸೌರಾಷ್ಟ್ರ ಸ್ಟಾರ್ ಆಸಿಸ್ ಲೆಕ್ಕಾಚಾರಗಳನ್ನೆಲ್ಲ ಉಲ್ಟಾ ಮಾಡಿದರು.

45.ರಾಜ್ಯದಲ್ಲಿ ಮತ್ತೊಮ್ಮೆ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಶುರುವಾಗುವ ಎಲ್ಲಾ ಲಕ್ಷಣಗಳು ಗೋಚರಿಸಿವೆ. ಯಾಕಂದ್ರೆ ರಾಜ್ಯದ ಪ್ರಸ್ತಾವನೆಯನ್ನ ಕೇಂದ್ರ ತಿರಸ್ಕರಿಸಿದೆ. ಇದ್ರ ಬೆನ್ನಲ್ಲೇ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಕೂಗು ಸದ್ದು ಮಾಡ್ತಿದ್ದು, ಬಿಜೆಪಿ ನಾಯಕರಿಗೆ ಆತಂಕ ಶುರುವಾಗಿದೆ.

46.ಶಿವರಾಮ ಕಾರಂತ ಬಡಾವಣೆಗೆ ಬಿಡಿಎ ಅಂತಿಮ ಅಧಿಸೂಚನೆ ಹೊರಡಿಸಿದೆ. ಆದರೆ ಈ ಜಾಗದಲ್ಲಿ ಎಲ್ಲಿ ನೋಡಿದರು ಮನೆ, ಕಟ್ಟಡಗಳು ತಲೆ ಎತ್ತಿವೆ. ಹೀಗಾಗಿ ಈ ಜಾಗದಲ್ಲಿ ಬಡಾವಣೆ ನಿರ್ಮಾಣ ಅಸಾಧ್ಯ ಅನ್ನೋದನ್ನು ರೈತರೇ ಹೇಳುತ್ತಿದ್ದಾರೆ. ಆದ್ರೂ ಬಡಾವಣೆ ನಿರ್ಮಾಣಕ್ಕೆ ಮುಂದಾಗಿರೋದನ್ನ ಖಂಡಿಸಿ ಅಲ್ಲಿನ ರೈತರು ಬಿಡಿಎ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ನಮ್ಮ ಪ್ರಾಣ ಹೋದ್ರು ನಮ್ಮ ಜಾಗ ಬಿಟ್ಟಿಕೊಡೋದಿಲ್ಲ ಅಂತ ಹೇಳುತ್ತಿದ್ದಾರೆ. ಆದ್ರೂ ಭೂಮಿ ಬಿಡಿ ಅಂತ 1800 ಖಾತೆದಾರರಿಗೆ BDA ನೋಟಿಸ್‌ ಜಾರಿ ಮಾಡಿದೆ.

47.ಬೆಂಗಳೂರಿನಲ್ಲಿ ‘ಹನಿ’ ಹಿಂದೆ ಹೋಗಿ ಉದ್ಯಮಿಯೊಬ್ಬರು ‘ಮನಿ’ ಕಳೆದುಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕುಪೇಂದ್ರ, ಹನಿಟ್ರ್ಯಾಪ್‌ಗೆ ಒಳಗಾದ ರಿಯಲ್ ಎಸ್ಟೇಟ್ ಉದ್ಯಮಿ.. ಭೂಮಿ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಕುಪೇಂದ್ರಗೆ ಮಹಿಳೆ ಪರಿಚಯವಾಗಿದ್ರಂತೆ. ಬಳಿಕ ಹನಿಟ್ರ್ಯಾಪ್‌ಗೆ ಬಿಳಿಸಿಕೊಂಡು 12 ಲಕ್ಷ ರೂಪಾಯಿ ದೋಚಿರುವುದಾಗಿ ಮೋಸ ಹೋಗಿರುವ ಉದ್ಯಮಿ ಆರೋಪಿಸಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಪೊಲೀಸರಿಗೆ ಉದ್ಯಮಿ ದೂರು ನೀಡಿದ್ದು, ಕೇಸ್‌ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಪೊಲೀಸರು ವಿನುತಾ ಎಂಬುವರನ್ನು ಬಂಧಿಸಿದ್ದಾರೆ. ಯತೀಶ್ ತಲೆ ಮರೆಸಿಕೊಂಡಿದ್ದು, ಪೊಲೀಸರು ಬಲೆ ಬೀಸಿದ್ದಾರೆ.

48.ಸ್ಯಾಂಡಲ್​ವುಡ್​ನಲ್ಲಿ ಮದುವೆ ಪರ್ವ ಶುರುವಾಗಿದೆ ಒಬ್ಬೊಬ್ಬರಾಗಿಯೇ ಬ್ಯಾಚ್ಯುಲರ್ ಲೈಫ್​ಗೆ ಟಾಟಾ ಹೇಳಿ ಸಾಂಸಾರಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಈ ಲಿಸ್ಟ್​ಗೆ ಹೊಸ ಸೇರ್ಪಡೆ ದೂದ್ ಪೇಡಾ ದಿಂಗಂತ್ ಹಾಗೂ ಐಂದ್ರಿತಾ ರೇ. ಚಂದನವನದ ಈ ಕ್ಯೂಟ್ ಕಪಲ್​ಹಸಮಣೆ ಏರುತ್ತಿದ್ದಾರೆ.

49.ಅದೊಂದು ನಂಬರ್‌ ಗೇಮ್‌. ತಮ್ಮಿಷ್ಟದ ನಂಬರ್‌ ಪಡೆಯಲು ಪೈಪೋಟಿಯೋ ಪೈಪೋಟಿ. ಲಕ್ಷಗಟ್ಟಲೆ ಹಣ ಸುರಿದಾದ್ರೂ ಸರಿ ನಂಗೆ ಅದೇ ನಂಬರ್‌ ಬೇಕು ಅಂತ ಹಠಕ್ಕೆ ಬಿದ್ದಿದರು. ಕಡೆಗೂ ಆ ನಂಬರ್‌ ಹರಾಜಾದ ಬೆಲೆ ಕೇಳಿದರೆ ನೀವು ಶಾಕ್ ಆಗ್ತೀರಾ. ಫ್ಯಾನ್ಸಿ ನಂಬರ್‌ವೊಂದಕ್ಕೆ ಫ್ಯಾನ್ಸಿ ಪ್ರಿಯ ಬಿಡ್‌ನಲ್ಲಿ ಕಂತೆ ಕಂತೆ ತೆತ್ತು ಖರೀದಿ ಮಾಡಿದರು.

50. ಕೂಡ ವಾರ್ಡ್‌ ನಂ 171ರಲ್ಲಿ ಗುರಪ್ಪನ ಪಾಳ್ಯ ವಾರ್ಡ್‌ನ ಕಾರ್ಪೊರೇಟರ್‌ ಮಾತ್ರ ನೇಮ್‌ ಪ್ಲೇಟ್‌ ಹಾಕೋದ್ರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹನುಮಂತೇಗೌಡ ಎಂಬಾತ ಸುಪ್ರೀಂ ಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ್ರು. ಇದಕ್ಕೆ ಸುಪ್ರೀಂ ಕೂಡ ಚಾಟಿ ಬೀಸಿದ್ದು, ಇದ್ರಿಂದ ಎಚ್ಚೆತ್ ಪಾಲಿಕೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳುವ ಯೋಜನೆಗಳಿಗೆ ಜನಪ್ರತಿನಿಧಿಗಳು ಭಾವಚಿತ್ರ ಹಾಕದಂತೆ ಆದೇಶ ಹೊರಡಿಸಿದೆ. ಆದರು ಜನಪ್ರತಿನಿಧಿಗಳು ಕ್ಯಾರೆ ಎನ್ನುತ್ತಿಲ್ಲ.

Next Story

RELATED STORIES